ಶುಂಠಿಯು ಅಡುಗೆ ರುಚಿ ಹೆಚ್ಚಿಸುವ ಜೊತೆಗೆ ಆರೋಗ್ಯ ಲಾಭಗಳನ್ನು ಕೂಡ ನೀಡುತ್ತದೆ

Ginger : ಶುಂಠಿ ಆಹಾರದಲ್ಲಿ ಬಳಸಲಾಗುವ ಒಂದು ಸಂಬಾರ ಪದಾರ್ಥ. ಇದು ಅಡುಗೆ ರುಚಿ ಹೆಚ್ಚಿಸುವ ಜೊತೆಗೆ ಬಹಳ ಒಳ್ಳೆಯ ಮೂಲಿಕೆ ಎಂದು ಕರೆಯಲಾಗುತ್ತದೆ. ಹೌದು, ಶುಂಠಿಯಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್…

Ginger

Ginger : ಶುಂಠಿ ಆಹಾರದಲ್ಲಿ ಬಳಸಲಾಗುವ ಒಂದು ಸಂಬಾರ ಪದಾರ್ಥ. ಇದು ಅಡುಗೆ ರುಚಿ ಹೆಚ್ಚಿಸುವ ಜೊತೆಗೆ ಬಹಳ ಒಳ್ಳೆಯ ಮೂಲಿಕೆ ಎಂದು ಕರೆಯಲಾಗುತ್ತದೆ.

ಹೌದು, ಶುಂಠಿಯಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ ಮತ್ತು ಬಿ ಕಾಂಪ್ಲೆಕ್ಸ್ ಇದೆ. ಇದು ಮೆಗ್ನಿಸಿಯಮ್, ಫಾಸ್ಪರಸ್, ಸಿಲಿಕಾನ್, ಸೋಡಿಯಂ, ಕಬ್ಬಿಣ, ಸತು, ಕ್ಯಾಲ್ಸಿಯಂ, ಬೀಟಾ-ಕ್ಯಾರೋಟಿನ್ ನಂತಹ ಖನಿಜಗಳಿಂದ ಸಮೃದ್ಧವಾಗಿದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಶುಂಠಿಯಲ್ಲಿರುವ ಜಿಂಜೆರೋಲ್‌ಗಳು ನೋವುನಿವಾರಕ, ಉದ್ವೇಗಶಾಮಕ ಮತ್ತು ಬ್ಯಾಕ್ಟಿರಿಯಾ ವಿರೋಧಿ ಗುಣಗಳನ್ನು ಹೊಂದಿವೆ.

ಊದಿಕೊಂಡ ಕೀಲುಗಳ ನೋವು ಶಮನಕ್ಕಾಗಿ ಪ್ರತಿದಿನ ಶುಂಠಿಯನ್ನು ಈ ರೀತಿಯಾಗಿ ಸೇವಿಸಿ

ದಿನನಿತ್ಯ ಶುಂಠಿ ಸೇವನೆ ಮಾಡುವುದರಿಂದ ಕೀಲುಗಳ ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶುಂಠಿಯು ಶೋಗೋಲ್ ಅನ್ನು ಸಹ ಹೊಂದಿದೆ. ಇದು ನೋವು ನಿವಾರಣೆ ಮಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಜೊತೆಗೆ ಕ್ಯಾನ್ಸರ್ ಮತ್ತು ಹೃದ್ರೋಗದ ವಿರುದ್ಧವೂ ಹೋರಾಡಲು ಸಹಾಯ ಮಾಡುತ್ತದೆ. ಪ್ರತಿದಿನ ಸುಮಾರು 1.5 ಸೆಂಟಿಮೀಟರ್ ಸಣ್ಣ ತುಂಡುಗಳಾಗಿ ಕತ್ತರಿಸಿ ಚಹಾ, ಆಹಾರ ಪದಾರ್ಥಗಳ ಜೊತೆಗೆ ಮಿಶ್ರಣ ಮಾಡಿ ತಿನ್ನಬೇಕು. ಹೀಗೆ ನಿತ್ಯವು ತಿನ್ನುವವರ ಆರೊಗ್ಯ ಅತ್ಯುತ್ತಮವಾಗಿರುತ್ತದೆ.

Vijayaprabha Mobile App free

ನೆಗಡಿ, ಕಫ ಗುಣಪಡಿಸಲು ಮನೆಯಲ್ಲೇ ಸುಲಭವಾಗಿ ತಯಾರಿಸಿ ಶುಂಠಿ ಮೆಣಸಿನ ಬರ್ಫಿ

ಚಳಿಗಾಲದಲ್ಲಿ ಶುಂಠಿ ಸೇವಿಸುವುದು ಆರೋಗ್ಯಕ್ಕೆ ಉತ್ತಮವಾಗಿದೆ. ಬ್ಯಾಕ್ಟಿರಿಯಾ ವಿರೋಧಿ ಹಾಗೂ ಉರಿಯೂತ ನಿವಾರಕ ಗುಣಗಳು ಶುಂಠಿಯಲ್ಲಿ ಅಡಕವಾಗಿದೆ. ಇನ್ನು ನೆಗಡಿ, ಕಫ, ಕೆಮ್ಮಿಗೆ ಇಂಗ್ಲಿಷ್ ಮೆಡಿಸಿನ್ ಗಿಂತ ಮನೆ ಮದ್ದು ಅತ್ಯುತ್ತಮವಾಗಿದೆ. ಇದು ಯಾವುದೇ ಅಡ್ಡಪರಿಣಾಮ ಬೀರದಂತೆ ನೋಡಿಕೊಳ್ಳುತ್ತದೆ.

