ರಕ್ತದಾನ ಮಾಡುವ ಮುನ್ನ ಮಾಡಬೇಕಾದ ಕೆಲಸಗಳು:
ರಕ್ತದಾನ ಮಾಡುವ ಮೊದಲು ಏನನ್ನಾದರೂ ತಿನ್ನಲು ಮರೆಯದಿರಿ. ಸಾಕಷ್ಟು ನೀರು ಕುಡಿಯಿರಿ.
ಮಾಡಬಾರದ ಕೆಲಸಗಳು:
ರಕ್ತದಾನ ಮಾಡುವ ಹಿಂದಿನ 24 ಗಂಟೆಗಳ ಒಳಗೆ ಆಲ್ಕೋಹಾಲ್ ಸೇವಿಸಬೇಡಿ ಮತ್ತು ಸಿಗರೇಟು ಸೇದಬೇಡಿ.
ರಕ್ತದಾನ ಮಾಡಿದ ಕೂಡಲೇ ಭಾರವಾದ ವ್ಯಾಯಾಮ ಮಾಡಬೇಡಿ.
ದೇಹದ ಮೇಲೆ ಹಚ್ಚೆ ಹಾಕಿಸಿಕೊಂಡ 6 ತಿಂಗಳೊಳಗೆ ರಕ್ತ ನೀಡಬೇಡಿ.
ರಕ್ತ ಶುದ್ಧೀಕರಿಸುವ ಆಹಾರಗಳನ್ನು ಆದಷ್ಟು ಸೇವಿಸಿ:

ದೇಹದಲ್ಲಿ ಕಿಡ್ನಿ & ಲಿವರ್ ರಕ್ತವನ್ನು ಶುದ್ಧೀಕರಿಸುವ ಕಾರ್ಯವನ್ನು ಮಾಡುತ್ತವೆ. ಅವುಗಳ ಕಾರ್ಯ ಕ್ಷಮತೆ ಹೆಚ್ಚಲು ಕೆಲ ತರಕಾರಿ & ಹಣ್ಣುಗಳನ್ನು ಸೇವಿಸಬೇಕು.
*ಬ್ರೋಕೋಲಿ ನಿಸರ್ಗದ ಒಂದು ಅತ್ಯುತ್ತಮ ರಕ್ತ ಶುದ್ಧಕಾರಕ ಆಹಾರಗಳಲ್ಲೊಂದು.
*ಹಸಿಯಾಗಿ ತಿನ್ನಬಹುದಾದ ಸೇಬು, ಪೇರಳೆ ಮತ್ತು ಪಿಯರ್ಸ್ ಮುಂತಾದ ಹಣ್ಣುಗಳಲ್ಲಿ ಕರಗುವ ನಾರಾಗಿರುವ ಪೆಕ್ಟಿನ್ ಅಂಶ ಇರಲಿದ್ದು, ಇದು ರಕ್ತವನ್ನು ಶುದ್ಧೀಕರಿಸಲು ಉಪಯುಕ್ತವಾಗಿದೆ.
* ರಕ್ತ ಶುದ್ದೀಕರಿಸಲು ಟೊಮಾಟೋ, ಹಸಿರು ಎಲೆ ತರಕಾರಿಗಳು, ಬೆಲ್ಲ, ನಿಂಬೆ ಸೇವಿಸಿ.
ಇದನ್ನು ಓದಿ: ಕರಬೂಜ ಹಣ್ಣಿನ ಸೇವನೆಯಿಂದ ಆಯಾಸ ದೂರ; ಹಸಿಶುಂಠಿಯಿಂದ ತಲೆಹೊಟ್ಟು ನಿವಾರಣೆ




