ಅರೇಬಿಕಾ ಕಾಫಿಯ ವಿಶೇಷ:
* ಕರ್ನಾಟಕದಲ್ಲಿ ಬೆಳೆಯುವ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಕಾಫಿ ಕೂಡ ಒಂದಾಗಿದ್ದು, ಕಾಫಿಯ ಮುಖ್ಯ ಪ್ರಭೇದಗಳಲ್ಲಿ ಒಂದಾದ ಅರೇಬಿಕಾ ಕಾಫಿಯ ಸಾಕಷ್ಟು ಉಪಯುಕ್ತವಾಗಿದೆ.
* ಅರೇಬಿಕಾ ಕಾಫಿಯನ್ನು ಸೇವಿಸುವುದರಿಂದ ನಿಮ್ಮನ್ನು ಸದಾ ಎಚ್ಚರದಲ್ಲಿರಿಸುವುದಲ್ಲದೆ, ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
* ಅರೇಬಿಕಾ ಕಾಫಿಯನ್ನು ಸೇವಿಸುವುದರಿಂದ ಆಯಾಸದ ಭಾವನೆಯನ್ನು ಕೊನೆಗೊಳಿಸುವುದಲ್ಲದೆ, ನ್ಯೂರಾನ್‌ಗಳನ್ನು ಚುರುಕುಗೊಳಿಸಿ ನರವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ.
* ಅರೇಬಿಕಾ ಕಾಫಿ ಯಕೃತ್ ಅನ್ನು ರಕ್ಷಿಸುವುದಲ್ಲದೆ, ಖಿನ್ನತೆಯನ್ನು ಕಡಿಮೆಗೊಳಿಸುತ್ತದೆ.
ಗುಲಾಬಿ ಟೀ ಕುಡಿಯಿರಿ, ಆರೋಗ್ಯವಾಗಿರಿ:
* ಗುಲಾಬಿ ಟೀ ಗಿಡಮೂಲಿಕೆ ಚಹಾವಾಗಿದ್ದು, ಹಲವು ಆರೋಗ್ಯ ಪ್ರಯೋಜನವನ್ನು ಹೊಂದಿದೆ.
* ಗುಲಾಬಿ ಟೀ ಕುಡಿಯುವುದರಿಂದ ಜೀರ್ಣಕ್ರಿಯೆ ವ್ಯವಸ್ಥೆ ಸುಧಾರಿಸುವುದಲ್ಲದೆ, ತೂಕ ಇಳಿಕೆಯಾಗಲು ಸಹಕಾರಿ.
* ಗುಲಾಬಿ ಟೀ ಕುಡಿಯುವುದರಿಂದ ಮೂತ್ರದ ಸೋಂಕನ್ನು ತಡೆಯುವುದಲ್ಲದೆ, ದೇಹದಲ್ಲಿರುವ ವಿಷವನ್ನು ಹೊರಹಾಕುವುದಲ್ಲದೆ, ಕೊಬ್ಬನ್ನು ಕರಗಿಸುತ್ತದೆ.
* ಗುಲಾಬಿ ಟೀ ಕೆಫಿನ್ ರಹಿತವಾಗಿರುವುದರಿಂದ ಈ ಚಹಾ ಕುಡಿಯುವುದರಿಂದ ಆರೋಗ್ಯವಾಗಿರಬಹುದು. ಗುಲಾಬಿ ಟೀ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಇದರಿಂದ ರೋಗಗಳ ವಿರುದ್ಧ ಹೋರಾಡಬಹುದು.
ಇದನ್ನು ಓದಿ: ನಿಯಮಿತವಾದ ತಣ್ಣೀರು ಸೇವನೆ ಆರೋಗ್ಯಕರ; ಬಿಸಿ ನೀರಿಗೆ ಬೆಲ್ಲ ಸೇರಿಸಿ ಸೇವಿಸಿದ್ರೆ ಆರೋಗ್ಯ ಸಮಸ್ಯೆ ದೂರ