ರೋಗ ನಿರೋಧಕ ಶಕ್ತಿಗೆ ತುಳಸಿ ಹಾಲು ಬಳಸಿ:
ಒಂದೂವರೆ ಲೋಟ ಹಾಲನ್ನು ಕುದಿಸಿ, ಇದಕ್ಕೆ 8-10 ತುಳಸಿ ಎಲೆಗಳನ್ನು ಸೇರಿಸಿ ಸ್ವಲ್ಪ ಸಮಯ ಕುದಿಸಿ, ಹಾಲು ಒಂದು ಲೋಟ ಆಗುವವರೆಗೂ ಬಿಡಿ.
ಇದು ವಿವಿಧ ರೋಗಗಳನ್ನು ದೂರ ಮಾಡಿ, ರೋಗನಿರೋಧಕ ಶಕ್ತಿ ಹೆಚ್ಚಾಗುವಂತೆ ಮಾಡುತ್ತದೆ. ಇನ್ನು ತಲೆನೋವಿನಿಂದ ಬಳಲುತ್ತಿದ್ದರೆ ಚಹಾ ಬದಲು ತುಳಸಿ ಎಲೆಗಳನ್ನು ಹಾಲಿಗೆ ಹಾಕಿ ಪ್ರತಿದಿನ ಕುಡಿಯುವುದರಿಂದ ಖಿನ್ನತೆಯನ್ನು ನಿವಾರಿಸಲು ಸಹ ಇದು ಸಹಕಾರಿಯಾಗುತ್ತದೆ.
ಇನ್ನು, ಪ್ರತಿದಿನ ಖಾಲಿ ಹೊಟ್ಟೆಗೆ ತುಳಸಿ ಹಾಲು ಕುಡಿದರೆ ಹೃದಯದ ರೋಗಗಳಿಂದ ದೂರ ಇರಬಹುದು.
ರೋಗ ನಿರೋಧಕ ಶಕ್ತಿಗೆ ಈ ‘ಕಷಾಯ’ ಉತ್ತಮ ಮನೆಮದ್ದು
ಏಲಕ್ಕಿ, ಲವಂಗ, ಚಕ್ಕೆ, ಕಾಳುಮೆಣಸು, ಒಣಶುಂಠಿ, ಜೀರಿಗೆ, ಧನಿಯಾ, ಸೋಂಪನ್ನು ಕುಟ್ಟಿ ಪುಡಿ ಮಾಡಿ ಜೊತೆಗೆ ಗರಿಕೆ ಹುಲ್ಲು, ದೊಡ್ಡಪತ್ರೆ ಎಲೆ, ನೆಲನೆಲ್ಲಿ, ಪಾರಿಜಾತ ಎಲೆ, ತುಳಸಿಯನ್ನು ತೊಳೆದು ಸ್ವಚ್ಚಗೊಳಿಸಿ.
ಗ್ಯಾಸ್ ಮೇಲೆ 1 ಲೋಟ ನೀರು ಬಿಸಿ ಮಾಡಿ ಅದಕ್ಕೆ ಅರಿಶಿನ ಹಾಕಿ, ಸ್ವಚ್ಛಗೊಳಿಸಿದ ಎಲೆ, ಪುಡಿ ಮಾಡಿಕೊಂಡ ಸಾಮಾಗ್ರಿ ಹಾಕಿ. ಈಗ ಅರ್ಧ ಲಿಂಬೆಹಣ್ಣನ್ನು ಹಿಂಡಿ ಚೆನ್ನಾಗಿ ಕುದಿಸಿ. ನಂತರ ಬೆಲ್ಲ ಸೇರಿಸಿ. 1 ಗ್ಲಾಸ್ ನೀರು ಅರ್ಧ ಗ್ಲಾಸ್ ಆಗಲಿ. ಇದನ್ನು ಬೆಳಿಗ್ಗೆ, ಸಂಜೆ ಕುಡಿಯಿರಿ.