ಸ್ಟ್ರೆಚ್‌ಮಾರ್ಕ್ಸ್ ಕಲೆ ಹೋಗಲಾಡಿಸಲು ಮನೆಮದ್ದು
* ಮೊಟ್ಟೆಯ ಬಿಳಿ ಭಾಗ: ಮೊದಲಿಗೆ ಸ್ಟ್ರೆಚ್‌ಮಾರ್ಕ್‌ಇರುವ ಜಾಗವನ್ನು ಸ್ವಚ್ಛಗೊಳಿಸಿ, ನಂತರ ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ಸ್ಟ್ರೆಚ್‌ಮಾರ್ಕ್ ಮೇಲೆ ಹಚ್ಚಿ ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ.
*ಅಲೋವೆರಾ: ಅಲೋವೆರಾದ ಲೋಳೆಯನ್ನು ಬಳಸಿ ನೇರವಾಗಿ ಚರ್ಮದ ಮೇಲೆ ಉಜ್ಜಿ, 15 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
*ಜೇನುತುಪ್ಪ: ಇದರಲ್ಲಿರುವ ನಂಜುನಿರೋಧಕ ಗುಣವು ಸ್ಟ್ರೆಚ್‌ಮಾರ್ಕ್ ಕಡಿಮೆ ಮಾಡುತ್ತದೆ. ಹೌದು, ಸಣ್ಣ ಬಟ್ಟೆಯ ತುಂಡು ಅಥವಾ ಹತ್ತಿಯಲ್ಲಿ ಜೇನುತುಪ್ಪವನ್ನು ಅದ್ದಿ, ಸ್ಟ್ರೆಚ್‌ಮಾರ್ಕ್ ಇರುವ ಜಾಗದಲ್ಲಿ ಇರಿಸಿ ಕ್ರಮೇಣ ಸ್ಟ್ರೆಚ್‌ಮಾರ್ಕ್ ಕಡಿಮೆಯಾಗುತ್ತ ಹೋಗುತ್ತದೆ.
*ಸಕ್ಕರೆ: ಒಂದು ಚಮಚ ಸಕ್ಕರೆಗೆ ಬಾದಾಮಿ ಎಣ್ಣೆ ಮತ್ತು ನಿಂಬೆ ರಸ ಬೆರೆಸಿ ಮಿಶ್ರಣ ಮಾಡಿ. ಇದನ್ನು ಸ್ನಾನಕ್ಕೆ ಹೋಗುವ ಮೊದಲು ಇದನ್ನು ಸ್ಕ್ರಬ್‌ನಂತೆ ಬಳಸಿ.