ಬೇಸಿಗೆ ಬೇಗೆಯಿಂದ ತಪ್ಪಿಸಿಕೊಳ್ಳೋಕೆ ನಾವು ಜ್ಯೂಸ್ ಮತ್ತು ಎಳನೀರು ಕುಡಿಯೋಕೆ ಹೆಚ್ಚು ಆದ್ಯತೆ ನೀಡುತ್ತೇವೆ. ಇದರಿಂದ ದೇಹಕ್ಕೆ ಸಾಕಷ್ಟು ಪ್ರಮಾಣದ ನೀರಿನ ಅಂಶ ಸಿಗುವಂತೆ ಮಾಡುತ್ತದೆ.
ಇದರ ಜತೆಗೆ ಗುಲಾಬಿ ಜ್ಯೂಸ್ ಸಹ ಬಿಸಿಲಿನಿಂದ ನಿಮಗೆ ರಕ್ಷಣೆ ನೀಡಬಲ್ಲದು. ಗುಲಾಬಿ ಎಸಳಿಗೆ ತುಳಸಿ ಬೀಜ, ಸಕ್ಕರೆ ಬೆರೆಸಿ, ಸ್ವಲ್ಪ ನಿಂಬೆ ರಸ ಹಿಂಡಿ. ನಂತರ ಅದಕ್ಕೆ ನೀರು ಹಾಕಿ, ಆಗಾಗ ಕುಡಿಯುತ್ತಿರಿ. ಇದರಿಂದ ಮೊಡವೆ ಕಡಿಮೆ ಆಗುತ್ತವೆ. ಅಲ್ಲದೆ ಬೇಸಿಗೆ ಬೇಗೆ ಕೂಡ ಕಡಿಮೆಯಾಗುತ್ತೆ.
ಗುಲಾಬಿ ಹೂವನ್ನು ಬೇಸಿಗೆಯ ಹೀಟ್ನಿಂದ ತಪ್ಪಿಸಿಕೊಳ್ಳಲು, ಗುಲಾಬಿ ಎಸಳು ಜೊತೆ ತುಳಸಿ ಬೀಜವನ್ನು ಸೇರಿಸಿ, ತೆಂಗಿನಕಾಯಿ ಸಕ್ಕರೆ ಬೆರೆಸಿ, ಸ್ವಲ್ಪ ಲಿಂಬು ಹಿಂಡಿ. ನಂತರ ಅದಕ್ಕೆ ನೀರು ಹಾಕಿ, ಆಗಾಗ ಕುಡಿಯುತ್ತಿರಿ. ಇದರಿಂದ ಬಿಸಿಲಿನಿಂದ ಉಂಟಾಗುವ ಹೀಟ್ ಕೂಡ ಕಡಿಮೆ ಮಾಡುತ್ತದೆ. ಜೊತೆಗೆ ಮೊಡವೆ ಕಡಿಮೆ ಆಗುತ್ತದೆ.
ಇನ್ನು ಹಾಲಿಗೆ ಗುಲ್ಕನ್ ಬೆರೆಸಿ ಸೇವಿಸಬಹುದಾಗಿದ್ದು, ಇದು ದೇಹವನ್ನು ತಂಪಾಗಿ ಇರಿಸುವುದರ ಜತೆಗೆ ಆ್ಯಸಿಡಿಟಿ ಕಡಿಮೆ ಮಾಡುತ್ತದೆ.