ಚರ್ಮದ ಗಾಯಗಳು, ಕುರುಹುಗಳಾದರೆ ಹಾಗೂ ವಿವಿಧ ವ್ಯಾದಿಗಳಿಗೆ ಮನೆ ಔಷಧಿ
1. ಕಡಲೆ ಹಿಟ್ಟನ್ನು ಹಾಲಿನ ಕೆನೆಯೊಂದಿಗೆ ಚೆನ್ನಾಗಿ ಮಿದ್ದೀರಿ ಅದಕ್ಕೆ ನಿಂಬೆ ರಸ ಸೇರಿಸಿ ಮುಖಕ್ಕೆ ಹಚ್ಚುತ್ತಿದ್ದರೆ ಚರ್ಮ ಮೃದುವಾಗುವುದು.
2. ಒಂದು ಬಟ್ಟಲು ಆಗತಾನೆ ಕರೆದ ಹಾಲನ್ನು ಕುದಿಸಿ ನಂತರ ಅದಕ್ಕೆ ನಿಂಬೆ ರಸ ಹಿಂಡಿ ಹದಿನೈದು ನಿಮಿಷಗಳ ನಂತರ ಮುಖ, ಅಂಗೈ. ಅಂಗಾಲುಗಳಿಗೆ ಹಚ್ಚಿಕೊಂಡು ತೇವ ಆರಿದ ನಂತರ ಮಲಗಿರಿ ಇದರಿಂದ ಚೆನ್ನಾಗಿ ನಿದ್ರೆ ಬರುವುದು.
3, ಆಲೂಗಡ್ಡೆಯನ್ನು ನಿಂಬೆ ರಸದಲ್ಲಿ ನುಣ್ಣಗೆ ಅರೆದು ವ್ಯಾಧಿಗ್ರಸ್ತ ಚರ್ಮದ ಮೇಲೆ ಲೇಪಿಸಿ ಕಟ್ಟು ಕಟ್ಟಿದರೆ ಚರ್ಮವ್ಯಾದಿ ಶೀಘ್ರವಾಗಿ ಗುಣವಾಗುವುದು.
4, ಸೌತೇಕಾಯಿ ಸಿಪ್ಪೆ ಮತ್ತು ನಿಂಬೆ ಹಣ್ಣಿನ ಸಿಪ್ಪೆಯನ್ನು ನುಣ್ಣಗೆ ಅರೆದು ಕಲೆಗಳ ಮೇಲೆ ಹಚ್ಚಿ ತಿಕ್ಕುವುದರಿಂದ ಕಲೆಗಳು ನಿವಾರಣೆಯಾಗಿ ಚರ್ಮದ ಬಣ್ಣ ಉತ್ತಮಗೊಳ್ಳುವುದು.
5. ಅರಿಶಿನ ಪುಡಿಯನ್ನು ಹರಳೆಣ್ಣೆಯೊಂದಿಗೆ ಕಲಿಸಿ ಮೈಕೈಗೆ (ದೇಹಕ್ಕೆ).ಹಚ್ಚಿಕೊಂಡು ಸ್ನಾನ ಮಾಡುವ ಹವ್ಯಾಸ, ಬೆಳೆಸಿಕೊಂಡರೆ ಚರ್ಮದ ಕಾಂತಿ ಹೆಚ್ಚುತ್ತದೆ.
6, ಬೆಳುಳ್ಳಿ, ಹಿಪ್ಪೆಬೀಜ ಮತ್ತು ಅಡಿಗೆ ಉಪ್ಪನ್ನು ಅರೆದು ಗಾಯಗಳಿಗೆ ಹಚ್ಚಿದರೆ ಯು ಬಹುಬೇಗ ಗುಣವಾಗುವುದು.
7. ಬೆಣ್ಣೆಯೊಂದಿಗೆ ಬೆಳ್ಳುಳ್ಳಿಯನ್ನು ಅರೆದು ಹುಣ್ಣಿಗೆ ಹೆಚ್ಚುತ್ತಿದ್ದರೆ ಶೀಘ್ರವೇ ಗುಣವಾಗುತ್ತದೆ.
8. ಒಣ ದ್ರಾಕ್ಷಿಯನ್ನು ಒಂದು ರಾತ್ರಿ ನೀರಿನಲ್ಲಿ ನೆನೆ ಹಾಕಿ ಮಾರನೆ ದಿನ ನನದ ದ್ರಾಕ್ಷಿಯನ್ನು ಕಿವುಚಿ ರಸ ತೆಗೆದು ಸೋಸಿ ಸಕ್ಕರೆ ಹಾಕಿಕೊಂಡು ಕುಡಿದರೆ ಚರ್ಮ ರೋಗಗಳು ಶೀಘ್ರ ಗುಣವಾಗುವುದು.
9, ಸಾಸಿವೆಯನ್ನು ನೀರಿನಲ್ಲಿ ಅರೆದು ಹುಳುಕಡ್ಡಿಯಾಗಿರುವ ಸ್ಥಳದಲ್ಲಿ ಹಚ್ಚಿದರೆ ಹುಳುಕಡ್ಡಿ ನಿವಾರಣೆಯಾಗುವುದು.
10. ಎಳ್ಳಿನ ಎಣ್ಣೆಯನ್ನು ಚರ್ಮಗಳಿಗೆ ಹಚ್ಚುವುದರಿಂದ ಚರ್ಮ ರೋಗ ನಿವಾರಣೆಯಾಗುವುದು.
11. ಸುಟ್ಟ ಗಾಯಗಳಿಗೆ ಎಳ್ಳೆಣ್ಣೆಯನ್ನು ಸವರಿದರೆ ಗಾಯ ತೀವ್ರ ವಾಸಿಯಾಗುವುದು.
12. ಮೂಲಂಗಿ ಬೀಜಗಳನ್ನು ನಿಂಬೆ ರಸದಲ್ಲಿ ಅರೆದು ಹಚ್ಚುವುದರಿಂದ ಹುಳುಕಡ್ಡಿ ತುರಿ, ಕಜ್ಜಿ ರೋಗಗಳು ಗುಣವಾಗುವುದು.