ಹೃದ್ರೋಗ, ಎದೆ ಬೇನೆಗೆ ಪಾಲಿಸಬೇಕಾದ ಮನೆಮದ್ದು

ಹೃದ್ರೋಗ ಅಥವಾ ಎದೆ ಬೇನೆಗೆ ಮನೆಮದ್ದು: 1. ಹಸಿ ಶುಂಠಿ ರಸ (ಅದರ ಸುಣ್ಣತೆಗೆದು), 1 ಗುಂಜಿ ಕಸ್ತೂರಿ,ಜೇನು ಸೇರಿಸಿ ಕೊಡುವುದು.ಹೃದಯಕ್ಕೆ ಇದರಿಂದ ಚೈತನ್ಯ ಲಭಿಸುವುದು. 2. ಮತ್ತಿಚಕ್ಕೆ ಚೂರ್ಣ ಮಾಡಿ, ಚತುರ್ಥಾಂಶ ಕಷಾಯಮಾಡಿ,…

chest pain vijayaprabha

ಹೃದ್ರೋಗ ಅಥವಾ ಎದೆ ಬೇನೆಗೆ ಮನೆಮದ್ದು:

1. ಹಸಿ ಶುಂಠಿ ರಸ (ಅದರ ಸುಣ್ಣತೆಗೆದು), 1 ಗುಂಜಿ ಕಸ್ತೂರಿ,ಜೇನು ಸೇರಿಸಿ ಕೊಡುವುದು.ಹೃದಯಕ್ಕೆ ಇದರಿಂದ ಚೈತನ್ಯ ಲಭಿಸುವುದು.

2. ಮತ್ತಿಚಕ್ಕೆ ಚೂರ್ಣ ಮಾಡಿ, ಚತುರ್ಥಾಂಶ ಕಷಾಯಮಾಡಿ, ಹಾಲು ಸಕ್ಕರೆ ಸೇರಿಸಿ ಪ್ರತಿ ದಿನ ಕುಡಿಯುವುದು ಅಥವಾ ಅದರ ಚೂರ್ಣವನ್ನು ಜೇನಿನಲ್ಲಿ ಕಲಸಿ ನೆಕ್ಕುವುದು.

Vijayaprabha Mobile App free

3. ಬಲಿಗ ಮಾದಲ ಹಣ್ಣನ್ನು ಸಣ್ಣಗೆ ಕತ್ತರಿಸಿ, ಜೇನಿನಲ್ಲಿ ಹಾಕಿ ಭರಣಿಯಲ್ಲಿ ರಕ್ಷಿಸಿಟ್ಟುಕೊಂಡು ನಿತ್ಯ ಬೆಳಿಗ್ಗೆ ರಾತ್ರಿ 1-1 ಚಮಚ ಸೇವಿಸುವುದು. ಇದನ್ನು 2-3 ತಿಂಗಳು ತೆಗೆದು ಕೊಂಡರೆ ಪೂರ್ಣ ಫಲಕಾರಿಯಾಗುವುದು.

4. ಒಂದೆಲಗ ಮತ್ತು ಅಮೃತ ಬಳ್ಳಿಯನ್ನು ಸಮಭಾಗ ಚೂರ್ಣಿಸಿಟ್ಟುಕೊಂಡು 2 ಚಮಚ ಚೂರ್ಣವನ್ನು 1 ಪಾವು ನೀರಿಗೆ ಹಾಕಿ ಅಷ್ಟಾಂಶ ಕಷಾಯ ಮಾಡಿ ದಿನಕ್ಕೆ 2 ವೇಳೆ 2-3 ತಿಂಗಳು ಸೇವಿಸಬೇಕು.

5. ಲಿಂಬೆಹಣ್ಣಿನ ಶರಬತ್ತನ್ನು ನಿತ್ಯ ಬೆಳಿಗ್ಗೆ ತೆಗೆದು ಕೊಳ್ಳುವುದು,

6. ತುಪ್ಪದಲ್ಲಿ ಹುರಿದ ಇಂಗು, ಸೈಂದ್ರಲವಣ, ಶುಂಠಿಯ ಸಮಭಾಗ ಚೂರ್ಣಿಸಿಕೊಂಡು ನಿತ್ಯ ಬೆಳಿಗ್ಗೆ ರಾತ್ರಿ 1/2 ತೊಲದಂತೆ ಬಿಸಿನೀರಿನಲ್ಲಿ ತೆಗೆದುಕೊಳ್ಳುವುದು.

ಇದನ್ನು ಓದಿ: ದೇಹದ ಸುದೃಢತೆಗೆ ಪೌಷ್ಟಿಕಾಂಶ ಆಹಾರಗಳ ಸೇವನೆ ಅತ್ಯಗತ್ಯ; ಇಂತಹ ಆಹಾರ ಕ್ರಮಗಳ ನೀವು ತಿಳಿದುಕೊಳ್ಳಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.