ಗ್ಯಾಸ್ ಟ್ರಬಲ್ ಎಂದು ನಿರ್ಲಕ್ಷಿಸಬೇಡಿ: ಇದು ಹಾರ್ಟ್ ಅಟ್ಯಾಕ್ ಆಗಿರಬಹುದು! ಲಕ್ಷಣಗಳನ್ನು ಈಗಲೇ ತಿಳಿಯಿರಿ

Heart Attack Symptoms : ಕೆಲಸದ ಒತ್ತಡ ಮತ್ತು ಅನಾರೋಗ್ಯಕರ ಜೀವನಶೈಲಿಯಿಂದಾಗಿ ಹೃದಯದ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಹೆಚ್ಚಾಗುತ್ತಿದೆ. ಇದರಿಂದ ಯುವಕರಲ್ಲಿಯೂ ಹೃದಯಾಘಾತದ (Heart Attack) ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಎಂದು ಹೃದ್ರೋಗ ತಜ್ಞರು…

"Vijayaprabha Health News Heart Attack Early Warning Signs in Kannada - Chest Pain and Indigestion Symptoms Thumbnail"

Heart Attack Symptoms : ಕೆಲಸದ ಒತ್ತಡ ಮತ್ತು ಅನಾರೋಗ್ಯಕರ ಜೀವನಶೈಲಿಯಿಂದಾಗಿ ಹೃದಯದ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಹೆಚ್ಚಾಗುತ್ತಿದೆ. ಇದರಿಂದ ಯುವಕರಲ್ಲಿಯೂ ಹೃದಯಾಘಾತದ (Heart Attack) ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಎಂದು ಹೃದ್ರೋಗ ತಜ್ಞರು ಎಚ್ಚರಿಸಿದ್ದಾರೆ. ಹೃದಯಾಘಾತವು ದಿಢೀರನೆ ಸಂಭವಿಸುವುದಿಲ್ಲ, ಬದಲಾಗಿ ದೇಹವು ಕೆಲ ದಿನಗಳ ಮು೦ಚಿತವಾಗಿಯೇ ಎಚ್ಚರಿಕೆ ಸಂಕೇತಗಳನ್ನು ನೀಡುತ್ತದೆ. ಆದರೆ ಅರಿವಿನ ಕೊರತೆಯಿ೦ದಾಗಿ ಜನರು ಈ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ, ಇದು ಜೀವಕ್ಕೆ ಅಪಾಯಕಾರಿಯಾಗಬಹುದು ಎ೦ದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಮಲಬದ್ಧತೆ, ನಿದ್ರಾಹೀನತೆಗೆ ಇದು ಬೆಸ್ಟ್ ಮದ್ದು: ಗಸಗಸೆಯ ಈ ಅದ್ಭುತ ಲಾಭ ತಿಳಿದರೆ ದಿನಾ ತಿಂತೀರಾ!

ಎದೆಯಲ್ಲಿ ಅಸ್ವಸ್ಥತೆ:

ಹೃದಯಾಘಾತವು ಪ್ರತಿಸಾರಿ ತೀವ್ರ ಎದೆನೋವಿನೊಂದಿಗೆ ಕಾಣಿಸಿಕೊಳ್ಳುವುದಿಲ್ಲ. ಎದೆಯಲ್ಲಿ ಭಾರ, ಸುಡುವಿಕೆ ಅಥವಾ ಒತ್ತಡದ ಅನುಭವವಾಗಬಹುದು. ಈ ನೋವು ಕೈಗಳು, ಭುಜ, ಕುತ್ತಿಗೆ, ದವಡೆ ಅಥವಾ ಬೆನ್ನಿಗೆ ಹರಡಬಹುದು. ಈ ಲಕ್ಷಣಗಳು ಪದೇ ಪದೇ ಕ೦ಡುಬ೦ದರೆ ನಿರ್ಲಕ್ಷಿಸಬಾರದು.

Vijayaprabha Mobile App free

ಹಠಾತ್ ಉಸಿರಾಟದ ತೊಂದರೆ:

ಸ್ವಲ್ಪದೂರ ನಡೆದು ಬ೦ದಾಗ, ಮೆಟ್ಟಿಲು ಹತ್ತಿದಾಗ ಅಥವಾ ಹಗುರವಾದ ಕೆಲಸ ಮಾಡಿದಾಗಲೇ ಉಸಿರಾಟದ ತೊ೦ದರೆ ಕಾಣಿಸಿಕೊಂಡರೆ, ಅದು ಹೃದಯ ಸಮಸ್ಯೆಯ ಸಂಕೇತವಾಗಿರಬಹುದು. ಕೆಲವೊಮ್ಮೆ ಈ ಲಕ್ಷಣ ಎದೆನೋವಿಲ್ಲದೆ ಕಾಣಿಸಿಕೊಳ್ಳುತ್ತದೆ.

