ತಲೆನೋವು, ಅರೆತಲೆ ನೋವಿಗೆ ಮನೆ ಔಷಧಿ
1. ಬಿಸಿ ನೀರಿನೊಂದಿಗೆ ನಿಂಬೆರಸ ಮಿಶ್ರ ಮಾಡಿ ಒಂದು ಕಪ್ಪಿನಂತೆ ಪ್ರತಿದಿನ ಒಂದು ವಾರದವರೆಗೆ ಸೇವಿಸಿದರೆ ತಲೆಸುತ್ತುವಿಕೆ ನಿಲ್ಲುವುದು.
2. ಹಸಿ ಶುಂಠಿಯನ್ನು ಗಂಧದಲ್ಲಿ ತೇಯ್ದು ಹಣೆಗೆ ಸವರಿಕೊಂಡು ಮಲಗಿ ನಿದ್ರಿಸಿದರೆ ಬೆವರು ಹೊರಬಂದು ತಲೆನೋವು ಬಿಟ್ಟು ಹೋಗುವುದು.
3. ಪ್ರತಿದಿನವೂ ಊಟದೊಂದಿಗೆ ಈರುಳ್ಳಿ ಗಡ್ಡೆಯನ್ನು ನಂಜಿಕೊಂಡು ತಿಂದರೆ ಕಣ್ಣು ನೋವು ಮತ್ತು ತಲೆನೋವು ದೂರವಾಗುತ್ತದೆ.
4. ಬೇಯಸಿ ಬಸಿದ ನುಗ್ಗೆ ಸೊಪ್ಪಿನ ರಸಕ್ಕೆ ನಿಂಬೆರಸ ಹಿಂಡಿ ಎಂಟು ದಿನಗಳ ಕಾಲ ಸೇವಿಸಿದರೆ ತಲೆ ಸುತ್ತುವಿಕೆ ನಿಲ್ಲುವುದು.
5. ಏಲಕ್ಕಿ ಪುಡಿಯನ್ನು ಜೀರಿಗೆ ಕಷಾಯಕ್ಕೆ ಹಾಕಿಕೊಂಡು ಕುಡಿಯುವುದರಿಂದ ಪಿತ್ತದ ಬಾಧೆ ಇರುವುದಿಲ್ಲ ತಲೆ ಸುತ್ತುವಿಕೆ ನಿಂತು ಹೋಗುವುದು.
ಇದನ್ನು ಓದಿ: ಅಂಗಾಲು, ಅಂಗೈ ಉರಿಗೆ ಮನೆ ಔಷಧಿ