ಕೆಲವರಿಗೆ ಬೆಳಗ್ಗೆ ಎದ್ದ ತಕ್ಷಣ ಚಹಾ ಬೇಕು. ದಿನಕ್ಕೆ 2-3 ಕಪ್ ಚಹಾ ಕುಡಿಯುವವರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ಇದು ಆರೋಗ್ಯಕ್ಕೆ ಹಾನಿಕರ ಎಂಬುದು ವೈದ್ಯರ ಅಭಿಪ್ರಾಯ.
ಹೌದು, ದಿನಕ್ಕೆ 2-3 ಬಾರಿ ಚಹಾ ಸೇವಿಸಿದರೆ ತೂಕ ಇನ್ನೂ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಉತ್ತಮ ಆರೋಗ್ಯಕ್ಕಾಗಿ, ತೂಕ ನಿಯಂತ್ರಣದಲ್ಲಿಡಲು ಚಹಾದಲ್ಲಿ ಜಾಸ್ತಿ ಸಕ್ಕರೆ ಬಳಸಬಾರದು. ಸಕ್ಕರೆಯ ಬದಲು ಜೇನುತುಪ್ಪ ಅಥವಾ ಬೆಲ್ಲ ಬಳಸಬಹುದು. ಕೊಬ್ಬಿನಂಶ ಇರುವ ಹಾಲು ಬಳಸಿ. ಹಾಲಿನ ಪುಡಿಯನ್ನು ಅಪ್ಪಿತಪ್ಪಿಯೂ ಬಳಸಬೇಡಿ.
ಬಿಸಿ ಟೀ ಟೀ ಹೀರುವುದರಿಂದ ಅನ್ನನಾಳದ ಕ್ಯಾನ್ಸರ್ :
ಇನ್ನು, ಬಿಸಿ ಬಿಸಿ ಟೀ ಕುಡಿಯುವುದು ಎಲ್ಲರಿಗೂ ಪ್ರಿಯವಾದ ವಿಷಯ. ಆದರೆ ಬಿಸಿಯಾದ ಟೀ- ಸೇವನೆಯಿಂದ ಇದು ಗಂಟಲು ಮತ್ತು ಆಹಾರದ ಪೈಪ್ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ.
ಹೌದು, ಅಂದರೆ 140 ಡಿಗ್ರಿ ಫ್ಯಾರನ್ ಹೀಟ್ ತಾಪಮಾನದಲ್ಲಿ ಟೀ ಹೀರುವುದರಿಂದ ಅನ್ನನಾಳದ ಕ್ಯಾನ್ಸರ್ ಬರಬಹುದು ಎಂದು ಎಚ್ಚರಿಸಿದ್ದು, ಕಾಫಿ ಹಾಗು ಟೀ ತಯಾರಿಕೆ ಮತ್ತು ಸಿಪ್ ಮಾಡುವ ನಡುವೆ ಕನಿಷ್ಠವಾದರೂ 4 ನಿಮಿಷಗಳ ಅಂತರ ಇರಲೇಬೇಕು ಎಂದು ಅಧ್ಯಯನವೊಂದು ತನ್ನ ವರದಿಯಲ್ಲಿ ತಿಳಿಸಿದೆ.




