ಔಷಧಿಗಳ ಆಗರ ಈ ಲಾವಂಚ

ಹುಲ್ಲಿನ ಜಾತಿಗೆ ಸೇರಿದ, ದಪ್ಪ ದರ್ಭೆಯಂತೆ ಕಾಣುವ ಬಹು ವಾರ್ಷಿಕ ಸಸ್ಯ, ನಸು ಹಳದಿಯ ಉದ್ದವಾದ ಬೇರಿಗೆ ತುಂಬ ಸುವಾಸನೆ. ಮಣ್ಣಿನ ಸವಕಳಿಯನ್ನು ತಡೆಯಲು ವಿಪುಲವಾಗಿ ಬೆಳೆಸುತ್ತಾರೆ. ಬೀಜ ಮತ್ತು ಸಣ್ಣ ಗಿಡಗಳನ್ನು ನೆಡುವುದರ…

laavancha vijayaprabha

ಹುಲ್ಲಿನ ಜಾತಿಗೆ ಸೇರಿದ, ದಪ್ಪ ದರ್ಭೆಯಂತೆ ಕಾಣುವ ಬಹು ವಾರ್ಷಿಕ ಸಸ್ಯ, ನಸು ಹಳದಿಯ ಉದ್ದವಾದ ಬೇರಿಗೆ ತುಂಬ ಸುವಾಸನೆ. ಮಣ್ಣಿನ ಸವಕಳಿಯನ್ನು ತಡೆಯಲು ವಿಪುಲವಾಗಿ ಬೆಳೆಸುತ್ತಾರೆ. ಬೀಜ ಮತ್ತು ಸಣ್ಣ ಗಿಡಗಳನ್ನು ನೆಡುವುದರ ಮೂಲಕ ಕುಂಡವನ್ನು ಒಳಗೊಂಡಂತೆ ಎಲ್ಲ ಪ್ರದೇಶಗಳಲ್ಲೂ ಲಾವಂಚವನ್ನು ಬೆಳೆಸಬಹುದು. ಒಂದು ವರ್ಷದ ನಂತರ ಬಳಸಲು ಯೋಗ್ಯವಾದ ಬೇರು ದೊರೆಯುತ್ತದೆ. ಆಯುರ್ವೇದದಲ್ಲಿ ಇದನ್ನು “ಉಶೀರ’ ಎಂದು ಕರೆಯಲಾಗಿದೆ. ಇದರ ಅರ್ಥ ತಂಪನ್ನುಂಟು ಮಾಡುವುದು ಎಂದು. ಇದರ ಬೇರುಗಳಿಂದ ಚಾಪೆಯನ್ನು ತಯಾರಿಸುತ್ತಾರೆ. ಇದನ್ನು ಕೊಠಡಿಗಳ ಕಿಟಿಕಿಗಳನ್ನು ಬೇಸಿಗೆಯಲ್ಲಿ ಮುಚ್ಚಲು ಬಳಸುತ್ತಾರೆ. ಇದರ ಮೇಲೆ ನೀರನ್ನು ಚುಮುಕಿಸುವುದರಿಂದ ಕೊಠಡಿಯಲ್ಲಿ ತಂಪಾದ ಮತ್ತು ಸುವಾಸನೆಯುಕ್ತ ವಾತಾವರಣವಿರುತ್ತದೆ.

ಉತ್ತಮ ಪಿತ್ತ ಶಾಮಕ ಬಾಯಾರಿಕೆ (ದಾಹ), ಜ್ವರ, ಮೈ ಉರಿ, ಬೆವರಿನ ವಾಸನೆಗಳನ್ನು ಹೋಗಲಾಡಿಸುವುದಲ್ಲದೆ ರಕ್ತ ಶುದ್ಧಿಕಾರಕವೂ ಹೌದು. ಬಳಸಬೇಕಾದ ಭಾಗ ಬೇರು ಇದನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ನರಳಿನಲ್ಲಿ ಒಣಗಿಸಬೇಕು. ಚೆನ್ನಾಗಿ ಒಣಗಿದ ನಂತರ ಜಜ್ಜಿ ಪುಡಿ ಮಾಡಿಕೊಳ್ಳಬಹುದು.

