ಮುಖದ ಚೆಲುವಿಕೆಗೆ ಹಲ್ಲುಗಳು ಪ್ರಧಾನ, ಇಡೀ ದೇಹದ ಆರೋಗ್ಯ ಮುಖದ ಸೌಂದರ್ಯ ಹಲ್ಲಿನಿಂದ ಅದಕ್ಕಾಗಿಯೇ ಯುವಕ ಯುವತಿಯರ ಅಂದ ಚಂದ ಒನಪು ಒಯ್ಯಾರಗಳು ಅವರ ಹಲ್ಲಿನಿಂದ, ಕೆಲವರು ನಕ್ಕರೆ ನೋಡಬೇಕೆನಿಸುತ್ತದೆ. ಉದಾಹರಣೆಗೆ ಜೂಹಿ ಚಾವ್ಲಾ ಅವರ ನಗುವಿನ ಮೋಡಿ ಸುಂದರ ದಂತಪಂಕ್ತಿ ಕೊಳಕು ಹಲ್ಲಿನಿಂದ ಒಸಡು ಕೆಡುತ್ತದೆ. ಅದರಿಂದ ಬಾಯಿಯಿಂದ ಅತ್ಯಂತ ಕೆಟ್ಟ ವಾಸನೆ ಬರುತ್ತದೆ, ಇಂತಹ ವಾಸನೆ ವ್ಯಕ್ತಿತ್ವಕ್ಕೆ ದಕ್ಕೆ.
ಅದಕ್ಕಾಗಿ ದಿನಾಲೂ ಎದ್ದ ಕೂಡಲೇ ಹಾಗೂ ರಾತ್ರಿ ಮಲಗುವ ಮುನ್ನ – ಚೆನ್ನಾಗಿ ಹಲ್ಲುಜ್ಜಿ ನಾಲಿಗೆಯನ್ನು ವಸಡನ್ನು ಸ್ವಚ್ಛಗೊಳಿಸಿಕೊಂಡು ಯಥೇಚ್ಛವಾಗಿ ನೀರು ಕುಡಿದು ಮಲಗಿರಿ. ಹಲ್ಲುಜ್ಜಿದ ಮೇಲೆ ಬೇರೇನಾ ತಿನ್ನಿರಿ, ಕುಡಿಯಿರಿ, ಮಲಗುವಾಗ ಸಿಹಿ ಪದಾರ್ಥ ತಿಂದು, ಹಾಲು, ಕಾಫಿ ಪೇಯ ಅಷ್ಟೊಂದು ಒಳ್ಳೆಯದಲ್ಲ ಊಟದ ನಂತರ ಹಾಲು ಕುಡಿದು ನಂತರ ಹಲ್ಲುಜ್ಜಿ ಬಿಡ್ರಿ. ಬೆಳಿಗ್ಗೆ ಹಾಗೂ ಮಧ್ಯಾಹ್ನ ಊಟದ ನಂತರ ಗಜ್ಜರಿ, ಸೌತೇಕಾಯಿ, ಮೂಲಂಗಿ, ಸೇಬು, ಪೇರಲ ಹಣ್ಣುಗಳನ್ನು ಸೇವಿಸಿ. ಇದರಿಂದ ಹಲ್ಲುಗಳಿಗೆ ಹಾಗೂ ಒಸಡಿಗೆ ವ್ಯಾಯಾಮ ಹಾಗೂ ಶಕ್ತಿ ಬರುತ್ತದೆ.
ಇದನ್ನು ಪಾಲಿಸಿ :
* ಸಿಹಿ ಪದಾರ್ಥಗಳನ್ನು ತಿಂದ ನಂತರ ಹಲ್ಲುಗಳನ್ನು ಹಾಗೂ ಬಾಯಿಯನ್ನು ಬಿಸಿ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ, ಇಲ್ಲದಿದ್ದರೆ ಸಕ್ಕರೆ ಮಿಶ್ರಣ ಆಮ್ಲವನ್ನು ಉತ್ಪಾದಿಸಿ ಹಲ್ಲಿನ ಹೊಳಪನ್ನು ಎನಾಮಲ್‌ನ್ನು ಕೆಡಿಸುತ್ತದೆ. ಬಾಯಿ ಮುಕ್ಕಳಿಸುವ ಉಗುರು ಬೆಚ್ಚಗಿನ ನೀರಿಗೆ ಅರ್ಧ ನಿಂಬೆಹಣ್ಣು ಹಿಂದಿ ಅದರಿಂದ ಮುಕ್ಕುಳಿಸಿ. ಅತಿಯಾದ ಧೂಮಪಾನ, ತಂಬಾಕು, ಕಡ್ಡಿಪುಡಿಯ, ಸಸ್ಯದಿಂದ ಹಲ್ಲು ಕೆಡುತ್ತದೆ.
* ಹಲ್ಲಿನ ಕಂದು ಬಣ್ಣ ಹೋಗಲು ಲಿಂಬೆ ಹಾಗೂ ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಬೇವಿನ ತಪ್ಪಲಿನ ನೊಡನೆ ಚೆನ್ನಾಗಿ ಒಣಗಿಸಿ ಮೂರನ್ನೂ ಕೂಡಿಸಿ ಪುಡಿ ಮಾಡಿ ಅದರಲ್ಲಿ ಉಪ್ಪು ಸೇರಿಸಿ ತಿಕ್ಕುವುದರಿಂದ ಹಲ್ಲು ಹೊಳಪಾಗುತ್ತದೆ ಹಾಗೂ ಬಹಳ ದಿನಗಳಿಂದ ಕಂದು ಬಣ್ಣ ಹೊಂದಿದೆ ಹಲ್ಲುಗಳ ಬಿಳುಪಾಗಿ ವಾಸನೆ ರಹಿತವಾಗುತ್ತವೆ.
