ದಾಳಿಂಬೆ ಹಣ್ಣು ತಿನ್ನಲು ರುಚಿಕರವಾದ ಹಣ್ಣು ಮಾತ್ರವಲ್ಲದೆ ಆರೋಗ್ಯ ದೃಷ್ಟಿಯಿಂದಲೂ ತುಂಬಾ ಉಪಯುಕ್ತವಾದ ಹಣ್ಣಾಗಿದ್ದು, ದಾಳಿಂಬೆ ಸೇವನೆಯನ್ನು ಪ್ರತಿನಿತ್ಯ ಮಾಡುವುದರಿಂದ ಕ್ಯಾನ್ಸರ್ ಉಂಟು ಮಾಡುವ ಕಣಗಳನ್ನು ನಿರ್ಮೂಲನೆ ಮಾಡುತ್ತದಲ್ಲದೆ, ಹೃದಯ ಸಂಬಂಧಿ ಸಮಸ್ಯೆಗಳನ್ನು ನಿವಾರಿಸುತ್ತದೆ.
ದಾಳಿಂಬೆ ಗಿಡದ ಎಲೆಗಳನ್ನು ಸಣ್ಣಗೆ ಅರೆದು ಸುಟ್ಟ ಗಾಯಗಳಿಗೆ ಲೇಪಿಸುವುದರಿಂದ ಉರಿ ಶಮನವಾಗುವುದಲ್ಲದೆ, ದಾಳಿಂಬೆ ಹೂಗಳನ್ನು ಪುಡಿ ಮಾಡಿ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಒಣ ಕೆಮ್ಮು ನಿವಾರಣೆಯಾಗುತ್ತದೆ.
ಬಡವರ ಬಾದಾಮಿ ಕಡಲೆಕಾಯಿಯ ಪ್ರಯೋಜನಗಳು
ಬಡವರ ಬಾದಾಮಿ ಎಂದು ಕರೆಯಲ್ಪಡುವ ಕಡಲೆಕಾಯಿಯಲ್ಲಿ ವಿಟಿಮಿನ್ಸ್, ಪ್ರೊಟಿನ್ಸ್ ಹೆಚ್ಚಿನ ಪ್ರಮಾಣದಲ್ಲಿದ್ದು, ಕಡಲೆಕಾಯಿ ಸೇವನೆಯಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶ ಕಡಿಮೆ ಆಗುತ್ತದೆ.
ಕಡಲೆಕಾಯಿಯಲ್ಲಿರುವ ಆ್ಯಂಟಿ ಆ್ಯಂಕ್ಸಿಡೆಂಟ್‌ಗಳು ಉದರ ಸಂಬಂಧಿ ಕ್ಯಾನ್ಸರ್ ತಡೆಯುದಲ್ಲದೆ, ಹೃದಯದ ಸಮಸ್ಯೆಗಳು, ನರಸಂಬಂಧಿ ತೊಂದರೆಗಳನ್ನು ನಿವಾರಿಸುವುದಲ್ಲದೆ, ಗರ್ಭಿಣಿಯರು ಹೆಚ್ಚಾಗಿ ಕಡಲೆಕಾಯಿಯನ್ನು ಸೇವಿಸುವುದರಿಂದ ಮಗುವಿಗೆ ನರಸಂಬಂಧಿ ಕಾಯಿಲೆಗಳು ಬರದಂತೆ ತಡೆಯಬಹುದು.
ಇದನ್ನು ಓದಿ: ಮುಪ್ಪನ್ನು ಹೋಗಲಾಡಿಸುವ ಟೀ ಪುಡಿ; ಸುಂದರವಾಗಿ ಕಾಣಲು ಈ ಟಿಪ್ಸ್ ಪಾಲಿಸಿ