ಅತಿರೇಕದ ರಕ್ತ ಸ್ರಾವಕ್ಕೆ ಮನೆ ಔಷಧಿ:
1. ರಕ್ತ ಸ್ರಾವ ತುಂಬಾ ಆದಾಗ ಬಾಳೇ ಹೂವಿನ ಪಲ್ಯ ಮಾಡಿ ತಿಂದರೆ ಕಡಿಮೆಯಾಗುತ್ತದೆ. ನೋವು ಕಡಿಮೆಯಾಗುತ್ತದೆ.
2. ಅಶೋಕ ಚಕ್ಕೆ 1/4 ತೊಲ, ಲೋದಕ ಚಕ್ಕೆ 1/4 ತೊಲ ಜಜ್ಜಿ 2 ಲೋಟ ನೀರು ಹಾಕಿ, ಕುದಿಸಿ 1/2 ಲೋಟಕ್ಕೆ ಇಳಿಸಿ, ಬೆಳಿಗ್ಗೆ 1/2 ಲೋಟ ಹಾಲು ಸಕ್ಕರೆ ಬೆರೆಸಿ, 1 ವಾರ ಕುಡಿಯಬೇಕು. ಇದರ ಸೇವನೆಯಿಂದ ಅತಿಸ್ರಾವ ನಿಯಂತ್ರಣಕ್ಕೆ ಬರುತ್ತದೆ.
3. ಅಶೋಕದ ಚಕ್ಕೆ ಇದರ ಹೊರಬದಿ ಹೊಟ್ಟನ್ನು ಹೆರೆದು, ಚೊಕ್ಕವಾದ 1 ಕೆತ್ತೆಯನ್ನು ತಂಡುಲೋದಕದಲ್ಲಿ ತೇಯ್ದು, 1 ತೊಲದಷ್ಟು ಕಲ್ಲುಸಕ್ಕರೆ ಹೊಳಕು ಹಾಕಿ, ಕಾಲು ತೊಲ ಜೇನು ಹಾಕಿ, 1 ಲೋಟ ಕಲಗಚ್ಚು ಮಾಡಿ ಕುಡಿಯುವುದು, ಇದನ್ನು 4-6 ದಿನಗಳ ವರೆಗೆ ದಿನಕ್ಕೆ 3 ಬಾರಿಯಂತೆ (ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ) ಸೇವಿಸಬೇಕು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.




