ನೆಗಡಿ, ಕೆಮ್ಮು, ದಮ್ಮು, ಗಂಟಲು ನೋವುಗಳಿಗೆ ಮನೆ ಔಷಧಿ:
1. ಒಂದು ಬಟ್ಟಲು ನೀರಿಗೆ ಅರ್ಧ ಟೇ ಚಮಚ ದಾಲ್ಚಿನ್ನಿ ಚೂರ್ಣವನ್ನು ಮತ್ತು ಒಂದು ಚಿಟಿಕೆ ಕಾಳು ಮೆಣಸಿನ ಪುಡಿ ಸೇರಿಸಿ ಕುದಿಸಿ ನಂತರ ಈ ಕಷಾಯಕ್ಕೆ ಒಂದು ಕಮಚ ಜೇನುತುಪ್ಪ ಸೇರಿಸಿ ದಿನಕ್ಕೆ 3 ಬಾರಿ ಕುಡಿದರೆ ನೆಗಡಿ ಇಲ್ಲವಾಗುತ್ತದೆ.
2. ಚಿಟಿಕೆ ಉಪ್ಪನ್ನು ಹಾಕಿ ಅದರಿಂದ ಬಾಯಿ ಮುಕ್ಕಳಿಸಬೇಕು. ಅಂದರೆ ಟಾನ್ಸಿಲ್ ನಿಂದ ನರಳುತ್ತಿರುವವರು ಗುಣಮುಖರಾಗುವರು. ದಿನಕ್ಕೆ ನಾಲ್ಕು ಬಾರಿಯಾದರು ಮುಕ್ಕಳಿಸಬೇಕು.
3. ಒಂದು ವೀಳ್ಯದೆಲೆಯೊಂದಿಗೆ 4-5 ಕಾಳು ಮೆಣಸು ಮತ್ತು ಒಂದೆರಡು ಹರಳು ಉಪ್ಪು ಹಾಕಿಕೊಂಡು ಅಗಿದು ತಿನ್ನುವುದರಿಂದ ಕಪ್ಪು ಹೊಗುತ್ತದೆ.
4. ಬಿಸಿ ಬಿಸಿಯಾದ ಹಸುವಿನ ಹಾಲಿಗೆ ಸ್ವಲ್ಪ ಅರಿಶಿನದ ಪುಡಿ ಮತ್ತು ಕಾಳು ಮೆಣಸಿನ ಪುಡಿಯನ್ನು ಹಾಕಿ ಕದಡಿ ಕುಡಿಯುವುದರಿಂದ ಕೆಮ್ಮು, ನೆಗಡಿ ಮತ್ತು ಗಂಟಲು ನೋವು ನಿವಾರಣೆಯಾಗುವುದು.
5. ಒಂದು ಬಟ್ಟಲು ಮೆಂತ್ಯದ ಸೊಪ್ಪಿನ ಕಷಾಯಕ್ಕೆ ಒಂದು ಟೀ ಚಮಚ ಹಸಿಶುಂಠಿ, ಕಷಾಯ ಬೆರಸಿ ಜೇನುತುಪ್ಪದೊಂದಿಗೆ ಕುಡಿದರೆ ಬಿಡುಗಡೆಯಾಗುವುದು. ಕ್ಷಯ, ಕೆಮ್ಮು ರೋಗಗಳಿಗೆಲ್ಲ ಈ ಉಪಚಾರದಿಂದ ಉತ್ತಮ ಪರಿಹಾರ ದೊರೆಯುತ್ತದೆ.
6. ಹರಳು ಉಪ್ಪನ್ನು ಮತ್ತು ಲವಂಗವನ್ನು ಬಾಯಲ್ಲಿಟ್ಟುಕೊಂಡು ಚಪ್ಪರಿಸುತ್ತಿದ್ದರೆ ಕೆಮ್ಮು ಶಮನವಾಗಿ ಕಫ ನಿವಾರಣೆಯಾಗುವುದು.
7. ವೀಳ್ಯದೆಲೆಯೊಡನೆ ತುಳಸಿ ಸೊಪ್ಪು, ಲವಂಗ ದಿನಕ್ಕೆ ಎರಡು ಬಾರಿ ತಿನ್ನುವುದರಿಂದ ಕೆಮ್ಮಿನ ಬಾಧೆ ಕಡಿಮೆಯಾಗುವುದು, ಕಫ ನಿವಾರಣೆಯಾಗುವುದು.
8. ಹಸಿ ಮೂಲಂಗಿಯನ್ನು ತುರಿದು ಉಪ್ಪು ನಿಂಬೆರಸ ಸೇರಿಸಿ ತಿಂದರೆ ನೆಗಡಿ ನಿವಾರಣೆಯಾಗುತ್ತದೆ.
ಇದನ್ನು ಓದಿ: ದುರ್ಗಂಧ, ಹೊಟ್ಟೆ ನೋವು, ಮಲಬದ್ಧತೆ ನಿವಾರಣೆಗೆ ಪುದೀನಾ ಸೊಪ್ಪು ಯೋಗ್ಯ