ಜ್ವರ ಬಾಧೆಗೆ ಮನೆ ಔಷಧಿ:
1. 7 ತುಳಸೀ ಎಲೆ, 3 ಕಾಳು ಮೆಣಸು ಇವುಗಳನ್ನು ಜಜ್ಜಿ ಅರ್ಧ ಸೇರು ನೀರಿಗೆ ಹಾಕಿ, ಒಂದು ಚಟಾಕಿಗೆ ( 1/4 ಪಾವು) ಬಿಸಿ ಇಳಿಸಬೇಕು. ಈ ಕಷಾಯವನ್ನು ರಾತ್ರಿ ಮಲಗುವಾಗ ಬೆಚ್ಚಗೆ ಮಾಡಿ ಕುಡಿಯುವುದರಿಂದ ಬೆವರು ಬಂದು ಇದ್ದಕ್ಕಿದ್ದ ಹಾಗೆ ಜ್ವರ ಇಳಿಯುತ್ತದೆ.
2. 2 ಕಿರಾತ ಕಡ್ಡಿ, ಅಮೃತಬಳ್ಳಿ ಸತ್ವ, ಕಹಿಜೀರಿಗೆ, ಹಿಪ್ಪಲಿ ಸಮಪ್ರಮಾಣದಲ್ಲಿ ತೆಗೆದುಕೊಂಡು ಚತುರ್ಥಾಂಶ ಕಷಾಯಮಾಡಿ ವಯೋಮಾನಕ್ಕೆ ಅನುಗುಣವಾಗಿ ನೀಡುವುದು.
3. ಎಕ್ಕದ ಹೂವು 1 ತೊಲ, ಬೆಳ್ಳುಳ್ಳಿ ಮತ್ತು ಕಾಳುಮೆಣಸು ಒಂದೊಂದು ತೊಲ, ಇವುಗಳನ್ನು ರುಬ್ಬಿ ಗುಳಿಗೆ ಮಾಡಿಟ್ಟುಕೊಂಡು ದಿನಕ್ಕೆ 3 ಸಲ ಕೊಡುವುದು.
4. ನಿಗದಿತ ವೇಳೆಗೆ ಜ್ವರ ಬರುತ್ತಿದ್ದರೆ ಅದು ಬರುವ ಮೊದಲು ನುಗ್ಗೆಸೊಪ್ಪಿನ ರಸ, ತುಂಬೆ ರಸವನ್ನು ಮೂಗಿಗೆ ಕೆಲವು ಹನಿಗಳನ್ನು ಹಿಂಡುವುದು.
5. ವಾಂತಿಜ್ವರಕ್ಕೆ ಅಮೃತ ಬಳ್ಳಿಯ ಚತುರ್ಥಾಂಶ ಕಷಾಯ ಒಳ್ಳೆಯದು.
6 ಜ್ವರದೊಂದಿಗಿರುವ ವಾಂತಿಗೆ ತೊಗರೀಬೇಳೆ ಹುರಿದು ಪುಡಿ ಮಾಡಿ ಜೇನಿನಲ್ಲಿ ನೆಕ್ಕಿಸುವುದು.
7. ಜ್ವರದ ಬಿಕ್ಕಳಿಕೆ ಮತ್ತು ವಾಂತಿಗೆ : ಅರಳೀ ಚಕ್ಕೆಯನ್ನು ಬೆಂಕಿಯಲ್ಲಿ ಸುಟ್ಟು ತೆಗೆದು, ನೀರಿಗೆ ಹಾಕಿ ಸೋಸಿ ಕೊಡುವುದು.
8. ಅಮೃತಬಳ್ಳಿ, ಕಿರಾತಕಡ್ಡಿಗಳ ಚೂರ್ಣ ಮಾಡಿ ಅದರ ಫಾಂಟ ಮಾಡಿ ಕುಡಿಯಲು ಕೊಡುವುದು.
ಇದನ್ನು ಓದಿ: ಚರ್ಮದ ಅಲರ್ಜಿಗೆ ಮನೆ ಔಷಧಿ