* ಹಲ್ಲಿನಲ್ಲಿ ಹುಳುಕಾಗಿ ಹುಳುಗಳಿಂದ ಬಾಧಿಸುತ್ತಿದ್ದರೆ, ದಾಳಿಂಬೆ ಹಣ್ಣಿನ ಸಿಪ್ಪೆಯ ನ್ನೊಂದು ಗ್ಲಾಸ್ ನೀರಿನಲ್ಲಿ ಚೆನ್ನಾಗಿ ಕುದಿಸಿ ಆ ನೀರು ಕೊಂಚ ಉಗುರು ಬೆಚ್ಚಗಿರುವ ಮುಕ್ಕಳಿಸಿ.
* ಹಳದಿ ಕಲೆಗಳು ಹೋಗಿ ಹಲ್ಲು ಹೊಳಪಾಗಲು ಲಿಂಬೆರಸದಲ್ಲಿ ಉಪ್ಪು ಸೇರಿಸಿ ತಿಕ್ಕಿರಿ, ತಿನ್ನುವ ಸೋಡಾ ಪುಡಿಯಿಂದ ಹಲ್ಲುಜ್ಜಿ ಹಲ್ಲು ಮುತ್ತಿನಂತೆ ಹೊಳೆಯುತ್ತವೆ.
ಹಲ್ಲು ಗಟ್ಟಿಯಾಗಲು ಒಸಡು ಗಟ್ಟಿಯಾಗಲು ಸೇಬುಹಣ್ಣನ್ನು ಚಾಕುವಿನಿಂದ ಹೆಚ್ಚದೆ ಬಾಯಿಂದ ಕಚ್ಚಿ ತಿನ್ನಿರಿ, ಹಾಗೇ ಸ್ಟ್ರಾಬೆರಿಹಣ್ಣುಹಲ್ಲಿಂದ ಜಗಿದು ತಿನ್ನಿರಿ. ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿದ್ದರೆ ಅರಿಷಿಣಪುಡಿ ಯಲ್ಲಿ ಉಪ್ಪನ್ನು ಸೇರಿಸಿ ನಾಲಿಗೆಯನ್ನು ಚನ್ನಾಗಿ ತಿಕ್ಕಿರಿ, ಮೇಲಿಂದ ಮೇಲೆ ಲವಂಗವನ್ನು ಬಾಯಿಂದ ಜಗಿಯುವುದರಿಂದ ಹಲ್ಲು ನೋವು ಕಡಿಮೆಯಾಗುವುದು, ಕೆಟ್ಟ ವಾಸನೆ ಹೋಗುವುದು.
ಊಟವಾದ ಕೂಡಲೇ ಹಾಲು ಕುಡಿಯುವುದು ಒಳ್ಳೆಯದು ಹಲ್ಲು ಗಟ್ಟಿಯಾಗುತ್ತದೆ, ಹಲ್ಲುಜ್ಜಲು ಮುನ್ನ ಕುಡಿಯಿರಿ.
* ಒಸಡು ಹಾಗೂ ಹಲ್ಲುಗಳು ದಷ್ಟಪುಷ್ಟವಾಗಲು’ಎ’ ಜೀವಸತ್ವದಿಂದ ಕೂಡಿದ ಪದಾರ್ಥಗಳ ಸೇವನೆ ಉತ್ತಮ.
* ಹಲ್ಲಿನ ನೋವು ನಿವಾರಿಸಲು, ಇಂಗು, ಶುಂಠಿ, ಉಪ್ಪು ಕೂಡಿಸಿ ಚಿಕ್ಕ ಮಾತ್ರೆಯಂತೆ ಮಾಡಿ ಅದನ್ನು ನೋವಾದ ಸ್ಥಳದಲ್ಲಿಡಿರಿ.
* ವಿಪರೀತ ಒಸಡು ಹಾಗೂ ಹಲ್ಲು ನೋವಿದ್ದರೆ, ಕರಿಜಾಲಿ ಗಿಡದ ತೊಗಟೆ ಒಳಪದರು ಹಾಗೂ ಪಟಗ ಎರಡನ್ನೂ ನೀರಿನಲ್ಲಿ ಹಾಕಿ ಕುದಿಸಿ, ಉಗುರು ಬೆಚ್ಚಗಾದಾಗ ಅದನ್ನು ಬಾಯಿಂದ ಮುಕ್ಕಳಿಸಿ, ಒಸಡು ಗಟ್ಟಿಯಾಗುತ್ತದೆ ಹಲ್ಲು ನೋವು ನಿವಾರಣೆಯಾಗುತ್ತದೆ.
* ತುಳಸಿ ಎಲೆಯನ್ನು ಮೆಣಸಿನ ಪುಡಿಯಲ್ಲಿ ತಿಕ್ಕಿ ನೋವಾದ ಜಾಗದಲ್ಲಿ ಇಡುವುದರಿಂದ ಹಲ್ಲು ನೋವು ಕಡಿಮೆಯಾಗುವುದು, ಬಾಯಿ ಕೂಡ ಸುಗಂಧಯುಕ್ತವಾದ ವಾಸನೆಯನ್ನು ಬೀರುತ್ತದೆ, ಹಾಗೆ ಲವಂಗದಿಂದ ಮಾಡಿದ ಎಣ್ಣೆ ಕೂಡ ಈ ನೋವು ಶಮನಗೊಳಿಸುವುದು.