1 ನಿಂಬೆ ರಸವನ್ನು ಚೆನ್ನಾಗಿ ತಲೆಗೆ ತಿಕ್ಕಿ ಅರ್ಧ ಗಂಟೆಯ ನಂತರ ತಣ್ಣೀರಿನಿಂದ ಸ್ನಾನ ಮಾಡಿ. ಇದೇ ಕ್ರಮವನ್ನು ಅನುಸರಿಸುತ್ತಿದ್ದರೆ ಕೂದಲು ಉದುರುವುದು ನಿಲ್ಲುವುದು.
2. ಸುಮಾರು 110 ಗ್ರಾಂ. ಕೊಬ್ಬರಿ ಎಣ್ಣೆಗೆ ಒಂದು ಚಮಚ ನಿಂಬೆರ ಹಾಕಿ ನಂತರ ಅಷ್ಟೇ ಪ್ರಮಾಣದ ಸುಣ್ಣದ ತಿಳಿಯೊಂದಿಗೆ ಮಿಶ್ರ ಮಾಡಿ ಕೂದಲಿಗೆ ಹಚ್ಚುತ್ತಿದ್ದರೆ ಕೂದಲು ಉದುರುವುದು ನಿಲ್ಲುವುದು. ಕೂದಲು ಉದ್ದವಾಗಿ ಬೆಳೆಯುವುದು ಕೂದಲಿನ ಕಾಂತಿ ಅಧಿಕಗೊಳ್ಳುವುದು.
3. ಸ್ತ್ರೀಯರು ಸ್ನಾನ ಮಾಡುವಾಗ ಗಲ್ಲ ಮತ್ತು ಕೆನ್ನೆಗೆ ಅರಿಶಿನ ಪುಡಿ ಹಚ್ಚಿಕೊಂಡು ಸ್ನಾನ ಮಾಡುವ ಹವ್ಯಾಸವಿಟ್ಟುಕೊಂಡರೆ ಅಲ್ಲಿ ಕೂದಲು ಬೆಳೆಯುವ ಸಂದರ್ಭವಿರುವುದಿಲ್ಲ.
4. ವೀಳ್ಯದೆಲೆಯನ್ನು ಅರೆದು ಕೊಬ್ಬರಿ ಎಣ್ಣೆಯಲ್ಲಿ ಕಲಿಸಿ ತಲೆಗೆ ಹಚ್ಚುವುದರಿಂದ ಕೂದಲು ಉದುರುವುದು ನಿಂತು ಹೋಗುವುದು.
5. ಪ್ರತಿದಿನವೂ ತಲೆಗೆ ತಣ್ಣೀರು ಸ್ನಾನ ಮಾಡುತ್ತಿದ್ದರೆ ಕೂದಲು ಉದುರುವುದು ನಿಂತು ಹೋಗಿ ಕೂದಲು ಸೊಂಪಾಗಿ ಬೆಳೆಯುವುದು.
6. ಬಾಲನೆರೆಯನ್ನು ತಡೆಯಲು ಸ್ನಾನ ಮಾಡುವಾಗ ತಲೆಗೆ ಸೋಪು ಹೆಚ್ಚುವುದು ಕೈಬಿಡಿ ಸೋಪಿನ ಬದಲು ಹೆಸರು ಹಿಟ್ಟನ್ನು ಬಳಸುವುದು ಉತ್ತಮ.
7. ಕೂದಲಿನ ಬೆಲೆ ಕೂದಲನ್ನು ಕಳೆದುಕೊಂಡವರಿಗೆ ಮಾತ್ರ ಗೊತ್ತಾಗುತ್ತದೆ. ಕೂದಲನ್ನು ಕಳೆದುಕೊಳ್ಳುವ ಮುನ್ನ ಪ್ರತಿ ನಿತ್ಯ 7 ರಿಂದ 8 ತಾಸು ನಿಶ್ಚಿಂತೆಯಿಂದ ನಿದ್ರಿಸಿದರೆ ಕೂದಲು ಉದುರುವುದನ್ನು ತಡೆಯಬಹುದು. ಹಾಗೂ ಸದಾ ಚಿಂತಿಸುವುದನ್ನು ಬಿಟ್ಟು ನೆಮ್ಮದಿಯಾಗಿರಬೇಕು. ತರಕಾರಿ ಮತ್ತು ಹಣ್ಣು ಹಂಪಲುಗಳನ್ನು ಸಮತೋಲನವಾಗಿ ಸೇವಿಸಬೇಕು.
ಇದನ್ನು ಓದಿ: ಹಲ್ಲು ನೋವು ಮತ್ತು ಬಾಯಿ ಹುಣ್ಣುಗಳಿಗೆ ಮನೆ ಔಷಧಿ