Pudina Benefits: ನಾವು ದಿನನಿತ್ಯ ಅಡುಗೆಯ ರುಚಿ ಹೆಚ್ಚಿಸಲು ಬಳಸುವ ಪುದೀನಾ (Pudina) ಕೇವಲ ರುಚಿಗಷ್ಟೇ ಸೀಮಿತವಲ್ಲ. ಇದೊಂದು ನೈಸರ್ಗಿಕ ಔಷಧದ ಗಣಿ. ನಿಮಗೆ ಗೊತ್ತಿಲ್ಲದ ಪುದೀನಾ ಎಲೆಯ ಅದ್ಭುತ ಪ್ರಯೋಜನಗಳು ಇಲ್ಲಿವೆ.

1. ಜೀರ್ಣಕ್ರಿಯೆಗೆ ರಾಮಬಾಣ (Digestion Booster)
ನಿಮಗೆ ಊಟ ಸೇರುತ್ತಿಲ್ಲವೇ? ಅಥವಾ ತಿಂದ ಆಹಾರ ಜೀರ್ಣವಾಗದೆ (Indigestion) ತೊಂದರೆ ಅನುಭವಿಸುತ್ತಿದ್ದೀರಾ? ಹಾಗಿದ್ದರೆ ಪುದೀನಾ ಸೇವಿಸಿ. ಇದರಲ್ಲಿರುವ ‘ಉತ್ಕರ್ಷಣ ನಿರೋಧಕಗಳು’ (Antioxidants) ಜೀರ್ಣಕ್ರಿಯೆಯನ್ನು ವೇಗಗೊಳಿಸಿ, ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತದೆ.
ಇದನ್ನೂ ಓದಿ: ದಿನಕ್ಕೆ 4 ನೆನೆಸಿದ ಬಾದಾಮಿ ತಿಂದರೆ ಏನಾಗುತ್ತೆ ಗೊತ್ತಾ? ಸೌಂದರ್ಯದಿಂದ ಆರೋಗ್ಯದವರೆಗೆ ಇಲ್ಲಿದೆ ಮ್ಯಾಜಿಕ್!
2. ರೋಗ ನಿರೋಧಕ ಶಕ್ತಿ ಹೆಚ್ಚಳ (Immunity)
ಪುದೀನಾದಲ್ಲಿ ವಿಟಮಿನ್-ಸಿ (Vitamin C) ಹೇರಳವಾಗಿದೆ. ಇದು ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಸಣ್ಣಪುಟ್ಟ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.
3. ಅಸ್ತಮಾ ರೋಗಿಗಳಿಗೆ ಸಂಜೀವಿನಿ
ಉಸಿರಾಟದ ತೊಂದರೆ ಅಥವಾ ಅಸ್ತಮಾ (Asthma) ಇರುವವರು ತಮ್ಮ ಆಹಾರದಲ್ಲಿ ತಪ್ಪದೇ ಪುದೀನಾ ಬಳಸಬೇಕು. ಇದು ಶ್ವಾಸಕೋಶದ ಸಮಸ್ಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ತೂಕ ಇಳಿಸಬೇಕಾ? ಮೂಳೆ ಗಟ್ಟಿಯಾಗಬೇಕಾ? ಹಾಗಿದ್ರೆ ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ.
4. ತಲೆನೋವಿಗೆ ಬೆಸ್ಟ್ ಮದ್ದು
ತಲೆನೋವು ಬಂದಾಗ ಪೇನ್‌ಕಿಲ್ಲರ್ ನುಂಗುವ ಬದಲು, ಪುದೀನಾ ಸೊಪ್ಪಿನ ಪರಿಮಳ ಅಥವಾ ಅದರ ಟೀ ಕುಡಿದು ನೋಡಿ. ಇದು ತಲೆನೋವನ್ನು ತಕ್ಷಣ ಶಮನಗೊಳಿಸುವ ಶಕ್ತಿ ಹೊಂದಿದೆ.
5. ಪೋಷಕಾಂಶಗಳ ಆಗರ
ಈ ಪುಟ್ಟ ಎಲೆಯಲ್ಲಿ ಕಬ್ಬಿಣಾಂಶ (Iron) ಮತ್ತು ಪೊಟ್ಯಾಸಿಯಮ್ ಕೂಡ ಅಡಗಿದ್ದು, ದೇಹದ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ.




