ಪಿತ್ತದಿಂದ ತಲೆ ತಿರುಗುವುದಕ್ಕೆ ಮನೆ ಔಷಧಿ:
1. ಜೀರಿಗೆ, ಮೆಂತ್ಯೆ, ಕೊತ್ತಂಬರಿ 1-1 ಚಮಚದಂತೆ ಸಮಭಾಗ ಸೇರಿಸಿ, ಹುರಿದು ಪುಡಿ ಮಾಡಿ, ಕಷಾಯ ತಯಾರಿಸಿ, ಹಾಲು ಸಕ್ಕರೆ ಬೆರೆಸಿ, ಪ್ರತಿದಿನ 2 ವೇಳೆ ಸೇವಿಸಬೇಕು. ಇದನ್ನು 3-4 ದಿನದವರೆಗೆ ಸೇವಿಸಬೇಕು.
2. 1 ಚಮಚ ಜೇನಿನಲ್ಲಿ, 2 ಚಮಚ ಈರುಳ್ಳಿ ರಸ ಸೇರಿಸಿ. ನಿತ್ಯ ಬೆಳಿಗ್ಗೆ 1 ವಾರ ತೆಗೆದುಕೊಳ್ಳುವುದು.
5. ಗೋಡಂಬಿ ಎಲೆಯನ್ನು ಅರೆದು ಲೇಪನಮಾಡುವುದು.
4. ತುಂಬೆ ರಸ ಮೆಣಸಿನಕಾಳು,ಬೆಳ್ಳುಳ್ಳಿ ಅರೆದು ಲೇಪನ ಮಾಡುವುದು.
5 ನುಗ್ಗೆ ಸೊಪ್ಪನ್ನು ನೀರಿನಲ್ಲಿ ಅರೆದು 4-6 ಹನಿ ಮೂಗಿಗೆ ಹಿಂಡುವುದು.
6. ತುಂಬೆಯ ಚಿಗುರು 10, ಮೆಣಸಿನಕಾಳು 2 ನ್ನು ನೀರಿನಲ್ಲಿ ಅರೆದು 2-3 ದಿನಗಳ ಕಾಲ ಮೂಗಿನಲ್ಲಿ ಕೆಲವು ಹನಿ ಬಿಡುವುದು.
7. ಕೊತ್ತಂಬರಿ ಸೊಪ್ಪಿನ ರಸ 1 ಸೇರು, ಎಳ್ಳೆಣ್ಣೆ 1/2 ಸೇರು, ಪನ್ನೀರು 1/2 ಸೇರು.ಇವುಗಳನ್ನೆಲ್ಲಾ ಬಾಣಲೆಯಲ್ಲಿ ಹಾಕಿ ಮಂದಾಗ್ನಿಯಿಂದ ಕಾಯಿಸಿ ತೈಲಪಾಕದಲ್ಲಿ ಇಳಿಸಿ, ಸೂಸಿ ನಶ್ಯದಂತೆ ಮೂಗಿನಿಂದ ಸೇದುವುದು ಮತ್ತು ತಲೆಗೆ ಹಚ್ಚಿ ಸ್ನಾನ ಮಾಡುವುದು.
8. ತುಳಸೀರಸವನ್ನು, ಏಲಕ್ಕಿಯನ್ನು ಅರೆದು ಹಣೆಗೆ ಲೇಪಿಸುವುದು.
9. ಅರಿಸಿನ ಬೇರು, ಕಾಳುಮೆಣಸು, ಶುಂಠಿ ಸಮಭಾಗದ ಚೂರ್ಣವನ್ನು ಎಳ್ಳೆಣ್ಣೆಯೊಂದಿಗೆ ಬೆರಸಿ ನೆತ್ತಿಗೆ, ಹಣೆಗೆ ಲೇಪಿಸುವುದು.
10. 1 ಹಿಡಿ ನುಗ್ಗೆ ಸೊಪ್ಪನ್ನು, 1 ಮಡಿಕೆಯಲ್ಲಿ ಹಾಕಿ, 1 ಸೇರು ನೀರುಹಾಕಿ, ಅಷ್ಟಾಂಶ ಕಷಾಯಕ್ಕಿಳಿಸಿ, ಆ ಸೊಪ್ಪನ್ನು ಆ ಕಷಾಯದಲ್ಲೇ ಹಿಸುಕಿ ಸೋಸಿ, ಅದಕ್ಕೆ 2 ಚಮಚ ಲಿಂಬೆಯ ರಸವನ್ನು ಹಾಕಿ, ಪ್ರತಿದಿನ ಬೆಳಿಗ್ಗೆ 1 ವಾರ ಸೇವಿಸುವುದು.
ಇದನ್ನು ಓದಿ: ಚಳಿಗಾಲದಲ್ಲಿ ಕೈ, ಕಾಲು, ತುಟಿ ಬಿರಿಯುವುದಕ್ಕೆ ಮನೆ ಔಷದಿ