ಇದು ಪೂಜನೀಯ ಸಸ್ಯ. ಇದಕ್ಕೆ ಹಲವಾರು ಪೌರಾಣಿಕ ಹಿನ್ನೆಲೆ ಇದೆ. ಹಿಂದೆ ತುಳಸಿಯನ್ನು ದೇವಾಲಯದ ಹತ್ತಿರ ಬೆಳೆಯುತ್ತಿದ್ದರು. ಅಲ್ಲಿಗೆ ಬರುವ ಯಾತ್ರಿಕರ ದಣಿವು ಮತ್ತು ಬಾಯಾರಿಕೆಗಳನ್ನು ನೀಗಲು ಕೆಲವು ಎಲೆಗಳನ್ನು ನಾಲಿಗೆಯಡಿ ಇಟ್ಟುಕೊಳ್ಳುತ್ತಿದ್ದರು. ಆದ್ದರಿಂದ ಪ್ರಯಾಣದ ತೊಂದರೆ ನೀಗಿ ಸಾಗುತ್ತಿದ್ದರು.
ಈ ಸಸ್ಯವು ದೇವಾಲಯದಲ್ಲಿ ಬೆಳೆಯುತ್ತಿದ್ದುದರಿಂದ ಧಾರ್ಮಿಕ ಮಹತ್ವ ಬಂದಿದೆ. ಇಂತಹ ಅಪೂರ್ವ ಗುಣವಿರುವ ಈ ತುಳಸಿಗೆ ಇಂದು ವೈಜ್ಞಾನಿಕ ಸಂಶೋಧನೆಗಳ ಸಹಾಯದಿಂದ ಒತ್ತಡ ನಿವಾರಕ (Anti-Stre) ಗುಣವಿದೆ ಎಂದು ಕಂಡು ಹಿಡಿಯಲಾಗಿದೆ. ತುಳಸಿ (ಸಂಸ್ಕೃತದಲ್ಲಿ) ಎಂದರೆ ಅಪ್ರತಿಮ ಅದ್ವಿತೀಯ ಎಂದರ್ಥ. ಇದರಲ್ಲಿ ಎರಡು ವಿಧ-ಕಪ್ಪಗಿನ (ಕೃಷ್ಣ), ಬಿಳಿಯ (ಶ್ರೀ ಅಥವಾ ಶಿವ) ತುಳಸಿ ಇದರಲ್ಲಿ ಶ್ರೇಷ್ಠ ಕೃಷ್ಣ ತುಳಸಿ ಅಲ್ಲದೆ ಇನ್ನಿತರ ತುಳಸಿ ವಿಧಗಳ ಸಸ್ಯಗಳಿವೆ.
ತುಳಸಿ ಗಿಡದ ಉಪಯೋಗಗಳು:
1. ಇದರ ಎಲೆಗಳಲ್ಲಿ ಸುಗಂಧ ದ್ರವ್ಯವಿದ್ದು ಇದು ಸೂಕ್ಷಾಣು ಜೀವನಾಶಕವಾಗಿದೆ. ಸಂಶೋಧನೆಗಳ ಪ್ರಕಾರ ಇದಕ್ಕೆ Anti-Virus ಗುಣವಿರುವುದರಿಂದ ಎಲೆಯ ರಸವನ್ನು ವಿಷಮ ಜ್ವರ (Viral Fever) ತಡೆಯಲು ಅತಿ ಯಶಸ್ವಿಯಾಗಿ ಬಳಸಬಹುದಾಗಿದೆ.
ಎಲೆಯನ್ನು ಚೆನ್ನಾಗಿ ತೊಳೆದು ಶುಭ್ರ ಕಲ್ಪತ್ತಿನಲ್ಲಿ ಅರೆದು ಬಟ್ಟೆಯ ಸಹಾಯದಿಂದ ಹಿಂಡಿ ಬರುವ ರಸವನ್ನು ಚಿಕ್ಕ ಮಕ್ಕಳಿಗೆ 1-2 ಟೀ ಚಮಚದಷ್ಟು ಮತ್ತು ದೊಡ್ಡವರಿಗೆ 2-4 ಟೀ ಚಮಚದಷ್ಟು ಜೇನಿನೊಂದಿಗೆ ನೀಡಬಹುದು. ದಿನಕ್ಕೆ 2 ರಿಂದ 3 ಸಾರಿ ನೀಡಬಹುದು.
2. ತುಳಸಿ ಎಲೆಯ ರಸವನ್ನಾಗಲಿ ಅಥವಾ ಒಣಗಿದ ಎಲೆಯ ಟೀಯನ್ನಾಗಲೀ ಶ್ವಾಸಕೋಶಗಳ ಸೋಂಕು, ಕೆಮ್ಮು, ನೆಗಡಿ, ಹೆಚ್ಚು ಕಫ ಬರುವವರಿಗೆ ಇದನ್ನು ನೀಡಬಹುದು.
3. ಎಲೆಯ ರಸವನ್ನು ಕಾಲು ಭಾಗ ಎಣ್ಣೆಯಲ್ಲಿ ಕಾಯಿಸಿ ತಲೆಗೆ ಹಚ್ಚಿದಾಗ ತಲೆಯಲ್ಲಿ ಹೇನು, ಹೊಟ್ಟು ಬರುವಿಕೆ ತೊಂದರೆ ನಿವಾರಣೆಯಾಗುತ್ತದೆ. ಚರ್ಮದ ಸೋಂಕು ರೋಗಗಳಿಗೂ ಹಚ್ಚಬಹುದು.
4. ಇದು ಬೆಳೆಯುವ ಪ್ರದೇಶದ ವಾತಾವರಣದಲ್ಲಿ ಸೂಕ್ಷಾಣು ಜೀವಿಗಳ ಪ್ರವೇಶವಿಲ್ಲದೆ ಹವೆಯು ಶುದ್ಧವಾಗಿರುತ್ತದೆ.