ಉಪ್ಪಿನ ಔಷಧೀಯ ಗುಣಗಳು:-
1) ಊತ ಬಂದಿರುವ ಸ್ಥಾನಕ್ಕೆ ಕಲ್ಲುಪ್ಪನ್ನು ಬಿಸಿ ಮಾಡಿ ಕಾವು ಕೊಡುವುದರಿಂದ ಊತ ಇಳಿಯುತ್ತದೆ.
2) ಕಿವಿಯೊಳಗೆ ಇರುವೆ ಸೇರಿಕೊಂಡರೆ ಉಗುರು ಬೆಚ್ಚಗಿನ ನೀರಿನಲ್ಲಿ ಉಪ್ಪನ್ನು ಕರಗಿಸಿ ನಾಲ್ಕಾರು ಹನಿಗಳನ್ನು ಕಿವಿಯೊಳಗೆ ಹಾಕಿದರೆ ಇರುವೆ ಸತ್ತುಹೋಗಿ ನೋವು ನಿವಾರಣೆಯಾಗುತ್ತದೆ.
3) ಚೇಳು ಕುಟುಕಿದ ಸ್ಥಳಕ್ಕೆ ಅಡಿಗೆ ಉಪ್ಪನ್ನು ತುಳಸಿ ರಸದೊಂದಿಗೆ ಸೇರಿಸಿ ಹಚ್ಚಿದರೆ ನೋವು ಇಲ್ಲವಾಗುವುದು.
4) ಉಪ್ಪಿನಿಂದ ಶರೀರವನ್ನು ತಿಕ್ಕಿ ಸ್ನಾನ ಮಾಡುವ ಅಭ್ಯಾಸ ಮಾಡಿಕೊಂಡರೆ ಸಹನ ಶಕ್ತಿ ಹೆಚ್ಚುವುದು ಮತ್ತು ನೆಗಡಿ ಗುಣವಾಗುವುದು.
5) ಬಿಸಿ ನೀರಿನಲ್ಲಿ ಸ್ವಲ್ಪ ಉಪ್ಪನ್ನು ಕರಗಿಸಿ ಬಾಯಿ ಮುಕ್ಕಳಿಸಿ ಉಗುಳುವುದರಿಂದ ಗಂಟಲು ಹುಣ್ಣು ವಾಸಿಯಾಗುತ್ತದೆ ಮತ್ತು ವಸಡಿನ ಊತ ಇಳಿದು ಹಲ್ಲು ನೋವು ಶಮನವಾಗುವುದು.
6) ಉಪ್ಪಿನ ಹರಳನ್ನು ಮತ್ತು ಲವಂಗವನ್ನು ಬಾಯಲ್ಲಿಟ್ಟುಕೊಂಡು ಚಪ್ಪರಿಸುತ್ತಿದ್ದರೆ ಕೆಮ್ಮು ನಿವಾರಣೆಯಾಗುವುದು ಮತ್ತು ಕಫವೂ ಸಹ ನಿವಾರಣೆಯಾಗುವುದು.
ಇದನ್ನು ಓದಿ: ರಾಗಿ ತಿಂದವನಿಗೆ ರೋಗವಿಲ್ಲ; ರಾಗಿಯ ಗುಣಗಳ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