ಆಹಾರದ ಬಗ್ಗೆ : ಅಜೀರ್ಣವಾದರೆ, ಹುಳಿ ತೇಗು, ಅಹಾರವು ನಾಲಿಗೆಗೆ ರುಚಿಸುವುದಕ್ಕೆ ಮನೆ ಔಷಧಿ

ಅಜೀರ್ಣವಾದರೆ, ಹುಳಿ ತೇಗು, ಅಹಾರವು ನಾಲಿಗೆಗೆ ರುಚಿಸುವುದಕ್ಕೆ ಮನೆ ಔಷಧಿ 1. ಒಂದು ಚೂರು ಹಸಿಶುಂಠಿ, ಸ್ವಲ್ಪ ಜೀರಿಗೆ ಮತ್ತು ಸ್ವಲ್ಪ | ಕಲ್ಲುಸಕ್ಕರೆಯನ್ನು ಬಾಯಿಗೆ ಹಾಕಿಕೊಂಡು ಚೆನ್ನಾಗಿ ಬಾಯಿ ಚಪ್ಪರಿಸಿದರೆ ನಾಲಿಗೆಯ ರುಚಿ…

ಅಜೀರ್ಣವಾದರೆ, ಹುಳಿ ತೇಗು, ಅಹಾರವು ನಾಲಿಗೆಗೆ ರುಚಿಸುವುದಕ್ಕೆ ಮನೆ ಔಷಧಿ

1. ಒಂದು ಚೂರು ಹಸಿಶುಂಠಿ, ಸ್ವಲ್ಪ ಜೀರಿಗೆ ಮತ್ತು ಸ್ವಲ್ಪ | ಕಲ್ಲುಸಕ್ಕರೆಯನ್ನು ಬಾಯಿಗೆ ಹಾಕಿಕೊಂಡು ಚೆನ್ನಾಗಿ ಬಾಯಿ ಚಪ್ಪರಿಸಿದರೆ ನಾಲಿಗೆಯ ರುಚಿ ಅಧಿಕವಾಗುವುದು ಮತ್ತು ಆಹಾರ ಬಹು ಚೆನ್ನಾಗಿ ಜೀರ್ಣವಾಗುವುದು.

2. ಮದುವೆ, ಮುಂಜಿ ಮತ್ತು ಇತರ ಸಮಾರಂಭಗಳಲ್ಲಿ ಹೊಟ್ಟೆ ತುಂಬ ಊಟ ಮಾಡಿದ ನಂತರದಲ್ಲಿ ಒಂದೆರೆಡು ಬಟ್ಟಲು ಮೆಣಸಿನ ಸಾರು ಕುಡಿಯುವುದರಿಂದ ಅಜೀರ್ಣವಾಗುವ ಸಂಭವವಿರುವುದಿಲ್ಲ.

Vijayaprabha Mobile App free

3, ಮಧ್ಯಮ ಗಾತ್ರದ ನಿಂಬೆ ಹಣ್ಣನ್ನು ಕತ್ತರಿಸಿ ರಸ ಹಿಂಡಿಕೊಂಡು ಕುಡಿಯುವುದರಿಂದ ಹುಳಿ ತೇಗು ದೂರವಾಗುವುದು.

4, ಮೊಸರಿಗೆ ಉಪ್ಪು ಸೇರಿಸಿ ಕುಡಿಯುವುದರಿಂದ ಅಜೀರ್ಣ ನಿವಾರಣೆಯಾಗುತ್ತದೆ, ವೀರ್ಯ ವೃದ್ಧಿಸುತ್ತದೆ.

5. ಪ್ರತಿ ದಿನ ಬಾಳೆಹಣ್ಣನ್ನು ಸೇವಿಸಿದರೆ ಪಚನ ಕಾರ್ಯ ಬೇಗನೆ ಆಗುವುದು.

6, ಕಿರುನೆಲ್ಲಿ ಕಾಯಿಯನ್ನು ಉಪ್ಪು ಸಹಿತ ತಿನ್ನುವುದರಿಂದ ತಲೆ ಸುತ್ತುವಿಕೆ, ವಾಕರಿಕೆ, ಅಜೀರ್ಣ ನಿವಾರಣೆ ಆಗುವುದು.

7. ಅನಾನಸ್ ಹಣ್ಣಿನ ರಸವನ್ನು ಮಕ್ಕಳಿಗೆ ಮಿತವಾಗಿ ನಿತ್ಯವೂಕೊಡುವುದರಿಂದ ಜೀರ್ಣಶಕ್ತಿ ಹೆಚ್ಚಾಗುತ್ತದೆ.

8, ಓಮಿನ ಕಾಳಿನ ಕಷಾಯ ತಯಾರಿಸಿ ಅದಕ್ಕೆ ಒಂದು ಚಿಟಿಕೆ ಅಡುಗೆ ಸೋಡಾ ಬೆರೆಸಿ ಮಕ್ಕಳಿಗೆ ಕುಡಿಸುವುದರಿಂದ ಅಜೀರ್ಣದ ಹೊಟ್ಟೆಯುಬ್ಬರ ನಿವಾರಣೆಯಾಗುವುದು.

9. ಲವಂಗವನ್ನು ಕಲ್ಲುಪ್ಪು ಜೊತೆ ಕಚ್ಚಿ ಚಪ್ಪರಿಸಿ ಅದರ ನೀರನ್ನು ಸ್ವಲ್ಪವೇ ಕುಡಿದರೆ ಗಂಟಲು ಕೆರೆತ, ಕೆಮ್ಮು ನಿವಾರಣೆ ಆಗುವುದು, ಜೀರ್ಣಶಕ್ತಿ ಅಧಿಕಗೊಳ್ಳುವುದು.

10. ಹಸಿ ಮೂಲಂಗಿಯನ್ನು ಊಟದಲ್ಲಿ ಬಳಸಿದರೆ ಆಹಾರ ಚೆನ್ನಾಗಿ ಜೀರ್ಣವಾಗುವುದು.

11. ಸೌತೇ ಕಾಯಿಯನ್ನು ಕಾಳು ಮೆಣಸಿನ ಪುಡಿ ಸಹಿತ ತಿನ್ನುವುದರಿಂದ ಜೀರ್ಣ ಶಕ್ತಿಯು ವೃದ್ಧಿಯಾಗುತ್ತದೆ.

12. ಪುದೀನಾ ಸೊಪ್ಪಿನ ಚಟ್ಟಿಯನ್ನು ತಯಾರಿಸಿ ತಿಂದರೆ ಜೀರ್ಣಶಕ್ತಿ ವೃದ್ಧಿಯಾಗುವುದು.

13. ಊಟವಾದ ನಂತರ ಪರಂಗಿ ಹಣ್ಣನ್ನು ತಿಂದರೆ ಚೆನ್ನಾಗಿ ಜೀರ್ಣವಾಗುವುದು.

14. ಸ್ವಲ್ಪ ನೀರಿಗೆ ಒಂದು ಟೀ ಚಮಚ ನಿಂಬೆ ರಸ ಮತ್ತು ಒಂದು ಚಿಟಿಕೆ ಅಡುಗೆ ಸೋಡ ಬೆರೆಸಿ ಸೇವಿಸಿದರೆ ಅಜೀರ್ಣ ನಿವಾರಣೆಯಾಗುವುದು.

ಇದನ್ನು ಓದಿ: ಕೂದಲು ಬೆಳವಣಿಗೆಗೆ, ಕೂದಲು ಉದುರುವಿಕೆಗೆ ಮನೆ ಔಷಧಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.