ಹಲವು ರೋಗಗಳಿಗೆ ಮನೆಮದ್ದಾಗಿರುವ ಶುಂಠಿ ಕಷಾಯ ತಯಾರಿಸುವುದು ಹೇಗೆ?

ಶುಂಠಿಯಲ್ಲಿನ ಪೋಷಕಾಂಶಗಳು ಚಲಿಗಾಲದಲ್ಲಿ ಮೈ ಬೆಚ್ಚಗೊಳಿಸುತ್ತದೆ. ಹಾಗಾಗಿ ಶುಂಠಿಯ ಕಷಾಯವನ್ನು ಆಗಾಗ್ಗೆ ನಿಯಮಿತವಾಗಿ ಸೇವನೆ ಮಾಡಬೇಕು. ಒಂದು ಲೋಟ ನೀರಿಗೆ ಸ್ವಚ್ಛವಾಗಿ ತೊಳೆದ ಶುಂಠಿಯನ್ನು ಹಾಕಿ ಕುದಿಸಿ ಸೋಸಿಕೊಂಡ ನಂತರ ರುಚಿಗೆ ತಕ್ಕಷ್ಟು ಜೇನುತುಪ್ಪ ಮಿಶ್ರಣ ಮಾಡಿ ಕುಡಿಯಬೇಕು. ಇನ್ನೊಂದು ವಿಧಾನವೆಂದರೆ, ಒಂದು ಲೋಟ ನೀರಿಗೆ ಶುಂಠಿ, ನಿಂಬೆ ರಸ, ಕಾಳು ಮೆಣಸು ಹಾಗೂ ಬೆಲ್ಲವನ್ನು ಹಾಕಿ ಕುದಿಸಿ. ನಂತರ ಇದನ್ನು ಬಿಸಿ ಆರುವ ಮುನ್ನವೇ ಕುಡಿಯುವುದರಿಂದ ನೆಗಡಿ ಮತ್ತು ಕಫ ಕಡಿಮೆಯಾಗುತ್ತದೆ.

ಶುಂಠಿಯು ಮುಟ್ಟಿನ ನೋವನ್ನು ನಿವಾರಣೆ ಮಾಡುವಲ್ಲಿ ಸಹಕಾರಿಯಾಗಿದೆ

ಮುಟ್ಟಿನ ಸಮಯದಲ್ಲಿ ಹೊಟ್ಟೆಯಲ್ಲಿ ಸೆಳೆತ, ಹೊಟ್ಟೆ ನೋವಿದ್ದರೆ ಅದನ್ನು ಕಡಿಮೆ ಮಾಡುವ ಶಕ್ತಿ ಶುಂಠಿಗೆ ಇದೆ. ಪ್ರತಿದಿನ ಶುಂಠಿಯನ್ನು ಯಾವುದಾದರೂ ಒಂದು ರೂಪದಲ್ಲಿ ತಿಂದರೆ ಮುಟ್ಟಿನ ನೋವು ಹಾಗು ತೀವ್ರ ಕಿಬ್ಬೊಟ್ಟೆ ನೋವನ್ನು ನಿವಾರಿಸುತ್ತದೆ. ಅನೇಕ ಮಹಿಳೆಯರು ತಮ್ಮ ಋತುಚಕ್ರದ ಸಮಯದಲ್ಲಿ ಶುಂಠಿ ಪುಡಿಯನ್ನು ಬೆರಸಿದ ಹಾಲನ್ನು ಕುಡಿಯುವುದರಿಂದ ನೋವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದ್ದು, ಶುಂಠಿಯನ್ನು ದಿನನಿತ್ಯ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಲು ಶುಂಠಿಯ ಮನೆಮದ್ದು

  • ಪಾತ್ರೆಗೆ ನೀರು, ಹಾಲು, ಸಕ್ಕರೆ ಹಾಕಿ ಚೆನ್ನಾಗಿ ಕುದಿಸಿ
  • ಶುಂಠಿಯ ಸಿಪ್ಪೆ ತೆಗೆದು ಸಣ್ಣ ತುಂಡುಗಳಾಗಿ ಹೆಚ್ಚಿಟ್ಟುಕೊಳ್ಳಿ
  • ಹಾಲು ಚೆನ್ನಾಗಿ ಕುದಿದ ನಂತರ ಹೆಚ್ಚಿಟ್ಟ ಶುಂಠಿ ಹಾಕಿ
  • ಒಂದು ನಿಮಿಷ ಕುದಿಸಿದ ನಂತರ ಟೀ ಪುಡಿಯನ್ನು ಹಾಕಿ
  • ಎರಡು ನಿಮಿಷ ಕುದಿಸಿದ ನಂತರ ಸೋಸಿಕೊಳ್ಳಬೇಕು

ಅತಿಯಾದ ಶುಂಠಿ ಸೇವನೆ ಈ ಸಮಸ್ಯೆಗೆ ಕಾರಣವಾಗಬಹುದು

  • ಹೊಟ್ಟೆಯ ಕಿರಿಕಿರಿ
  • ರಕ್ತದ ಸಕ್ಕರೆ ಮಟ್ಟ ಕಡಿಮೆಯಾಗಬಹುದು
  • ಮಲಬದ್ಧತೆ
  • ಆಮ್ಮಿಯತೆ
  • ಬಾಯಿ ಹುಣ್ಣಿನ ಸಮಸ್ಯೆ
  • ನಿದ್ರಾಹೀನತೆ
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.