ಕೆಲವರು ಆಗಾಗ ತಮಗೆ ಮಾತ್ರ ಸೊಳ್ಳೆಗಳು ಕಚ್ಚುತ್ತವೆ ಎಂದು ಹೇಳಿಕೊಳ್ತಾರೆ. ಸೊಳ್ಳೆಗಳು ಕೆಲವರನ್ನು ಮಾತ್ರವೇ ಕಚ್ಚಲು ವೈಜ್ಞಾನಿಕ ಕಾರಣವೂ ಇದೆ. ರಕ್ತದ ಗುಂಪು ʻಒʼ ಆಗಿದ್ದರೂ ಸೊಳ್ಳೆಗಳು ಹೆಚ್ಚು ಕಚ್ಚುತ್ತವೆ ಎಂದು ಹಲವು ಅಧ್ಯಯನಗಳು ಹೇಳಿವೆ. ಗಾಢ ಬಣ್ಣದ ಬಟ್ಟೆಯೂ ಸೊಳ್ಳೆಗಳನ್ನು ಆಕರ್ಷಿಸಲ್ಪಡುತ್ತದೆ.
ಮದ್ಯಪಾನಿಗಳ ದೇಹ ಬಿಸಿಯಾಗುವ ಕಾರಣದಿಂದ ಸೊಳ್ಳೆಗಳು ತ್ವರಿತವಾಗಿ ಮನುಷ್ಯನನ್ನು ಗುರ್ತಿಸಲ್ಪಡುತ್ತವೆ ಹಾಗೂ ಮನುಷ್ಯನ ಬೆವರು, ವಾಸನೆ ಸೊಳ್ಳೆಗಳನ್ನು ಸೆಳೆಯುತ್ತದೆಯಂತೆ.
ಇನ್ನು, ಮಳೆಗಾಲ ಶುರುವಾದ್ರೆ ಸಾಕು ಸೊಳ್ಳೆಗಳ ಕಾಟ ತಪ್ಪಿದ್ದಲ್ಲ. ಆದ್ರೆ ಕೆಲವೊಬ್ಬರಿಗೆ ಸೊಳ್ಳೆಗಳು ಹೆಚ್ಚು ಕಚ್ಚಲು ಕಾರಣ
➤ದೇಹದಿಂದ ಬರುವ ನಿರ್ದಿಷ್ಟ ವಾಸನೆ.
➤ನಿಮ್ಮ ಬಟ್ಟೆಯ ಬಣ್ಣಕ್ಕೆ ಆಕರ್ಷಿತವಾಗಿ ಬಂದು ಕಚ್ಚುತ್ತದೆ.(ಕಪ್ಪು/ಗಾಢ ಬಣ್ಣ)
➤ಬೆಚ್ಚಗಿನ ಆರ್ದವಾದ ದೇಹದ ಶಾಖ ಸೊಳ್ಳೆಗಳನ್ನು ಆಕರ್ಷಿಸುತ್ತದೆ.
➤ಗರ್ಭಾವಸ್ಥೆಯಲ್ಲಿರುವ ಮಹಿಳೆಯರಿಗೆ ಹೆಚ್ಚು ಕಚ್ಚುತ್ತದೆ.
➤ಆಲ್ಕೋಹಾಲ್/ ಬಿಯರ್ ಸೇವಿಸಿದವರಿಗೆ ಹೆಚ್ಚು ಕಚ್ಚುತ್ತದೆ.
ಮನೆಯೊಳಗೆ ಹೆಚ್ಚು ಸೊಳ್ಳೆ ಬಂದರೆ ಹೀಗೆ ಓಡಿಸಿ…
ಮಳೆಗಾಲ ಬಂದ್ರೆ ಸಾಕು ಸೊಳ್ಳೆ ಕಾಟ ತಪ್ಪಿದ್ದಲ್ಲ. ಜೊತೆಗೆ ಮಲೇರಿಯಾ, ಡೆಂಗ್ಯೂ ಹಾವಳಿ. ಏನೇ ಮಾಡಿದ್ರೂ ಸೊಳ್ಳೆ ಹೋಗೋದಿಲ್ಲ ಅಂದ್ರೆ ಇಲ್ಲಿ ಕೆಲವು ಟಿಪ್ಸ್ ಇದೆ.
★ಹಸಿರು ಬೇವಿನ ಸೊಪ್ಪಿನ ಹೊಗೆ ಹಾಕಿ.
★ಪುದೀನಾ ರಸ/ಎಣ್ಣೆಯನ್ನು ಮನೆಯ ಮೂಲೆಗಳಿಗೆ ಚಿಮುಕಿಸಿ.
★ಬೆಳ್ಳುಳ್ಳಿಯನ್ನು ಪೇಸ್ಟ್ ಮಾಡಿ ಮನೆ ಮೂಲೆಗೆ ಸಿಂಪಡಿಸಿ.
★ಕರ್ಪೂರವನ್ನು ಹೊತ್ತಿಸಿ ಕೋಣೆಯಲ್ಲಿರಿಸಿದರೆ ಸೊಳ್ಳೆಗಳು ಓಡಿ ಹೋಗುತ್ತವೆ.
★ಅಗರಬತ್ತಿಯನ್ನು ಹೊತ್ತಿಸಿದರೂ ಸೊಳ್ಳೆ ಸುಳಿಯುವುದಿಲ್ಲ.