ಕೊತ್ತಂಬರಿ ಬೀಜದ ಕಷಾಯ ಶೀತ, ಕೆಮ್ಮು, ಉಬ್ಬಸ, ಅಜೀರ್ಣಕ್ಕೆ ಒಳ್ಳೆಯ ಔಷಧ:
1. ಹೊಟ್ಟೆ ನೋವು ಮತ್ತು ತಲೆತಿರುಗು : ಪ್ರತಿ ದಿನ ರಾತ್ರಿ ಮಲಗುವ ಮುಂಚೆ ಒಂದು ಚಮಚ ಕೊತ್ತಂಬರಿ ಸೊಪ್ಪಿನ ರಸಕ್ಕೆ ಅಷ್ಟೇ ಜೇನು ಸೇರಿಸಿ ಸೇವಿಸಿದರೆ ಅನ್ನ ಸತ್ವದ ಅಭಾವದಿಂದ ಬರುವ ಗೂರಲು, ಕೆಮ್ಮು, ನಿಶ್ಯಕ್ತಿ, ಅಜೀರ್ಣದಿಂದುಂಟಾದ ಹೊಟ್ಟೆ ನೋವು, ತಲೆ ಸುತ್ತುವಿಕೆ ದೂರವಾಗುವುದು.
2. ಎದೆ ನೋವು : ಕೊತ್ತಂಬರಿಯನ್ನು ಕುಟ್ಟಿ ಪುಡಿ ಮಾಡಿ ನೀರಿನಲ್ಲಿ ನೆನೆ ಹಾಕಿ ನಂತರ ಚೆನ್ನಾಗಿ ಕಿವುಚಿ, ಸೋಸಿ. ಹಾಲು ಸಕ್ಕರೆ ಹಾಕಿ ಕುಡಿದರೆ ತಂಪು. ಎದೆ ನೋವು ಕಡಿಮೆಯಾಗುತ್ತದೆ.
3. ಕಣ್ಣುಬೇನೆ : ಕೊತ್ತಂಬರಿ ಬೀಜ ನೆನೆಸಿದ ನೀರ ಹಣಿಯಲ್ಲಿ ಕಣ್ಣನ್ನು ತೊಳೆದರೆ, ಕಣ್ಣುಬೇನೆ ನಿವಾರಣೆಯಾಗುತ್ತದೆ.
4. ಕೊತ್ತಂಬರಿ ಬೀಜದ ಕಷಾಯವು ಒಳ್ಳೆಯ ಔಷಧಿಯಾಗಿದ್ದು, ಇದನ್ನು ಮಾಡಿಕೊಂಡು ಕುಡಿದರೆ ಶೀತ, ಕೆಮ್ಮು, ಉಬ್ಬಸ, ಅಜೀರ್ಣ ದೂರವಾಗುತ್ತದೆ.
ಇದನ್ನು ಓದಿ: ಎಳ್ಳು ತಿನ್ನಿ ವರ್ಷಪೂರ್ತಿ ಆರೋಗ್ಯವಾಗಿರಿ; ಎಳ್ಳಿನ ಸೇವನೆಯಿಂದ ಆರೋಗ್ಯಕ್ಕಾಗುವ ಉಪಯೋಗಗಳು