ಮನೆಯಲ್ಲಿ ತುಳಸಿ ಗಿಡ ಇದ್ದರೆ ನಾವು ಕಟ್ಟುನಿಟ್ಟಾಗಿ ಹಲವು ಕ್ರಮಗಳನ್ನು ಪಾಲಿಸಬೇಕಾಗುತ್ತದೆ.
ಹೌದು, ಪ್ರತಿ ದಿನ ಬೆಳಗ್ಗೆ ತುಳಸಿ ಗಿಡಕ್ಕೆ ನೀರನ್ನು ಅರ್ಪಿಸಬೇಕು. ಸಂಜೆ ವೇಳೆ ತುಳಸಿ ಗಿಡದ ಮುಂದೆ ದೀಪವನ್ನು ಹಚ್ಚಬೇಕು. ತುಳಸಿ ಗಿಡದ ಎಲೆಗಳನ್ನು ಮುರಿಯಬಾರದು.
ಭಾನುವಾರ, ಅಮವಾಸ್ಯೆ, ಏಕಾದಶಿಯಂದು ತುಳಸಿ ಗಿಡಕ್ಕೆ ನೀರು ಹಾಕಬಾರದು. ಈ ದಿನಗಳಲ್ಲಿ, ತುಳಸಿ ಜೀ ವಿಷ್ಣುವಿಗಾಗಿ ಉಪವಾಸವನ್ನು ಮಾಡುತ್ತಾಳೆಯಂತೆ. ಹಾಗಾಗಿ ಈ ದಿನಗಳಲ್ಲಿ ತುಳಸಿಗೆ ನೀರು ಹಾಕಿದರೆ, ತುಳಸಿ ದೇವಿಯ ಉಪವಾಸಕ್ಕೆ ಭಂಗವಾಗುತ್ತದೆ.
ಸಂಜೆಯ ಹೊತ್ತು ತುಳಸಿ ಗಿಡದ ಎಲೆಗಳನ್ನು ಕೀಳಲೇ ಬಾರದು. ಹೀಗೆ ಮಾಡುವುದು ಅತ್ಯಂತ ಅಶುಭಕರ ಎನ್ನಲಾಗಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.