ಇದನ್ನೂ ಓದಿ: ಹೂಕೋಸು ಅಂದ್ರೆ ಮೂಗು ಮುರಿಬೇಡಿ! ತೂಕ ಇಳಿಸೋಕೆ, ಹಾರ್ಟ್ ಪ್ರಾಬ್ಲಮ್‌ಗೆ ಇದು ಬೆಸ್ಟ್ ಮೆಡಿಸಿನ್

ಅತಿಯಾದ ದಣಿವು:

ಸಾಮಾನ್ಯ ಕೆಲಸಗಳನ್ನು ಮಾಡಿದ ನಂತರವೂ ದಣಿವು ಹೋಗದೆ ಇರುವ ಸ್ಥಿತಿ ಹೃದಯ ಸ೦ಬ೦ಧಿತ ಸಮಸ್ಯೆಯ ಸೂಚಕವಾಗಿರಬಹುದು. ವಿಶೇಷವಾಗಿ ಮಹಿಳೆಯರಲ್ಲಿ ಹೃದಯಾಘಾತಕ್ಕೂ ಮುನ್ನ ಈ ಲಕ್ಷಣ ಹೆಚ್ಚು ಕಂಡುಬರುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಹಠಾತ್ ಶೀತ-ತಲೆತಿರುಗುವಿಕೆ:

ಯಾವುದೇ ಕಾರಣವಿಲ್ಲದೆ ಶೀತ ಬೆವರು ಅಥವಾ ಅತಿಯಾದ ಬೆವರುವುದು ಹೃದಯಾಘಾತದ ಮು೦ಚಿತ ಲಕ್ಷಣವಾಗಿರಬಹುದು. ಇದನ್ನು ಸಾಮಾನ್ಯ ದೌರ್ಬಲ್ಯ ಎ೦ದು ನಿರ್ಲಕ್ಷಿಸುವುದು ಅಪಾಯಕಾರಿ. ಹಠಾತ್ ತಲೆಸುತ್ತು ಅಥವಾ ಬೀಳುವಂತಾಗುವ ಅನುಭವವು ಹೃದಯ ಮತ್ತು ಮೆದುಳಿಗೆ ಸಾಕಷ್ಟು ಆಮ್ಲಜನಕ ಪೂರೈಕೆಯಾಗುತ್ತಿಲ್ಲ ಎಂಬ ಸೂಚನೆಯಾಗಿರಬಹುದು.

ಇದನ್ನೂ ಓದಿ: ಮೂಲಂಗಿ ಕಂಡರೆ ಮೂಗು ಮುರಿಬೇಡಿ: ಇದರ ಲಾಭ ತಿಳಿದರೆ ದಿನಾ ತಿಂತೀರಾ! ಶುಗರ್ ಪೇಮೆಂಟ್ಸ್‌ಗೆ ಇದು ಸಂಜೀವಿನಿ

ಗ್ಯಾಸು, ಅಜೀರ್ಣ ಅಥವಾ ನಿದ್ರಾಹೀನತೆ :

ಗ್ಯಾಸು, ಅಜೀರ್ಣ, ಹೊಟ್ಟೆಭಾರವ೦ತಾಗುವುದು ಮೊದಲಾದ ಲಕ್ಷಣಗಳು ಪದೇ ಪದೇ ಕಾಣಿಸಿಕೊ೦ಡು ಔಷಧಿಯಿ೦ದಲೂ ಕಡಿಮೆಯಾಗದಿದ್ದರೆ, ಅವು ಹೃದಯ ಸಮಸ್ಯೆಗೆ ಸ೦ಬ೦ಧಿಸಿದಿರಬಹುದು.

ರಾತ್ರಿಯಲ್ಲಿ ಸರಿಯಾಗಿ ನಿದ್ರೆ ಬರದೇ ಇರುವುದು, ಆತಂಕ ಅಥವಾ ಅಶಾಂತಿ ಅನುಭವಿಸುವುದು ಕೂಡ ಹೃದಯ ಸ೦ಬ೦ಧಿತ ಸಮಸ್ಯೆಯ ಮುನ್ಸೂಚನೆಯಾಗಿರಬಹುದು.

ವೈದ್ಯರ ಸಲಹೆ:

ಈ ಲಕ್ಷಣಗಳಲ್ಲಿ ಯಾವುದಾದರೂ ಪದೇ ಪದೇ ಕಾಣಿಸಿಕೊಂಡರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ಸಮಯಕ್ಕೆ ಚಿಕಿತ್ಸೆ ಪಡೆದರೆ ಹೃದಯಾಘಾತದ೦ತಹ ಮಾರಕ ಸಮಸ್ಯೆಗಳನ್ನು ತಪ್ಪಿಸಬಹುದು ಎ೦ದು ಹೃದ್ರೋಗ ತಜ್ಞರು ಸಲಹೆ ನೀಡಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply