ಮಳೆಗಾಲದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಇರಲಿ ಕಾಳಜಿ..!; ಪಾಲಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳಿವು

ಮಳೆಗಾಲದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯವಾಗಿದ್ದು, ಮಾನ್ಸೂನ್​ ಸಂದರ್ಭದಲ್ಲಿ ಮಕ್ಕಳ ಬಗ್ಗೆ ಜಾಗರೂಕತೆ ವಹಿಸದಿದ್ದರೆ ಅನಾರೋಗ್ಯಕ್ಕೆ ತುತ್ತಾಗುವುದು ಹೆಚ್ಚು. ಹೀಗಾಗಿ ಮಳೆಗಾಲದಲ್ಲಿ ಆದಷ್ಟು ಕುದಿಸಿ, ಆರಿಸಿದ ನೀರನ್ನು ಕುಡಿಯುವುದು ಉತ್ತಮ.…

ಮಳೆಗಾಲದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯವಾಗಿದ್ದು, ಮಾನ್ಸೂನ್​ ಸಂದರ್ಭದಲ್ಲಿ ಮಕ್ಕಳ ಬಗ್ಗೆ ಜಾಗರೂಕತೆ ವಹಿಸದಿದ್ದರೆ ಅನಾರೋಗ್ಯಕ್ಕೆ ತುತ್ತಾಗುವುದು ಹೆಚ್ಚು.

ಹೀಗಾಗಿ ಮಳೆಗಾಲದಲ್ಲಿ ಆದಷ್ಟು ಕುದಿಸಿ, ಆರಿಸಿದ ನೀರನ್ನು ಕುಡಿಯುವುದು ಉತ್ತಮ. ಇದರಿಂದ ನೆಗಡಿ, ಕೆಮ್ಮು, ಜ್ವರ, ಕಫದಂತಹ ಸಮಸ್ಯೆಗಳಿಂದ ದೂರ ಉಳಿಯಬಹುದು. ಮಳೆಗಾಲದಲ್ಲಿ ಹೊರಗಿನ ಆಹಾರದ ಸೇವನೆಯಿಂದ ಆರೋಗ್ಯ ಕೆಡಬಹುದು. ಹೀಗಾಗಿ ಮನೆಯಲ್ಲೇ ಮಕ್ಕಳಿಗೆ ಇಷ್ಟವಾದ ಅಡುಗೆ ಪದಾರ್ಥ ತಯಾರಿಸಿ ಕೊಡಿ.

*ಮಳೆಗಾಲದಲ್ಲಿ ಬೆಚ್ಚಗಿನ ಬಟ್ಟೆ ಧರಿಸುವುದು ಉತ್ತಮವಾಗಿದ್ದು, ಜೊತೆಗೆ ಚೆನ್ನಾಗಿ ಒಣಗಿಸಿ ಧರಿಸಿದರೆ ತಾಜಾ ಅನುಭವವಾಗುತ್ತದೆ.
*ಮನೆಯ ಒಳಾಂಗಣ ಮತ್ತು ಹೊರಾಂಗಣ ಸ್ವಚ್ಛವಾಗಿಟ್ಟುಕೊಳ್ಳಬೇಕು. ಜೊತೆಗೆ ಸೊಳ್ಳೆಗಳು ಮನೆಯ ಒಳಗೆ ಬರದಂತೆ ಕಿಟಕಿಗಳಿಗೆ ಸೊಳ್ಳೆಪರದೆ ಬಳಸುವುದು ಒಳ್ಳೆಯದು.
*ಮಕ್ಕಳು ಹೊರಗಡೆ ಮಳೆಯಲ್ಲಿ ನೆನೆಯದಂತೆ ಛತ್ರಿ, ರೈನ್ ಕೋಟ್, ಹ್ಯಾಟ್ ಇತ್ಯಾದಿಗಳನ್ನು ಕಳಿಸಲು ಮರೆಯಬಾರದು. ಒಂದು ವೇಳೆ ನೆನೆದು ಒದ್ದೆಯಾಗಿದ್ದರೆ, ಬೇವು, ತುಳಸಿ, ಲಾವಂಚ, ನಿಂಬೆ ಇತ್ಯಾದಿಗಳನ್ನು ಹಾಕಿ ಬಿಸಿನೀರಿನ ಸ್ನಾನ ಮಾಡಿಸಿ.

Vijayaprabha Mobile App free

ಮಳೆಗಾಲದಲ್ಲಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ:

ಮಳೆಗಾಲದಲ್ಲಿ ಸೋಂಕು ಹರಡುವಿಕೆಯ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ, ಆರೋಗ್ಯವಾಗಿರಲು ಈ ಮುನ್ನೆಚ್ಚರಿಕೆ ಕ್ರಮ ಅನುಸರಿಸಿ.
>ಸ್ನಾನ ಅಥವಾ ಅಗತ್ಯತೆಗಳಿಗೆ ಕಲುಷಿತ ನೀರನ್ನು ಬಳಸಬೇಡಿ.
>ಕುಡಿಯುವ ನೀರನ್ನು ಫಿಲ್ಟರ್ ಮಾಡಿ ಕುಡಿಯಬೇಕು. ಹಾಗು ಹಸಿರು ಎಲೆಗಳ ತರಕಾರಿಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು.
>ನಿಮಗೆ ಯಾವುದೇ ಕಾಯಿಲೆ ಇದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.
>ಮನೆಯ ಸುತ್ತಲೂ ಕಸ, ನೀರು ಸಂಗ್ರಹವಾಗದಂತೆ ನೋಡಿಕೊಳ್ಳಿ ಹಾಗೂ ಮಳೆಯಲ್ಲಿ ಹೆಚ್ಚು ಹೊತ್ತು ಇರಬಾರದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.