ಜಂತುಹುಳುವಿನ ಸಮಸ್ಯೆಗೆ ನೀವು ತಿಳಿದುಕೊಳ್ಳಲೇಬೇಕಾದ ಉತ್ತಮ ಮನೆ ಔಷಧಿ

ಜಂತುಹುಳುವಿನ ಸಮಸ್ಯೆಗೆ ಮನೆ ಔಷಧಿ: 1. ಪಾರಿಜಾತ ಎಲೆಯ ರಸ 1-2 ಚಮಚಕ್ಕೆ, ಜೇನುತುಪ್ಪ ಸೇರಿಸಿ ತೆಗೆದು ಕೊಂಡರೆ ಜಂತು ದೋಷ ನಿವಾರಣೆಯಾಗುವುದು. 2. ಜೀರಿಗೆ ಪುಡಿಗೆ, ಜೇನುತುಪ್ಪ ಸೇರಿಸಿ ತಿಂದರೆ ಹೊಟ್ಟೆ ಹುಳು…

worm problems vijayaprabha

ಜಂತುಹುಳುವಿನ ಸಮಸ್ಯೆಗೆ ಮನೆ ಔಷಧಿ:

1. ಪಾರಿಜಾತ ಎಲೆಯ ರಸ 1-2 ಚಮಚಕ್ಕೆ, ಜೇನುತುಪ್ಪ ಸೇರಿಸಿ ತೆಗೆದು ಕೊಂಡರೆ ಜಂತು ದೋಷ ನಿವಾರಣೆಯಾಗುವುದು.

2. ಜೀರಿಗೆ ಪುಡಿಗೆ, ಜೇನುತುಪ್ಪ ಸೇರಿಸಿ ತಿಂದರೆ ಹೊಟ್ಟೆ ಹುಳು ಬೀಳುತ್ತದೆ.

Vijayaprabha Mobile App free

3. ಹಾಲಿನೊಂದಿಗೆ 5-6 ಹನಿ ಬೇವಿನೆಣ್ಣೆ ಹಾಕಿ ಕೊಟ್ಟರೆ ಹೊಟ್ಟೆ ಹುಳದ ತೊಂದರೆ ನಿವಾರಣೆಯಾಗುತ್ತದೆ.

4. ಮಗುವಿನ ಹೊಟ್ಟೆ ಹುಳದ ಉಪದ್ರ ಕಂಡರೆ, 1 ಚಿಟಿಕೆ ಸಾಸಿವೆಯನ್ನು ಎದೆ ಹಾಲಿನಲ್ಲಿ ಅರೆದು ಹೊಕ್ಕುಳ ಸುತ್ತ ಹಚ್ಚುವುದು ಮತ್ತು ಒಂದು ಒಂದು ಚಿಟಿಕೆ ಒಮವನ್ನು ಎದೆ
ಹಾಲಿನಲ್ಲಿ ಅರೆದು ಕುಡಿಸುವುದು.

5. ಹೊಟ್ಟೆ ಹುಳಕ್ಕೆ ಓಮದ ಕಷಾಯ ಮಾಡಿ ರಾತ್ರಿ-ಬೆಳಿಗ್ಗೆ ಕುಡಿದರೆ ಜಂತು ಭಾದೆ ನಿವಾರಣೆಯಾಗುವುದು.

6. ಮಜ್ಜಿಗೆಯಲ್ಲಿ ಗೆಜ್ಜುಗದ ತಿರುಳಿನ ಗಂಧ ತೇಯ್ದು ನೆಕ್ಕಬೇಕು, ಹುಳು ಬಿದ್ದು ಹೋಗುತ್ತದೆ.

7. ಓಮ, ಶುಂಠಿ, ಬೆಳ್ಳುಳ್ಳಿ ಜಜ್ಜಿ ಪೇಸ್ಟ್ ಮಾಡಿಕೊಳ್ಳಬೇಕು. ಸ್ವಲ್ಪ ಲಿಂಬೇ ರಸ ಸೇರಿಸಿ, 3-4 ಚಮಚ ಪಪ್ಪಾಯಿ ಪೇಸ್ಟ್ ಹಾಕಿ, ಸೇರಿಸಿ ರಾತ್ರಿ ಮಲಗುವ ಮುಂಚೆ ಸೇವಿಸಬೇಕು.

8. 4 ಚಮಚ ಹರಳೆಣ್ಣೆ, 1/2 ಚಮಚ ಜೀರಿಗೆ, 1/4 ಚಮಚ ಅರಸಿನ ಚೆನ್ನಾಗಿ ಕುದಿಸಿ ನಂತರ 1/4 ಚಮಚ ಲಿಂಬೇ ರಸ ಹಾಕಿ ಕುದಿಸಿ 6 ತಿಂಗಳಿಗೊಮ್ಮೆ ಸೇವಿಸಬೇಕು, ತಿಂಡಿಗೆ ಮೊದಲು ಬೆಳಿಗ್ಗೆ ತೆಗೆದುಕೊಳ್ಳಬೇಕು, ಆದಷ್ಟು ಆಹಾರ ಕಡಿಮ ತೆಗೆದುಕೊಳ್ಳಬೇಕು. ಉಪವಾಸ ಮಾಡಿದರು ಸರಿ, ಬಸುರಿಯರಿಗೆ 5 ವರ್ಷದ ಒಳಗಿನ ಮಕ್ಕಳಿಗೆ ಕೊಡಬಾರದು.

9. ವಾಯು ವಿಳಂಗದ ಕಷಾಯ ತಯಾರಿಸಿ ಕುಡಿಯಬೇಕು. ಇಲ್ಲವೇ ವಿಡಗಾಸವ ವಿಡಂಗಾರಿಷ್ಟ ಔಷಧಿ (ಆಯುರ್ವೇದ ಅಂಗಡಿಗಳಲ್ಲಿ ದೊರೆಯುತ್ತದೆ)ಯನ್ನು ದಿನಕ್ಕೆರಡು ಬಾರಿ. ಮೂರು ಚಮಚದಷ್ಟು ನೀರಿನೊಂದಿಗೆ ಬೆರೆಸಿ 15 ದಿನಗಳ ಕಾಲ ಕುಡಿಯಬೇಕು.

10. ಬೇವಿನ ಚಿಗುರು 1 ತೊಲ, ಓಮ 1 ತೊಲಗಳನ್ನು ಅರೆದು ಜೇನಿನಲ್ಲಿ ಕಲಸಿ ನಿತ್ಯ ರಾತ್ರಿ 1 ವಾರ ಸೇವಿಸಬೇಕು.

11. ಪಪಾಯಿ ಬೀಜ ಒಣಗಿಸಿ ಚೂರ್ಣಮಾಡಿ, 1 ಚಮಚ ಪುಡಿಯನ್ನು, 10 ದಿನಗಳು ನಿತ್ಯ ಬೆಳಿಗ್ಗೆ ಬಿಸಿ ನೀರಿನಲ್ಲಿ ತೆಗೆದು ಕೊಳ್ಳುವುದು. ನಂತರ 4 ಚಮಚ ಶುದ್ಧ ಹರಳೆಣ್ಣೆ ತೆಗೆದುಕೊಂಡರೆ ಹುಳುಗಳೆಲ್ಲಾ ಬಿದ್ದು ಹೋಗುತ್ತವೆ.

ಇದನ್ನು ಓದಿ: ನೆಗಡಿಗೆ ಇಲ್ಲಿದೆ ಸಿಂಪಲ್ ಮನೆ ಔಷಧಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.