ಭಾರತದ ಅಗ್ಗದ ಪ್ರೋಟೀನ್ ಆಹಾರಗಳು; ಪ್ರೋಟೀನ್ ಭರಿತ ಆಹಾರ ಸೇವನೆಯ ಪ್ರಯೋಜನಗಳು

ಭಾರತದ ಅಗ್ಗದ ಪ್ರೋಟೀನ್ ಆಹಾರಗಳು (ಸಸ್ಯಾಹಾರಿ ಮತ್ತು ಮಾಂಸಾಹಾರಿ): ಪ್ರೋಟೀನ್ ಸೇವನೆ ಏಕೆ ಮುಖ್ಯ? ಪ್ರೋಟೀನ್ ನಮ್ಮ ಆಹಾರದ ಅತ್ಯಗತ್ಯ ಭಾಗವಾಗಿದೆ. ನಮ್ಮ ದೇಹ, ಚರ್ಮ ಮತ್ತು ಕೂದಲಿನ ಆರೋಗ್ಯದ ದೈನಂದಿನ ದುರಸ್ತಿಗೆ ಇದು…

ಭಾರತದ ಅಗ್ಗದ ಪ್ರೋಟೀನ್ ಆಹಾರಗಳು (ಸಸ್ಯಾಹಾರಿ ಮತ್ತು ಮಾಂಸಾಹಾರಿ):

ಪ್ರೋಟೀನ್ ಸೇವನೆ ಏಕೆ ಮುಖ್ಯ?

ಪ್ರೋಟೀನ್ ನಮ್ಮ ಆಹಾರದ ಅತ್ಯಗತ್ಯ ಭಾಗವಾಗಿದೆ. ನಮ್ಮ ದೇಹ, ಚರ್ಮ ಮತ್ತು ಕೂದಲಿನ ಆರೋಗ್ಯದ ದೈನಂದಿನ ದುರಸ್ತಿಗೆ ಇದು ಬಹಳ ಮುಖ್ಯವಾಗಿದೆ. ಸರಾಸರಿ ವ್ಯಕ್ತಿಯ ದೇಹಕ್ಕೆ ಪ್ರತಿ ಕೆಜಿಗೆ 1 ಗ್ರಾಂ ಪ್ರೋಟೀನ್ ಅಗತ್ಯವಿರುತ್ತದೆ.

Vijayaprabha Mobile App free

ಪ್ರೋಟೀನ್ ಭರಿತ ಆಹಾರ ಸೇವನೆಯ ಪ್ರಯೋಜನಗಳು:

ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ.

ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ತೂಕ ನಷ್ಟ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ

ಚಯಾಪಚಯವನ್ನು ಹೆಚ್ಚಿಸುತ್ತದೆ

ಆರೋಗ್ಯಕರ ಮೂತ್ರಪಿಂಡಗಳಿಗೆ ಹಾನಿ ಮಾಡುವುದಿಲ್ಲ

ಟೋಫು:

ಟೋಫು ಅನ್ನು ಸೋಯಾ ಪನೀರ್ ಎಂದೂ ಕರೆಯಲಾಗುತ್ತದೆ. ಇದನ್ನು ಸೋಯಾ ಬೀನ್ಸ್ ನಿಂದ ತಯಾರಿಸಲಾಗುತ್ತದೆ. ಟೋಫು ಪ್ರೋಟೀನ್ ನ ಸಸ್ಯಾಹಾರಿ ಮೂಲವಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಸಣ್ಣ ಪ್ರಮಾಣದಲ್ಲಿ ಸುಲಭವಾಗಿ ಲಭ್ಯವಿದೆ.

ಒಂದು ಬಾರಿ 100 ಗ್ರಾಂ ಟೋಫು ಸೇವನೆ ಉತ್ತಮ.

ಕಾರ್ಬೋಹೈಡ್ರೆಟ್ ಗಳು = 15 ಗ್ರಾಂ, ಪ್ರೋಟೀನ್ = 15 ಗ್ರಾಂ, ಕೊಬ್ಬು = 8 ಗ್ರಾಂ

ಮೀನು:

ಟಿಲಾಪಿಯಾದಂತಹ ಬಿಳಿ ಮೀನುಗಳು ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿವೆ. ಇದು ಕಾರ್ಬೋಹೈಡ್ರೆಟ್ ಗಳು ಮತ್ತು ಕೊಬ್ಬನ್ನು ಹೊಂದಿರುವುದಿಲ್ಲ. ಭಾರತೀಯ ಸಾಲ್ಮನ್ ಮತ್ತು ಪಾಂಫ್ರೆಟ್‌ನಂತಹ ಇತರ ಮೀನುಗಳು ಸಹ ಅತ್ಯುತ್ತಮ ಆಯ್ಕೆಗಳಾಗಿವೆ. ಏಕೆಂದರೆ, ಅವು ಅಗತ್ಯ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ.