ಲಾವಂಚದ ಉಪಯೋಗಗಳು:

Vijayaprabha Mobile App free

1. 1 ಕೊಡ ನೀರಿಗೆ ಒಂದೆರಡು ಟೀ ಚಮಚ ಲಾಮಂಚದ ಪುಡಿಯನ್ನು ಹಾಕುವುದರಿಂದ ನೀರು ಕುಡಿಯಲು ಹೆಚ್ಚು ಹಿತಕರವಾಗಿರುತ್ತದೆ, ಬಾಯಾರಿಕೆ ಕಡಿಮೆಯಾಗುತ್ತದೆ.

2. ಒಂದು ಲೋಟ ನೀರಿಗೆ 1-2 ಚಮಚ ಲಾಮಂಚದ ಪುಡಿಯನ್ನು ಸೇರಿಸಿ ಒಲೆಯ ಮೇಲಿಟ್ಟು ಸಣ್ಣ ಉರಿಯಲ್ಲಿ ಕುದಿಸಿ ಅರ್ಧ ಲೋಟಕ್ಕೆ ಇಂಗಿಸಿ 10-15 ನಿಮಿಷ ಪಾತ್ರೆಯ ಬಾಯಿಯನ್ನು ಮುಚ್ಚಿಟ್ಟು ನಂತರ ಕಷಾಯವನ್ನು ಶೋಧಿಸಿಟ್ಟುಕೊಳ್ಳಬೇಕು. ಇದಕ್ಕೆ ರುಚಿಗೆ ತಕ್ಕಷ್ಟು ಸಕ್ಕರೆ ಅಥವಾ ಬೆಲ್ಲ ಸೇರಿಸಿ ದಿನದಲ್ಲಿ 3-4 ಬಾರಿ ಕುಡಿಯುವುದು. ಇದರಿಂದ ಜ್ವರದ ತಾಪ, ಬಾಯಾರಿಕೆ, ಗಂಟಲು ಉರಿ, ಬಳಲಿಕೆ, ಹೊಟ್ಟೆಯಲ್ಲಿನ ಸಂಕಟ ಮುಂತಾದುವುಗಳು ಕಡಿಮೆಯಾಗುತ್ತದೆ.

3, 3-4 ಚಮಚ ಟೀ ಪುಡಿಯನ್ನು 1 ಲೀಟರಿನಷ್ಟು ನೀರಿನಲ್ಲಿ ನೆನೆಯಿಟ್ಟು 2-3 ಗಂಟೆಯ ನಂತರ 8-10 ಟೀ ಚಮಚೆಯಷ್ಟು ಸೇವಿಸಲು ಮೂತ್ರದಲ್ಲಿ ಆಗುವ ಉರಿ, ರಕ್ತ ಮೂತ್ರತೆ, ಬಾಯಾರಿಕೆ ಕಡಿಮೆಯಾಗುತ್ತದೆ. ಇದನ್ನು ಅಮ್ಮ, ದಡಾರ, ಸರ್ಪಸುತ್ತುಗಳಲ್ಲಿ ಆಗಾಗ ಸಿಂಪಡಿಸುವುದರಿಂದ ಉರಿ ಕಡಿಮೆಯಾಗುತ್ತದೆ.

4. ನುಣ್ಣಗಿನ ಪುಡಿಯನ್ನು ಶ್ರೀಗಂಧದೊಂದಿಗೆ ಅರೆದು ಬರುವ ಗಂಧವನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆ, ಗುಳ್ಳೆಗಳು ಕಡಿಮೆಯಾಗಿ ಕಾಂತಿ ವರ್ಧಿಸುತ್ತದೆ.

ಇದನ್ನು ಓದಿ: ಮೂಲವ್ಯಾಧಿಗೆ ಉತ್ತಮ ಮನೆ ಔಷಧಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.