ಹೊಟ್ಟೆ ನೋವು ಉಪಶಮನಕ್ಕೆ ಮನೆ ಮದ್ದು:
ಬಹಳಷ್ಟು ಮಂದಿ ಹೊಟ್ಟೆ ನೋವು ತಾಳಲಾರದೆ ಬಳಲುತ್ತಿರುತ್ತಾರೆ. ಅದರಲ್ಲೂ ಮುಟ್ಟಿನ ಸಮಯದಲ್ಲಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ನೋವು ಹೇಳತೀರದು.
ಇದಕ್ಕೆ ಶಾಶ್ವತ ಪರಿಹಾರ ಇಲ್ಲದಿದ್ದರೂ ತಾತ್ಕಾಲಿಕವಾಗಿ ಮನೆಯಲ್ಲಿ ಸಿಗುವ ಪದಾರ್ಥಗಳಲ್ಲಿಯೇ ಹೊಟ್ಟೆ ನೋವಿನ ಉಪಶಮನ ಮಾಡಬಹುದಾಗಿದೆ.
ಹೌದು, ಹೊಟ್ಟೆ ನೋವು ಬಂದಾಗ ನಿಂಬೆ ಪಾನಕ, ಶುಂಠಿ ಟೀ, ಅನ್ನ ಬಸಿದ ಬಳಿಕ ಸಿಗುವ ಗಂಜಿ ಸೇವಿಸುವುದರಿಂದ ಹೊಟ್ಟೆ ನೋವು ಸ್ವಲ್ಪ ನಿವಾರಣೆಯಾಗುತ್ತದೆ. ಸೋಂಪು ಕಾಳುಗಳನ್ನು ತಿನ್ನುವುದರಿಂದ ಸಹ ಹೊಟ್ಟೆ ನೋವು ನಿವಾರಣೆಯಾಗುತ್ತದೆ.
ಇನ್ನು, ವಿಟಮಿನ್ ಸಿ ಕೊರತೆಯಿಂದ ಕೂಡ ಹೊಟ್ಟೆನೋವು ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.
ಅಸಿಡಿಟಿಯಿಂದ ಹೊಟ್ಟೆ ನೋವು ಬಂದರೆ ತಕ್ಷಣ ಎಳನೀರು ಅಥವಾ ತಣ್ಣನೆಯ ಹಾಲು ಸೇವಿಸವುದರಿಂದ ಹೊಟ್ಟೆ ನೋವು ಕಡಿಮೆಯಾಗುತ್ತದೆ.
ಅಜೀರ್ಣದಿಂದ ಹೊಟ್ಟೆನೋವು ಕಾಣಿಸಿಕೊಂಡಲ್ಲಿ ಒಂದು ಗ್ಲಾಸ್ ನೀರಿಗೆ 1 ನಿಂಬೆ ಹಣ್ಣಿನ ರಸ ಹಿಂಡಿ ಅದರಲ್ಲಿ ಜೇನು ಮಿಶ್ರಣ ಮಾಡಿ ಕುಡಿಯಬೇಕು.
ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಹೊಟ್ಟೆ ನೋವು ಕಾಣಿಸಿಕೊಂಡಲ್ಲಿ ಪುದೀನಾ, ಶುಂಠಿ, ನಿಂಬೆರಸ, ಚಿಟಿಕೆ ಉಪ್ಪು ಬೆರೆಸಿದ ನೀರನ್ನು ಕುಡಿಯುವುದರಿಂದ ನೋವು ಕಡಿಮೆಯಾಗಬಹುದು.
ಎಂತಹ ಹೊಟ್ಟೆನೋವು ಆಗಿರಲಿ ಪುಟ್ಟ ಕಪ್ ಮೊಸರಿನಲ್ಲಿ 1 ಸ್ಪೂನ್ ಗಳಷ್ಟು ಮೆಂತ್ಯದ ಪುಡಿಯನ್ನು ಬೆರೆಸಿ ಸೇವಿಸುವುದರಿಂದ, ಜೀರ್ಣ ವ್ಯವಸ್ಥೆಯನ್ನು ಸುಗಮವಾಗಿಡುತ್ತದೆ.