ಒಂದು ಬಾರಿಗೆ 200 ಗ್ರಾಂ ಮೀನು ಸೇವನೆ ಉತ್ತಮ.

ಪ್ರೋಟೀನ್ = 50 ಗ್ರಾಂ

ಪನೀರ್:

ಪನೀರ್ ದೇಹಕ್ಕೆ ಉತ್ತಮ ಗುಣಮಟ್ಟದ ಪ್ರೋಟೀನ್ ಅನ್ನು ಒದಗಿಸುತ್ತದೆ. ಇದು ಕ್ಯಾಲ್ಸಿಯಂ, ಬಿ 12 ಮತ್ತು ಕಬ್ಬಿಣದಂತಹ ಆರೋಗ್ಯಕರ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಸ್ಥಳೀಯ ಮಾರುಕಟ್ಟೆಗಳಲ್ಲಿ ಪನೀರ್ ಸುಲಭವಾಗಿ ಲಭ್ಯವಾಗುತ್ತದೆ.

ಒಂದು ಬಾರಿಗೆ 100 ಗ್ರಾಂ ಪನೀರ್ ಸೇವನೆ ಉತ್ತಮ.

ಪ್ರೋಟೀನ್ = 18 ಗ್ರಾಂ, ಕಾರ್ಬೋಹೈಡ್ರೆಟ್ ಗಳು = 1 ಗ್ರಾಂ

ಚಿಕನ್:

ಚಿಕನ್ ಕೂಡ ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಇದರಲ್ಲಿ ಯಾವುದೇ ಕಾರ್ಬೋಹೈಡ್ರೆಟ್ ಗಳು ಅಥವಾ ಕೊಬ್ಬು ಇರುವುದಿಲ್ಲ. ಹೆಚ್ಚು ಪ್ರೊಟೀನ್ ಡಯೆಟ್ ನಲ್ಲಿ ಚಿಕನ್ ತಿನ್ನುವುದು ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

ಒಂದು ಬಾರಿಗೆ 100 ಗ್ರಾಂ ಪನೀರ್ ಸೇವನೆ ಉತ್ತಮ.

ಪ್ರೋಟೀನ್ = 25 ಗ್ರಾಂ

ದ್ವಿದಳ ಧಾನ್ಯಗಳು:

seedling-and-pulses-vijayaprabha-news

ದ್ವಿದಳ ಧಾನ್ಯಗಳಲ್ಲಿ ಕಪ್ಪು ಕಿಡ್ನಿ ಬೀನ್ಸ್, ಕಡಲೆ ಮುಂತಾದ ಕಾಳುಗಳು ಹೆಚ್ಚು ಪೌಷ್ಟಿಕಾಂಶದ ಮೌಲ್ಯಗಳನ್ನು ಹೊಂದಿವೆ. ಈ ಕಾಳುಗಳು ಅತ್ಯಂತ ಕೈಗೆಟಕುವ ಬೆಲೆಯಲ್ಲಿ ಸುಲಭವಾಗಿ ದೊರೆಯುತ್ತವೆ.

ಒಂದು ಬಾರಿಗೆ 100 ಗ್ರಾಂ ದ್ವಿದಳ ಧಾನ್ಯ ಸೇವನೆ ಉತ್ತಮ.

ಪ್ರೋಟೀನ್ = 15 ಗ್ರಾಂ, ಫೈಬರ್ = 11 ಗ್ರಾಂ

ಹಾಲು:

milk

ಹಾಲು ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ಇದು ಅಗತ್ಯ ಕ್ಯಾಲ್ಸಿಯಂ ಹೊಂದಿದ್ದು, ವಿಟಮಿನ್ ಡಿ ಮುಂತಾದವುವುಗಳನ್ನು ಕೂಡ ಹೊಂದಿದೆ. ಭಾರತದಲ್ಲಿ ಹಾಲು ಎಲ್ಲಾ ಗಾತ್ರದ ಪ್ಯಾಕೆಟ್‌ಗಳಲ್ಲಿ ಸುಲಭವಾಗಿ ಲಭ್ಯವಿದೆ.

ಒಂದು ಬಾರಿಗೆ 250 ಮಿಲೀ ಹಾಲು ಸೇವನೆ ಉತ್ತಮ.

