ಗ್ಯಾಸ್ ಟ್ರಬಲ್ ಸಮಸ್ಯೆಯೇ? ಗ್ಯಾಸ್‌ನಿಂದ ಮುಜುಗರಕ್ಕೊಳಗಾಗಿದ್ದೀರಾ? ಇಲ್ಲಿದೆ ಪರಿಹಾರ

ಗ್ಯಾಸ್ ಟ್ರಬಲ್ ಸಮಸ್ಯೆಗೆ ಪರಿಹಾರ: > ಪುದೀನಾ, ಶುಂಠಿ ಮತ್ತು ಸ್ಪಿಯರ್ಮಿಂಟ್ ಚಾ ಕುಡಿದರೆ ಅದು ಜೀರ್ಣಕ್ರಿಯೆಗೆ ಸಹಕಾರಿ ಮತ್ತು ಗ್ಯಾಸ್ ನಿಂದ ಪರಿಹಾರ. > ಊಟದ ಬಳಿಕ ಸ್ವಲ್ಪ ಸೋಂಪು ತಿಂದರೆ ಅದರಿಂದ…

gastric problem vijayaprabha

ಗ್ಯಾಸ್ ಟ್ರಬಲ್ ಸಮಸ್ಯೆಗೆ ಪರಿಹಾರ:

> ಪುದೀನಾ, ಶುಂಠಿ ಮತ್ತು ಸ್ಪಿಯರ್ಮಿಂಟ್ ಚಾ ಕುಡಿದರೆ ಅದು ಜೀರ್ಣಕ್ರಿಯೆಗೆ ಸಹಕಾರಿ ಮತ್ತು ಗ್ಯಾಸ್ ನಿಂದ ಪರಿಹಾರ.

> ಊಟದ ಬಳಿಕ ಸ್ವಲ್ಪ ಸೋಂಪು ತಿಂದರೆ ಅದರಿಂದ ಹೊಟ್ಟೆಯಲ್ಲಿ ಕಾಣಿಸಿಕೊಳ್ಳುವ ಗ್ಯಾಸ್ ನಿವಾರಿಸಬಹುದು.

Vijayaprabha Mobile App free

> ಒಂದು ಲೋಟ ಉಗುರು ಬೆಚ್ಚನೆಯ ನೀರಿಗೆ, ಅರ್ಧ ಚಿಕ್ಕ ಚಮಚ ಇಂಗು ಹಾಕಿ ಕುಡಿಯಬೇಕು.

> ಒಂದು ಚಮಚದಷ್ಟು ತಾಜಾ ಹಸಿಶುಂಠಿಯ ರಸವನ್ನು ಒಂದು ಚಿಕ್ಕ ಚಮಚ ಲಿಂಬೆರಸದೊಂದಿಗೆ ಊಟದ ಬಳಿಕ ಸೇವಿಸಿ.

ಗ್ಯಾಸ್‌ನಿಂದ ಮುಜುಗರಕ್ಕೊಳಗಾಗಿದ್ದೀರಾ..?

* ಹೆಚ್ಚು ನೀರು ಕುಡಿಯುವುದರಿಂದ ಸರಿಯಾಗಿ ಪಚನಕ್ರಿಯೆ ಆಗುವುದಲ್ಲದೆ, ಇದರಿಂದ ವಾಯು ದೇಹದಿಂದ ಹೊರ ಹೋಗಲು ಸಹಾಯ ಮಾಡುತ್ತದೆ.

* ಹೆಚ್ಚು ನಾರಿನ ಅಂಶವಿರುವ ಸೊಪ್ಪು ತರಕಾರಿಗಳನ್ನು ಸೇವಿಸಿದರೆ ಗ್ಯಾಸ್‌ ಆಗುವುದನ್ನು ತಡೆಯಬಹುದು.

* ಮಿಂಟ್ ಟೀ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ ಇದರಿಂದ ಗ್ಯಾಸ್‌ನ್ನು ನಿಯಂತ್ರಿಸಬಹುದು.

* ಆಹಾರದಲ್ಲಿ ಜೀರಿಗೆ, ಓಂಕಾಳು, ಶುಂಠಿ ಬಳಸಿದರೆ ಗ್ಯಾಸ್ ಆಗದಂತೆ ತಡೆಯುತ್ತದೆ.

* ಕಡಲೆ, ಆಲೂಗಡ್ಡೆ, ಗೆಣಸಿನಂತಹ ಆಹಾರ ಕಡಿಮೆ ಸೇವಿಸಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.