ಸಕಲಕಲಾವಲ್ಲಭ ನಿಂಬೆ ಹಣ್ಣಿನ ಔಷದೀಯ ಗುಣಗಳು ಮತ್ತು ಅದರ ಮಹತ್ವ

ನಿಂಬೆ ಹಣ್ಣು ದಿನ ನಿತ್ಯದ ಆಹಾರದಲ್ಲಿ ಹಾಸು ಹೊಕ್ಕಾಗಿರುವ ವಸ್ತು. ವಿಫುಲವಾಗಿ ಕೃಷಿಗೆ ಒಳಗಾಗಿರುವ ಪದಾರ್ಥ, ಬೀಜದಿಂದ ಪಡೆದ ಸಸಿಯನ್ನು ದೊಡ್ಡ ಕುಂಡಗಳಲ್ಲೂ ಬೆಳೆಸಬಹುದು. ವೇದಗಳ ಕಾಲದಿಂದಲೂ ಪ್ರಸಿದ್ಧಿ ಪಡೆದಿರುವ ನಿಂಬೆ ಹಣ್ಣು ಇಂದಿಗೂ…

lemon fruit vijayaprabha

ನಿಂಬೆ ಹಣ್ಣು ದಿನ ನಿತ್ಯದ ಆಹಾರದಲ್ಲಿ ಹಾಸು ಹೊಕ್ಕಾಗಿರುವ ವಸ್ತು. ವಿಫುಲವಾಗಿ ಕೃಷಿಗೆ ಒಳಗಾಗಿರುವ ಪದಾರ್ಥ, ಬೀಜದಿಂದ ಪಡೆದ ಸಸಿಯನ್ನು ದೊಡ್ಡ ಕುಂಡಗಳಲ್ಲೂ ಬೆಳೆಸಬಹುದು. ವೇದಗಳ ಕಾಲದಿಂದಲೂ ಪ್ರಸಿದ್ಧಿ ಪಡೆದಿರುವ ನಿಂಬೆ ಹಣ್ಣು ಇಂದಿಗೂ ಸಹ ಶುಭ ಸಮಾರಂಭಗಳಲ್ಲಿ ಉಪಯೋಗಿಸಲ್ಪಡುತ್ತದೆ. ಸುಮಾರು 4-5 ಅಡಿಗಳವರೆಗೆ ಬೆಳೆಯುವ ಈ ಸಸ್ಯದ ಎಲೆಗಳಲ್ಲಿಯೂ ಸಹ ಸುವಾಸನೆ ಇರುತ್ತದೆ. ಸಂಸ್ಕೃತದಲ್ಲಿ ‘ನಿಂಬೂಕ , ‘ಜಂಬೀರ’ ಮುಂತಾದ ಹೆಸರುಗಳನ್ನು ಪಡೆದಿರುವ ನಿಂಬೆ ರುಚಿಯಲ್ಲಿ ಹುಳಿ, ಸಿಹಿ, ಮಿಶ್ರಿತವಾಗಿದ್ದು ಜೀವಸತ್ವ ‘ಸಿ’ಯ ಆಗರ.

ನಿಂಬೆಯ ಔಷಧಿಯ ಗುಣಗಳು ಅಪಾರ. ಹಸಿವನ್ನು ಹೆಚ್ಚಿಸಿ, ರಕ್ತವನ್ನು ವೃದ್ಧಿಸಿ, ಕೊಬ್ಬನ್ನು ಕರಗಿಸಿ, ದೇಹದ ಎಲ್ಲ ವ್ಯವಸ್ಥೆಗಳ ಮೇಲೂ ಪ್ರಭಾವ ಬೀರುವ ನಿಂಬೆ ನಿಜಕ್ಕೂ ಅಮೃತಪ್ರದ, ಸೌಂದರ್ಯವರ್ಧನೆಯಿಂದ ಹಿಡಿದು ಬಾಯಾರಿಕೆ, ಮಂಡಿ ನೋವಿನವರೆಗೂ ಉಪಯುಕ್ತ.

