ರಾತ್ರಿ ವೇಳೆ ಲೈಟ್ ಹಾಕಿ ಮಲಗುವುದು ಆರೋಗ್ಯಕ್ಕೆ ಹಾನಿಕರ ಎಂದು ಸಂಶೋಧಕರು ಹೇಳಿದ್ದಾರೆ. ಚಿಕಾಗೋದ ನಾರ್ತ್ ವೆಸ್ಟರ್ನ್ ಯೂನಿವರ್ಸಿಟಿಯ ಫೆನ್ಬರ್ಗ್ ಸ್ಕೂಲ್ ಆಫ್ ಮೆಡಿಸಿನ್ ನಡೆಸಿದ ಅಧ್ಯಯನ ಪ್ರಕಾರ, ವಿದ್ಯುತ್ ದೀಪ ಆನ್ ಮಾಡಿ ಮಲಗುವುದರಿಂದ ವಯಸ್ಕರಲ್ಲಿ ಬೊಜ್ಜು, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆ ಉಂಟಾಗಬಹುದು.
ಡಿಮ್ ಲೈಟ್, ಫೋನ್ ಸ್ಕ್ರೀನ್ ಲೈಟ್ ಸೇರಿದಂತೆ ಸಣ್ಣ ಪ್ರಮಾಣದ ಬೆಳಕು ಕೂಡ ಕಣ್ಣು ಹಾಗೂ ಹೃದಯ ಬಡಿತದ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ.
ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ..!
ಸಂಜೆ ಮತ್ತು ರಾತ್ರಿ ನೀಲಿ ಬೆಳಕಿಗೆ ಮೈಯೊಡ್ಡಬೇಡಿ, ಯಾಕೆಂದರೆ ನೀಲಿ ಬೆಳಕಿಗೆ ಒಡ್ಡಿಕೊಂಡಾಗ, ದೇಹವು ಹಗಲೆಂದು ಭಾವಿಸಿ ಕಡಿಮೆ ಮೆಲಟೋನಿನ್ ಅನ್ನು ಉತ್ಪಾದಿಸುತ್ತದೆ.
ಇದರಿಂದ ನಿಮಗೆ ನಿದ್ದೆ ಬರದೇ ಇರುವ ಸಾಧ್ಯತೆ ಹೆಚ್ಚಿದ್ದು, ರಾತ್ರಿ ಹೊತ್ತು ಮೊಬೈಲ್ , ಲ್ಯಾಪ್‌ಟಾಪ್, ಟಿವಿ ಬಳಕೆಯನ್ನು ಕಡಿಮೆ ಮಾಡಿ.
ರಾತ್ರಿ ಹೊತ್ತು ಕೆಪೀನ್ ಪಾನೀಯಗಳನ್ನು ಕಡಿಮೆ ಮಾಡಿ. ಮಲಗುವ ಮುನ್ನ ವ್ಯಾಯಾಮ ಮಾಡಿ ದೇಹವನ್ನು ದಂಡಿಸಿಕೊಳ್ಳಬೇಡಿ. ಇದು ನಿಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.