ಬಾಯಿ, ಕಣ್ಣು, ಕಿವಿ ಮತ್ತು ಮೂಗಿನ ತೊಂದರೆಗಳಿಗೆ ಮನೆ ಔಷಧಿ
1 ನಿಂಬೆರಸದ ಹನಿಗಳನ್ನು ಕಿವಿಗೆ ಬಿಡುತ್ತಿದ್ದರೆ ಕಿವಿ ಸೋರುವುದು ನಿಂತು ಹೋಗುತ್ತದೆ,
2. ಪ್ರತಿದಿನವೂ ಊಟದ ಜೊತೆ ಹಸಿ ಈರುಳ್ಳಿ ಗಡ್ಡೆಯನ್ನು ನಂಜಿಕೊಂಡು ತಿಂದರೆ ಕಣ್ಣು ನೋವು ಮತ್ತು ತಲೆನೋವು ದೂರವಾಗುವುದು.
3. ಈರುಳ್ಳಿ ರಸವನ್ನು ಸ್ವಲ್ಪ ಬಿಸಿ ಮಾಡಿ ಕಿವಿಗೆ ಹಾಕಿಕೊಂಡರೆ ಶೀತಕ್ಕೆ ಬಂದಿರುವ ಕಿವಿನೋವು ದೂರವಾಗುವುದು.
4. ಎದೆ ಹಾಲನ್ನು ಕಣ್ಣಿಗೆ ಹಾಕುತ್ತಿದ್ದರೆ ಕಣ್ಣುರಿ, ಕಣ್ಣ ಚುಚ್ಚುವಿಕೆ ಗುಣವಾಗುವುದು.
5. ಎದೆ ಹಾಲಿನೊಂದಿಗೆ ಅಪ್ಪಟ ಹರಳೆಣ್ಣೆಯನ್ನು ಮಿಶ್ರಣ ಮಾಡಿ ಕುಡಿಸಿದರೆ ಕಣ್ಣುರಿ, ಕಣ್ಣು ಚುಚ್ಚುವಿಕೆ, ಕಣ್ಣು ಕೆಂಪು ಗುಣವಾಗುವುದು.
6. ಮಾವಿನ ಹಣ್ಣುಗಳು ದೊರಕುವ ಸಮಯದಲ್ಲಿ ಪ್ರತಿದಿನ ಒಂದು ಮಾವಿನ ಹಣ್ಣನ್ನು ಊಟವಾದ ನಂತರ ತಿನ್ನುತ್ತಾ ಇದ್ದರೆ ಆರೋಗ್ಯ ವೃದ್ಧಿಯಾಗುತ್ತದೆ. ಕಣ್ಣಿನ ರೋಗಗಳು ನಿವಾರಣೆಯಾಗುತ್ತದೆ.
7. ಕಿವಿಯೊಳಗೆ ಇರುವೆ ಸೇರಿಕೊಂಡಾಗ ಉಗುರು ಬೆಚ್ಚಗಿನ ನೀರಿನಲ್ಲಿ ಉಪ್ಪನ್ನು ಕರಗಿಸಿ ನಾಲ್ಕಾರು ಹನಿಗಳನ್ನು ಕಿವಿಯೊಳಗೆ ಹಾಕಿದರೆ ಇರುವೆ ಸಾಯುವುದು, ನೋವು ಉಪಶಮನವಾಗುವುದು.
8. ಹಸಿ ಮೂಲಂಗಿಯ ಚೂರುಗಳಿಗೆ ಕಾಳು ಮೆಣಸಿನ ಪುಡಿ, ಉಪ್ಪು ನಿಂಬೆರಸವನ್ನು ಮಿಶ್ರ ಮಾಡಿ ತಿಂದರೆ ದೃಷ್ಟಿಮಾಂದ್ಯ ನಿವಾರಣೆಯಾಗುತ್ತದೆ.
9. ಆಹಾರದ ಜೊತೆ ಹಸಿಮೂಲಂಗಿಯನ್ನು ಸೇವಿಸಿದರೆ ಕಣ್ಣು, ಕಿವಿ, ಮೂಗು ಮತ್ತು ಗಂಟಲು ರೋಗಗಳು ಗುಣವಾಗುತ್ತದೆ.
ಇದನ್ನು ಓದಿ: ಉರಿ ಮೂತ್ರಕ್ಕೆ ಸುಲಭ ಚಿಕಿತ್ಸೆ