ನಿಂಬೆ ಹಣ್ಣಿನ ಉಪಯೋಗಗಳು

Vijayaprabha Mobile App free

1. ದೇಹಕ್ಕೆ ಬೇಕಾದ ಕಬ್ಬಿಣ ಜೇನುತುಪ್ಪದಲ್ಲಿದೆ ಈ ಕಬ್ಬಿಣವನ್ನು ರಕ್ತಕ್ಕೆ ಸೇರಿಸುವ ಸಾಮರ್ಥ್ಯ ನಿಂಬೆರಸದಲ್ಲಿರುವ ‘ಸಿ’ ಜೀವಸತ್ವಕ್ಕಿದೆ. ಹೀಗಾಗಿ ನಿಂಬೆರಸ, ಜೇನು ತುಪ್ಪಗಳ ನಿಯಮಿತ ಸೇವನೆಯಿಂದ ರಕ್ತವೃದ್ಧಿಯಾಗುತ್ತದೆ.

2. ಬೇಡದ ಕೊಬ್ಬನ್ನೂ ಕರಗಿಸುವ ನೈಸರ್ಗಿಕ ಪದಾರ್ಥಗಳಲ್ಲಿ ನಿಂಬೆಗೆ ಉತೃಷ್ಟ ಸ್ಥಾನವಿದೆ. ನಿಂಬೆರಸ, ಜೇನುತುಪ್ಪವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಕೊಬ್ಬು ಕರಗಿ ದೇಹ ಪ್ರಮಾಣ ಬದ್ಧವಾಗಿರುತ್ತದೆ.

3. ಸ್ನಾನದ ಕೊನೆಯಲ್ಲಿ ಒಂದೆರಡು ತೊಟ್ಟು ನಿಂಬೆರಸವನ್ನು ನೀರಿಗೆ ಹಾಕಿ ತಲೆ ತೊಳೆದುಕೊಂಡರೆ ಸಾಕು. ಕೂದಲಿನ ಹೊಳಪು ಬಹಳ ಕಾಲದವರೆಗೂ ಇರುತ್ತದೆ.

4. ಒಂದು ಚಮಚ ನಿಂಬೆ ರಸಕ್ಕೆ ಒಂದು ಚಮಚ ಹಾಲಿನ ಕೆನೆ ಸೇರಿಸಿ ಮುಖಕ್ಕೆ ಹಚ್ಚುವುದರಿಂದ ಚರ್ಮ ಮೃದುವಾಗಿ ಹೊಳಪು ಬರುತ್ತದೆ.

5. ನಿಂಬೆಯ ಪಾನಕವನ್ನು ಮಾಡುವುದೆಂದರೆ ನಿಂಬೆ ಹಣ್ಣಿನ ರಸ ೧ ಭಾಗ, ಸಕ್ಕರೆ 3 ಭಾಗ. ನೀರು 3 ಭಾಗ ಇವೆಲ್ಲವನ್ನು ಮಿಶ್ರಣ ಮಾಡಿ ಲವಂಗ ಮತ್ತು ಕರಿಮೆಣಸಿನ ಪುಡಿಗಳನ್ನು ರುಚಿಗೆ ತಕ್ಕಷ್ಟು ಹಾಕಿ ಸೇವಿಸಲು ಬಾಯಾರಿಕೆ ನಿವಾರಿಸುವುದಲ್ಲದೆ ಹಸಿವನ್ನುಂಟು ಮಾಡಿ ಬಾಯಿ ರುಚಿಯನ್ನು ಹೆಚ್ಚಿಸುತ್ತದೆ.

6. ನಿಂಬೆಯ ಎಲೆಗೆ 1 ಚಿಟಿಕೆ ಅರಿಶಿನ ಪುಡಿಯನ್ನು ಸೇರಿಸಿ ಅರೆದು ಮುಖಕ್ಕೆ ಹಚ್ಚಲು ಮೊಡವೆ ನಿವಾರಣೆಯಾಗುತ್ತದೆ.

7. ನಿಂಬೆ ರಸವನ್ನು ಕರಗಿದ ಸಕ್ಕರೆಯೊಂದಿಗೆ ಮಿಶ್ರಣ ಮಾಡಿ ಹೆಚ್ಚು ಕೂದಲಿರುವ ಜಾಗಕ್ಕೆ ಹಚ್ಚಲು ಬೇಡವಾದ ಕೂದಲು ನಾಶವಾಗುತ್ತದೆ.

ಇದನ್ನು ಓದಿ: ಆರೋಗ್ಯಕ್ಕೆ ವರದಾನವಾಗಿರುವ ಕರಿಬೇವಿನ ಮಹತ್ವ ಮತ್ತು ಅದರ ಉಪಯೋಗ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.