ಕುರ ಹಾಗು ಕೀವುಗುಳ್ಳೆಗೆ ಮನೆ ಔಷದಿ:
1. 8-10 ಮೆಣಸಿನ ಕಾಳನ್ನು ಒದ್ದೆ ಬಟ್ಟೆಯಲ್ಲಿ ಕಟ್ಟಿ, ಕೆಂಡದಲ್ಲಿ ಸುಡಬೇಕು, ಅದು ಕೆಂಪು ಆದ ಮೇಲೆ ತೆಗೆದು ನುಣ್ಣಗೆ ಪುಡಿ ಮಾಡಿ, ಕೊಬ್ಬರಿ ಎಣ್ಣೆಯಲ್ಲಿ ಹದ ಮಾಡಿ ಕುರುವಿನ
ಸುತ್ತಲೂ ಹಚ್ಚಬೇಕು.
2. ನಂಜು ಬಟ್ಟಲು ಹೂವು ಹಿಸುಕಿ ಹಚ್ಚುವುದು.
3. ಉದ್ದಿನ ಹಿಟ್ಟು ಬೆಣ್ಣೆಯಲ್ಲಿ ಕಲಸಿ ಹಚ್ಚುವುದು.
4. ಮಿಗನ ಕೋಡು, ಕಾಕಿಸೊಪ್ಪಿನ ರಸದಲ್ಲಿ ತೇಯ್ದು ಬಿಸಿಮಾಡಿ ಹಚ್ಚುವುದು.
5. ಬಿಳಿದಾಸವಾಳದ ಹೂವು ತಿನ್ನುತ್ತಿದ್ದರೆ ಕುರು ಏಳುವುದಿಲ್ಲ. ಇದರ ಹೂವಿನ ತಂಬಳಿ ಮಾಡಿ ಮೊಸರಿನಲ್ಲಿ ಕಲಸಿ ಊಟ ಮಾಡಿದರೂ ಸಹ ಕುರು ಗುಣವಾಗಲೂ ಸಹಕಾರಿ. ಸುಳಿ (ಎಳೇಸೊಪ್ಪು) ಸೊಪ್ಪನ್ನು ಅಕ್ಕಿ ಜೊತೆಗೆ 1 ಮುಷ್ಠಿ ಉದ್ದು ಹಾಕಿ. ಅರೆದು ಕಡಬು ಮಾಡಿ ಬೆಣ್ಣೆ ಹಾಕಿ ಆಗಾಗ ತಿಂದರೆ ಕುರು, ಕಜ್ಜಿ ಏಳುವುದಿಲ್ಲ. ಕರುಳನ್ನು ಸ್ವಚ್ಚ ಮಾಡುತ್ತದೆ.
6. ತುಂಬಾ ಬಿಳಿ ದಾಸವಾಳದ ಹೂವನ್ನು ತುಪ್ಪದಲ್ಲಿ ಹುರಿದು, ಬೆಲ್ಲ ಪಾಕ ಮಾಡಿ ಹಾಕಿಟ್ಟಕೊಂಡು ತಿಂದರೆ ತುಂಬಾ ತಂಪು.
7. ಬಿಳಿದಾಸವಾಳದ ಹೂವನ್ನು ಒಣಗಿಸಿ ಪುಡಿಮಾಡಿ ರಾತ್ರಿ ಹಾಲಿಗೆ ಹಾಕಿ ಕುಡಿಯಬೇಕು. ಸೋಪಿನ ನೊರೆಗೆ ಸಕ್ಕರೆ ಹಾಕಿ ಕುರದ ಮೇಲಿಟ್ಟರೆ ಬೇಗ ಹಣ್ಣಾಗಿ ಒಡೆಯುತ್ತದೆ.
8. ಹಸಿ ಇಂಗನ್ನು ನೀರಿನಲ್ಲಿ ತೇಯ್ದು ದಪ್ಪವಾಗಿ ಲೇಪಿಸಬೇಕು.
೨.ಅರಿಸಿನದ ಕೊಂಬನ್ನು ಬೆಣ್ಣೆಯಲ್ಲಿ ತೇಯ್ದು ಹಚ್ಚಿದರೆ ಕುರ ಬೇಗ ಒಡೆದು ಹಣ್ಣಾಗಿ ಮಾಯುತ್ತದೆ.
10. ಶಂಖವನ್ನು ಲಿಂಬೆ ರಸದಲ್ಲಿ ತೇಯ್ದು ಹಚ್ಚಬೇಕು.
ಇದನ್ನು ಓದಿ: ಅತಿಯಾಗಿ ಬಿಕ್ಕಳಿಕೆ ಬರುತ್ತಿದ್ದರೆ ಏನು ಮಾಡಿಬೇಕು? ಇಲ್ಲಿದೆ ಉತ್ತಮ ಮನೆಮದ್ದು