ಮೂಲವ್ಯಾಧಿಗೆ ಮನೆ ಔಷಧಿ:
1. ಒಂದು ಬಟ್ಟಲು ಬೆಣ್ಣೆ ತೆಗೆದ ಮಜ್ಜಿಗೆಯನ್ನು ಪ್ರತಿದಿನ ಬೆಳಗ್ಗೆ ಸೇವಿಸುವುದು ಉತ್ತಮ. ಹುಳಿ ಮಜ್ಜಿಗೆಯಾದರೆ ಬಹಳ ಒಳ್ಳೆಯದು. ಮೂಲವ್ಯಾಧಿಯಿಂದ ನರಳುವವರು ಹೆಸರು ಕಾಳು ಅಥವಾ ಹುರುಳಿಕಾಳು ಬೇಯಿಸಿ ಬಸಿದ ಕಟ್ಟು (ತಿಳಿಸಾರು) ಮತ್ತು ಹಳೆ ಅಕ್ಕಿ ಅನ್ನ ಊಟ ಮಾಡುವುದು ಲೇಸು. ಹಸಿ ಮೂಲಂಗಿ ಮತ್ತು ಮೂಲಂಗಿ ಸೊಪ್ಪನ್ನು ಯಥೇಚ್ಛವಾಗಿ ಬಳಸುವುದರಿಂದ ವ್ಯಾಧಿಯು ಉಲ್ಬಣಿಸುವುದಿಲ್ಲ.
2. ಪ್ರತಿ ದಿನ ರಾತ್ರಿ ಮಲಗುವುದಕ್ಕೆ ಮುಂಚೆ ಸಿಪ್ಪೆ ಸಹಿತವಾದ ಒಂದು ಏಲಕ್ಕಿಯನ್ನು ಕಳಿತ ಬಾಳೆ ಹಣ್ಣಿನೊಂದಿಗೆ ಸೇವಿಸುವುದರಿಂದ ಗುಣ ಕಂಡುಬರುವುದು.
3. ಮೆಂತ್ಯವನ್ನು ಹುರಿದು ಕುಟ್ಟಿ ಪುಡಿಮಾಡಿ ಒಂದು ಟೀ ಚಮಚ ಪುಡಿಯನ್ನು ಒಂದು ಬಟ್ಟಲು ಮಜ್ಜಿಗೆಯಲ್ಲಿ ಬೆರೆಸಿ ದಿನಕ್ಕೆ ಎರಡಾವರ್ತಿ ಸೇವಿಸಿ.
4, ಆಗ ತಾನೇ ಹಿಂಡಿದ ಒಂದು ಬಟ್ಟಲು ಹಸುವಿನ ನೊರೆ ಹಾಲಿಗೆ ಒಂದು ನಿಂಬೆ ಹಣ್ಣನ್ನು ಹಿಂಡಿ ಕಾಲ ವಿಳಂಬ ಮಾಡದೆ ಸೇವಿಸಿ. ಈ
ಚಿಕಿತ್ಸೆಯಿಂದ ಒಂದು ವಾರದೊಳಗಾಗಿ ಗುಣ ಕಂಡು ಬರುವುದು.