ಕಾಲಿಗೆ ಸಂಬಂದಿಸಿದ ಕಾಯಿಲೆ; ಉಗುರುಸುತ್ತು ನಿವಾರಣೆಗೆ ಮನೆಮದ್ದು
1) 1 ಗಜ್ಜುಗ, 1 ಟೀ ಚಮಚ ಅರಸಿನ ಅಥವಾ ತುಂಡುಬೇರು, 1 ಚಿಟಿಕೆ ಕಾಳುಜೀರಿಗೆ, ಗಜ್ಜುಗ | ಒಡೆದು ಅದರ ಒಳಗಿನ ಬೀಜ ಎಲ್ಲವನ್ನು ನುಣ್ಣಗೆ ಕುಟ್ಟಿ ಪುಡಿ ಮಾಡಿ ಕೊಬ್ಬರಿ ಎಣ್ಣೆಯಲ್ಲಿ ಕಾಸಿಟ್ಟುಕೊಳ್ಳಬೇಕು. ಪ್ರತಿದಿನ ಈ ಮಿಶ್ರಣವನ್ನು 2 ಬಾರಿ ಹಚ್ಚಿಕೊಂಡರೆ ಉಗುರುಸುತ್ತು ಗುಣವಾಗುವುದು.
2) ಒಂದು ಪಾತ್ರೆಗೆ 1 ತುಂಡು ಸ್ಪಟಿಕ ಮತ್ತು 4 ಲೋಟ ನೀರು ಹಾಕಿಟ್ಟುಕೊಂಡು ದಿನಕ್ಕೆ 5-6, ಬಾರಿ ಅದರಲ್ಲಿ ಕೈ ಅಥವಾ ಕಾಲನ್ನು ಅದ್ದಿ 5-10 ನಿಮಿಷ ಇಟ್ಟುಕೊಳ್ಳುವುದರಿಂದ ಮತ್ತು ತೊಳೆಯುವುದರಿಂದ ಉಗುರುಸುತ್ತು ಗುಣವಾಗುವುದು.
3) ಮದರಂಗಿಯನ್ನು ಅರೆದು 1 ವಾರ ಕಟ್ಟಿದರೆ ಉಗುರುಸುತ್ತು ಗುಣವಾಗುವುದು.
4) ಕಣಿಗಲೆ ಸೊಪ್ಪು, ಬೆಣ್ಣೆ, ವೀಳ್ಯಕ್ಕೆ ಹಾಕುವ ಸುಣ್ಣವನ್ನು ಸ್ವಲ್ಪ ಅರೆದು ಕಟ್ಟಬೇಕು. 5. ಮದರಂಗಿ ಸೊಪ್ಪು, ಬೆಳ್ಳುಳ್ಳಿ, ಕಾಳುಮೆಣಸು, ಲಿಂಬೆ ಹುಳಿ ಸೇರಿಸಿ ಅರೆದು ಮುಲಾಮು ಮಾಡಿ ಲೇಪಿಸುವುದು.
6) ಮೆಣಸಿನ ಕಾಳನ್ನು ಎಮ್ಮೆಯ ಹಾಲಿನಲ್ಲಿ ಅರೆದು ಮೆತ್ತಿ ಕಟ್ಟುವುದು.
ಇದನ್ನು ಓದಿ: ಕಾಲಿಗೆ ಸಂಬಂಧಿಸಿದ ಕಾಯಿಲೆ; ಕಾಲಿನ ಆಣಿ ನಿವಾರಣೆಗೆ ಮನೆ ಮದ್ದು