ದಾಳಿಂಬೆ ಸಿಪ್ಪೆಯಿಂದ ಸೌಂದರ್ಯ ವೃದ್ಧಿ:
* ದಾಳಿಂಬೆ ಸಿಪ್ಪೆ ವೇಸ್ಟ್ ಅಲ್ಲ. ಇದು ಹಲವು ಸೌಂದರ್ಯ ಸಮಸ್ಯೆಯನ್ನು ನಿವಾರಿಸುತ್ತದೆ.
* ಹೌದು ಮುಖದಲ್ಲಿ ಮೊಡವೆ ಮತ್ತು ಗುಳ್ಳೆಗಳು ಮೂಡಿದ್ದರೆ, ದಾಳಿಂಬೆ ಸಿಪ್ಪೆಯ ಪುಡಿಗೆ ನಿಂಬೆ ರಸ ಅಥವಾ ರೋಸ್ ವಾಟರ್ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಮೊಡವೆ ನಿವಾರಣೆಯಾಗುತ್ತದೆ.
*ಈ ಪೇಸ್ಟ್ ಅನ್ನು ನಿಯಮಿತವಾಗಿ ಹಚ್ಚುತ್ತಿದ್ದರೆ ಮುಖದ ಮೇಲಿನ ಸುಕ್ಕು ನಿವಾರಣೆ ಆಗುತ್ತದೆ.
* ಎಣ್ಣೆಗೆ ದಾಳಿಂಬೆ ಸಿಪ್ಪೆಯ ಪುಡಿ ಬೆರೆಸಿ ಕೂದಲಿಗೆ ಹಚ್ಚಿ ಮಸಾಜ್ ಮಾಡಿ. ಬಳಿಕ ಸ್ನಾನ ಮಾಡಿ. ಇದು ತಲೆಹೊಟ್ಟು, ಕೂದಲು ಉದುರುವಿಕೆಯನ್ನು ತಡೆಯುತ್ತದೆ.
ಗಂಟಲು ನೋವು, ಕಾಲು ನೋವಿಗೆ ರಾಮಬಾಣ ಈರುಳ್ಳಿ ಸಿಪ್ಪೆಯ ಚಹಾ:
* ನಿಮಗೆ ಗಂಟಲು ನೋವು ಕಾಡುತ್ತಿದ್ದರೆ ಈರುಳ್ಳಿ ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ ಸೇವಿಸಿ.
* ಈರುಳ್ಳಿ ಸಿಪ್ಪೆಯನ್ನು ಹಾಕಿ ಕುದಿಸಿದ ನೀರಿನಲ್ಲಿ ಕೂದಲನ್ನು ತೊಳೆಯಿರಿ. ಇದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.
* ಕಾಲು ನೋವು ಮತ್ತು ಸ್ನಾಯುಗಳಲ್ಲಿ ನೋವಿದ್ದರೆ ರಾತ್ರಿ ಮಲಗುವ ಮುನ್ನ ಈರುಳ್ಳಿ ಸಿಪ್ಪೆಯ ಚಹಾ ಕುಡಿಯಿರಿ.
* ರಸಗೊಬ್ಬರ ತಯಾರಿಕೆಯಲ್ಲಿ ಈರುಳ್ಳಿ ಸಿಪ್ಪೆಗಳನ್ನು ಬಳಸಬಹುದು. ಈ ರಸಗೊಬ್ಬರವನ್ನು ಗಿಡಕ್ಕೆ ಹಾಕಿದರೆ ಗಿಡ ಉತ್ತಮವಾಗಿ ಬೆಳೆಯುತ್ತದೆ.