ಹಾಡು ಕೇಳುತ್ತಾ ಮಲಗುತ್ತಿದ್ದೀರಾ? ಇಲ್ಲಿದೆ ಆರೋಗ್ಯಕ್ಕೆ ಆಗುವ ದುಷ್ಪರಿಣಾಮಗಳು

ರಾತ್ರಿ ಮಲಗುವ ವೇಳೆ ಹೆಚ್ಚಿನ ಜನರು ಸಂಗೀತವನ್ನು ಕೇಳುತ್ತಾ ಮಲಗಲು ಬಯಸುತ್ತಾರೆ. ಮಲಗುವಾಗ ಮನಸ್ಸಿಗೆ ಇಷ್ಟವಾಗುವ ಸಂಗೀತವನ್ನು ಕೇಳುತ್ತಾ ಮಲಗಿದರೆ ಮನಸ್ಸಿಗೆ ಹಿತವೆನಿಸುತ್ತದೆ ಎಂಬುದು ಹಲವು ಜನರ ಅಭಿಪ್ರಾಯ. ಆದರೆ ಇತ್ತೀಚಿನ ಸಂಶೋಧನೆಯ ಪ್ರಕಾರ…

ರಾತ್ರಿ ಮಲಗುವ ವೇಳೆ ಹೆಚ್ಚಿನ ಜನರು ಸಂಗೀತವನ್ನು ಕೇಳುತ್ತಾ ಮಲಗಲು ಬಯಸುತ್ತಾರೆ. ಮಲಗುವಾಗ ಮನಸ್ಸಿಗೆ ಇಷ್ಟವಾಗುವ ಸಂಗೀತವನ್ನು ಕೇಳುತ್ತಾ ಮಲಗಿದರೆ ಮನಸ್ಸಿಗೆ ಹಿತವೆನಿಸುತ್ತದೆ ಎಂಬುದು ಹಲವು ಜನರ ಅಭಿಪ್ರಾಯ.

ಆದರೆ ಇತ್ತೀಚಿನ ಸಂಶೋಧನೆಯ ಪ್ರಕಾರ ಬಹಳಷ್ಟು ಜನರು ನಿದ್ರಾಹೀನತೆಯ ಬಗ್ಗೆ ವೈದ್ಯರ ಬಳಿ ಸಮಸ್ಯೆ ಹೇಳಿಕೊಳ್ಳುತ್ತಿರುವುದು ಹೆಚ್ಚಾಗಿದೆ ಎನ್ನಲಾಗಿದೆ. ಇದಕ್ಕೆ ಕಾರಣ..,

ನಿದ್ರೆ ಮಾಡುವ ಸಮಯದಲ್ಲಿ ಹೆಡ್​ಫೋನ್​ ಧರಿಸಿಕೊಂಡು ಹಾಡು ಕೆಳುತ್ತಾ ಮಲಗುವುದರಿಂದ ನಿದ್ರಾಹೀನತೆ ಸಮಸ್ಯೆಯನ್ನು ತಂದೊಡ್ಡುತ್ತದೆ.

Vijayaprabha Mobile App free

ಹಾಡು ಕೇಳುತ್ತಾ ಮಲಗಿದ್ದಾಗ ಮತ್ತು ನಂತರದ ನಿದ್ರೆಯಲ್ಲಿನ ಸ್ಥಿತಿಯಲ್ಲಿ ಇದ್ದಾಗ ಮನುಷ್ಯನ, ಉಸಿರಾಟ ಪ್ರಕ್ರಿಯೆ ಹೃದಯ ಬಡಿತ ಮತ್ತು ಮೆದುಳಿನ ಕಾರ್ಯದಲ್ಲಿ ಬದಲಾವಣೆಗಳು ಕಂಡು ಬಂದಿವೆ.

ಇನ್ನು, ಮಲಗುವ ವೇಳೆಯಲ್ಲಿ ಒಂದು ವಾರಕ್ಕಿಂತಲೂ ಹೆಚ್ಚು ದಿನಗಳು ಹಾಡು ಕೇಳುವ ಅಭ್ಯಾಸವಿದ್ದರೆ, ಅದು ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ.

ಜನರಲ್ಲಿ ನಿದ್ರಾ ಭಂಗದ ಅಪಾಯವು 6 ಪಟ್ಟು ಹೆಚ್ಚಾಗಿರುತ್ತದೆ ಎನ್ನಲಾಗಿದ್ದು, ಅದರಲ್ಲಿಯೂ ಭಾವಗೀತೆ ಹಾಡಿಗಿಂತ ವಾದ್ಯದ ಸಂಗೀತವು ನಿಮಗೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.