Plant foods | ಸಸ್ಯ ಆಧಾರಿತ ಆಹಾರಗಳ ಸೇವನೆಯ ಆರೋಗ್ಯ ಪ್ರಯೋಜನಗಳು ಹೀಗಿವೆ

Plant foods : ಸಸ್ಯ ಆಹಾರಗಳಾದ (Plant foods) ಧಾನ್ಯ, ಹಣ್ಣುಗಳು, ತರಕಾರಿಗಳ ಸೇವನೆಯು ಹೃದ್ರೋಗ (Heart disease), ಪಾರ್ಶ್ವವಾಯು, ಮಧುಮೇಹ (Diabetes) ಅಪಾಯವನ್ನು ಕಡಿಮೆ ಮಾಡುತ್ತವೆ. ಹೃದ್ರೋಗದ ಅಪಾಯ ಕಡಿಮೆ – Eating…

Health benefits of plant foods

Plant foods : ಸಸ್ಯ ಆಹಾರಗಳಾದ (Plant foods) ಧಾನ್ಯ, ಹಣ್ಣುಗಳು, ತರಕಾರಿಗಳ ಸೇವನೆಯು ಹೃದ್ರೋಗ (Heart disease), ಪಾರ್ಶ್ವವಾಯು, ಮಧುಮೇಹ (Diabetes) ಅಪಾಯವನ್ನು ಕಡಿಮೆ ಮಾಡುತ್ತವೆ.

ಹೃದ್ರೋಗದ ಅಪಾಯ ಕಡಿಮೆ – Eating plant foods lowers the risk of heart disease

ಸಸ್ಯಾಹಾರಗಳಾದ ಧಾನ್ಯಗಳು, ಹಣ್ಣುಗಳು, ತರಕಾರಿಗಳು, ಕಾಳುಗಳು ಮತ್ತು ಬೀಜಗಳು ಕೊಬ್ಬು ಮತ್ತು ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತವೆ.

ಕ್ಯಾನ್ಸರ್ ವಿರುದ್ಧ ರಕ್ಷಣೆ – Protection against cancer

ಹಲವಾರು ಅಧ್ಯಯನಗಳು ಸಸ್ಯಾಹಾರಿಗಳಲ್ಲಿ ಕ್ಯಾನ್ಸ‌ರ್ ಅಪಾಯ ಕಡಿಮೆ ಇರುವುದನ್ನು ಪತ್ತೆಹಚ್ಚಿವೆ. ಸಸ್ಯಾಹಾರಗಳಲ್ಲಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮತ್ತು ಕ್ಯಾನ್ಸ‌ರ್ ವಿರುದ್ಧ ಹೋರಾಡಲು ಸಹಾಯ ಮಾಡುವ ಪೌಷ್ಟಿಕಾಂಶಗಳಿವೆ.

Vijayaprabha Mobile App free

ತೂಕ ನಷ್ಟ – weight loss

ಸಸ್ಯ-ಆಧಾರಿತ ಆಹಾರಗಳು ವಿಟಮಿನ್, ಖನಿಜಗಳು, ಮತ್ತು ಆಂಟಿಆಕ್ಸಿಡೆಂಟ್ ಗಳಲ್ಲಿ ಸಮೃದ್ಧವಾಗಿವೆ. ಜೊತೆಗೆ ಕಡಿಮೆ ಕ್ಯಾಲೋರಿಗಳನ್ನು ಮತ್ತು ಹೆಚ್ಚಿನ ಫೈಬ‌ರ್ ಅನ್ನು ಹೊಂದಿರುವುದರಿಂದ ತೂಕ ನಿಯ೦ತ್ರಿಸಲು ಸಹಾಯ ಮಾಡುತ್ತವೆ.

ಮಧುಮೇಹ ನಿಯಂತ್ರಣ – Diabetes control

ಸಸ್ಯಾಹಾರಗಳಲ್ಲಿ ಫೈಬ‌ರ್ ಅಧಿಕವಾಗಿರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ತರಕಾರಿಗಳು, ಸಂಪೂರ್ಣ ಧಾನ್ಯಗಳು ಮತ್ತು ಬೀನ್ಸ್‌ಗಳು ಟೈಪ್ 2 ಡಯಾಬಿಟಿಸ್‌ ತಡೆಗಟ್ಟಲು ಸಹಾಯ ಮಾಡುತ್ತದೆ.

ಸಂಧಿವಾತದ ನೋವು ಕಡಿಮೆ – Arthritis pain is reduced

ಸಸ್ಯಾಹಾರದಲ್ಲಿರುವ ವಿಟಮಿನ್‌ಗಳು ಮತ್ತು ಖನಿಜಗಳು ದೇಹದ ಉರಿಯೂತವನ್ನು ಕಡಿಮೆ ಮಾಡುತ್ತದೆ. ಸಂಧಿವಾತವು ಉರಿಯೂತದ ಸಮಸ್ಯೆಯಾಗಿರುವುದರಿಂದ ಸಸ್ಯಾಹಾರ ಸೇವನೆಯಿಂದ ಸಂಧಿವಾತದ ನೋವು ಕಡಿಮೆಯಾಗುತ್ತದೆ.

ಮಾನಸಿಕ ಆರೋಗ್ಯ ಸುಧಾರಣೆ – Improving mental health

ಸಸ್ಯಾಹಾರಿಗಳಲ್ಲಿ ಖಿನ್ನತೆ, ಒತ್ತಡ ಮತ್ತು ಆತಂಕದ ಲಕ್ಷಣಗಳು ಕಡಿಮೆ ಮಟ್ಟದಲ್ಲಿದೆ ಎಂದು ಅಧ್ಯಯನಗಳು ಕಂಡುಕೊಂಡಿವೆ. ಸಸ್ಯಾಹಾರದಲ್ಲಿನ ಪೋಷಕಾಂಶಗಳು ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಬೆಂಬಲಿಸುತ್ತವೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.