ರಕ್ತದ ಒತ್ತಡಕ್ಕೆ ಇಲ್ಲಿದೆ ಮನೆ ಔಷಧಿ:
1. ಕಲ್ಲಂಗಡಿ ಬೀಜದೊಳಗಿನ ತಿರುಳನ್ನು ಸೇವಿಸುವುದರಿಂದ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆ.
2. 1 ಗ್ರಾಂ ಕರಿ ಮೆಣಸಿನ ಚೂರ್ಣವನ್ನು ಸ್ವಲ್ಪ ಬೆಣ್ಣೆಯಲ್ಲಿ ಕಲಸಿ, ಪ್ರತೀದಿನ ಪ್ರಾತಃ ಕಾಲದಲ್ಲಿ 48 ದಿನಗಳವರೆಗೆ ಹಸಿದ ಹೊಟ್ಟೆಗೆ ಸೇವಿಸುವುದರಿಂದ ಅನುಕೂಲವಾಗುವುದು.
3. ಬೆಳ್ಳುಳ್ಳಿಯನ್ನು ಹಸಿಯಾಗಿಯೇ ಸೇವಿಸುವುದರಿಂದ ಬಹಳ ಉಪಯೋಗವಿದೆ. ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ 3-4 ಬೇಳೆಯನ್ನು ಸೇವಿಸಿದರೆ ಅಧಿಕ ರಕ್ತದ ಒತ್ತಡ ಕಡಿಮೆಯಾಗುತ್ತದೆ.
4. 1 ಲೋಟ ಹಾಲು, 5-10 ಗ್ರಾಂ ಒಣ ದ್ರಾಕ್ಷಿ, 1 ಇಡೀ ಬೆಳ್ಳುಳ್ಳಿ ಎಲ್ಲವನ್ನೂ ಸೇರಿಸಿ ಚೆನ್ನಾಗಿ ಕುದಿಸಿ. ಬೆಳ್ಳುಳ್ಳಿಯನ್ನು ಹಾಗೆಯೇ ಬಿಟ್ಟು, ಅದನ್ನು ತೆಗೆದು ಹಾಕಿ, ದ್ರಾಕ್ಷಿ ಮತ್ತು ಹಾಲನ್ನು ಕುಡಿಯಬೇಕು. ರಾತ್ರಿ ಮಲಗುವಾಗ ದ್ರಾಕ್ಷಿ ಚೆನ್ನಾಗಿ ಅಗಿದು ತಿನ್ನಬೇಕು.
5. ರಕ್ತದೊತ್ತಡಕ್ಕೆ ಮೇಲುಪ್ಪು ತಿನ್ನಬಾರದು. ದಿನಾಲೂ ಬೆಳಿಗ್ಗೆ ಸಂಜೆ ಕೆಂಪು ಮತ್ತಿಮರದ ಚೆಕ್ಕೆರು ಕಷಾಯಕ್ಕೆ ಹಾಲು ಸಕ್ಕರೆ ಬೆರಸಿ ಕುಡಿಯಬೇಕು.
6. ನಿತ್ಯ ಬೆಳಿಗ್ಗೆ ರಾತ್ರಿ 2 ಚಮಚ ಹಸಿ ಈರುಳ್ಳಿಯ ರಸದಲ್ಲಿ, 2 ಚಮಚ ಜೇನು ಸೇರಿಸಿ, 3-4 ವಾರ ಸೇವಿಸುವುದು.
7. ಅಕ್ಕಿಯ ತೆಳ್ಳಗಿನ ಗಂಜಿ, ಬೆಳ್ಳುಳ್ಳಿರಸ 1 ಚಮಚ, ಲಿಂಬೆ ರಸ 1 ಚಮಚ ಜೇನು ಸೇರಿಸಿ ನಿತ್ಯ 2 ಹೊತ್ತು 3-4 ವಾರ ಸೇವಿಸುವುದು.
8. ಪ್ರತಿ ಊಟದ ನಂತರ ಬಡೇಸೋಂಪು 1 ಚಮಚ, ಕರೀ ಉಪ್ಪು 2 ಗುಂಜಿ, ಸೇರಿಸಿ ಅಗಿದು ತಿನ್ನಬೇಕು.
9. 1 ಲೋಟ ನೀರಿಗೆ, 2 ಚಮಚ ಕೊತ್ತಂಬರಿ ಬೀಜದ ಚೂರ್ಣ, ಕಲ್ಲುಸಕ್ಕರೆಯನ್ನು ರಾತ್ರಿ ಹಾಕಿಟ್ಟು ಬೆಳಿಗ್ಗೆ ಸೋಸಿ ಕುಡಿಯುವುದು.
10. ಲಾವಂಚ, ದ್ರಾಕ್ಷಿ, ಸಕ್ಕರೆ ಇದನ್ನು ರಾತ್ರಿ 1 ಲೋಟ ನೀರಿಗೆ ಹಾಕಿ ಬೆಳಿಗ್ಗೆ ಸೋಸಿ ಕುಡಿಯುವುದು.
ಇದನ್ನು ಓದಿ: ರಕ್ತ ಹೀನತೆಗೆ ಮನೆಯಲ್ಲೇ ಉಪಚಾರ