ಕಾರ್ಬೋಹೈಡ್ರೆಟ್ ಗಳು = 24 ಗ್ರಾಂ, ಪ್ರೋಟೀನ್ = 9 ಗ್ರಾಂ

ಮೊಟ್ಟೆಯ ಬಿಳಿಭಾಗ:

ಮೊಟ್ಟೆಯ ಬಿಳಿಭಾಗವು ಪ್ರೋಟೀನ್ ನ ಮೂಲವಾಗಿದ್ದು, ಅದು ಸುಲಭವಾಗಿ ಜೀರ್ಣವಾಗುತ್ತವೆ. ಒಂದು ಬಾರಿಗೆ 5-6 ಮೊಟ್ಟೆಗಳ ಬಿಳಿಭಾಗವನ್ನು ತಿನ್ನುವುದರಿಂದ ನಿಮ್ಮ ದೇಹಕ್ಕೆ 24 ಗ್ರಾಂ ಪ್ರೋಟೀನ್ ಅನ್ನು ಒದಗಿಸುತ್ತದೆ.

ಒಂದು ಬಾರಿಗೆ 1 ಮೊಟ್ಟೆಯ ಬಿಳಿಭಾಗ ಸೇವಿಸಬೇಕು.
ಪ್ರೋಟೀನ್ = 4 ಗ್ರಾಂ

ಕಡಲೆಕಾಯಿ:

ಕಡಲೆಕಾಯಿ ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಕಡಲೆಕಾಯಿ ತೂಕ ನಷ್ಟವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಕಡಲೆಕಾಯಿ ಫೈಬರ್ ಮತ್ತು ಪ್ರೋಟೀನ್ ಗಳಿಂದ ಸಮೃದ್ಧವಾಗಿದ್ದು, ಇದರ ಸೇವನೆಯ ನಂತರ ನಿಮಗೆ ಬೇಗನೆ ಹಸಿವು ಆಗುವುದಿಲ್ಲ.

ಒಂದು ಬಾರಿಗೆ 30 ಗ್ರಾಂ ಕಡಲೆಕಾಯಿ ಸೇವನ ಉತ್ತಮ.

ಪ್ರೋಟೀನ್ = 7 ಗ್ರಾಂ, ಆರೋಗ್ಯಕರ ಕೊಬ್ಬು = 14 ಗ್ರಾಂ

ಬೇಳೆ:

ಕೆಂಪು ಬೇಳೆ ಮುಂತಾದವು ನಮ್ಮ ಆಹಾರ ಪದ್ಧತಿಯ ಪ್ರಮುಖ ಭಾಗವಾಗಿವೆ. ವಿವಿಧ ರೀತಿಯ ಬೆಳೆಗಳಿದ್ದು, ಪ್ರೋಟೀನ್‌ನ ಸಂಪೂರ್ಣ ಮೂಲವಾಗಿಸಲು ವಿವಿಧ ಬೆಳೆಗಳನ್ನು ಮಿಶ್ರಣ ಮಾಡಲು ಪ್ರಯತ್ನಿಸಿ.

ಒಂದು ಬಾರಿಗೆ 100 ಗ್ರಾಂ ಬೇಳೆ ಸೇವನೆ ಉತ್ತಮ.

ಪ್ರೋಟೀನ್ = 18 ಗ್ರಾಂ, ಕೊಬ್ಬು = 0.8 ಗ್ರಾಂ, ಫೈಬರ್ = 16 ಗ್ರಾಂ

ಸೋಯಾ ಚಂಕ್ಸ್:

ಸೋಯಾ ಚಂಕ್ಸ್ ಉತ್ತಮ ಗುಣಮಟ್ಟದ ಪ್ರೋಟೀನ್ ನ ಉತ್ತಮ ಮೂಲವಾಗಿದ್ದು, ವಿಶೇಷವಾಗಿ ಸಸ್ಯಾಹಾರಿಗಳಿಗೆ ಇದು ಉತ್ತಮ ಆಯ್ಕೆಯಾಗಿದೆ. ಮಾಂಸದಲ್ಲಿ ಕಂಡುಬರುವ ಎಲ್ಲಾ ಅಗತ್ಯ ಅಮೈನೋ ಆಮ್ಲಗಳನ್ನು ಒಳಗೊಂಡಿರುವ ಕೆಲವು ತಿಳಿದಿರುವ ಸಸ್ಯ ಆಹಾರಗಳಲ್ಲಿ ಇದು ಒಂದಾಗಿದೆ.

ಒಂದು ಬಾರಿಗೆ 50 ಗ್ರಾಂ ಸೋಯಾ ಚಂಕ್ಸ್ ಸೇವನೆ ಉತ್ತಮ.

ಪ್ರೋಟೀನ್ = 25 ಗ್ರಾಂ, ಫೈಬರ್ = 6.5 ಗ್ರಾಂ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.