Arthritis : ಸಂಧಿವಾತ ಎಂದರೇನು? ಸಂಧಿವಾತ ಸಮಸ್ಯೆ ಮಹಿಳೆಯರಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳಲು ಕಾರಣವೇನು?

Arthritis problem : ಕೀಲುಗಳಲ್ಲಿ ಊತ, ಮೃದುತ್ವ ಮತ್ತು ಉರಿಯೂತವನ್ನು ಉಂಟುಮಾಡುವ ಸ್ಥಿತಿಯೇ ಸಂಧಿವಾತ. ಕೀಲು ನೋವು ಮತ್ತು ಬಿಗಿತ, ಸ್ನಾಯು ಸೆಳೆತ, ಕೀಲುಗಳಲ್ಲಿ ನೋವು ಇದರ ಲಕ್ಷಣಗಳು. ಇದು ಸಾಮಾನ್ಯವಾಗಿ ವಯಸ್ಸಾದಂತೆ ಕಾಡುತ್ತದೆ.…

Arthritis vijayaprabha news

Arthritis problem : ಕೀಲುಗಳಲ್ಲಿ ಊತ, ಮೃದುತ್ವ ಮತ್ತು ಉರಿಯೂತವನ್ನು ಉಂಟುಮಾಡುವ ಸ್ಥಿತಿಯೇ ಸಂಧಿವಾತ. ಕೀಲು ನೋವು ಮತ್ತು ಬಿಗಿತ, ಸ್ನಾಯು ಸೆಳೆತ, ಕೀಲುಗಳಲ್ಲಿ ನೋವು ಇದರ ಲಕ್ಷಣಗಳು. ಇದು ಸಾಮಾನ್ಯವಾಗಿ ವಯಸ್ಸಾದಂತೆ ಕಾಡುತ್ತದೆ. ಸಂಧಿವಾತಕ್ಕೆ ಯಾವುದೇ ಚಿಕಿತ್ಸೆ ಇಲ್ಲವಾದರೂ ಚಿಕಿತ್ಸೆಯು ರೋಗಲಕ್ಷಣಗಳನ್ನು ಕಡಿಮೆ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ. 

ಸಂಧಿವಾತದ ಸಾಮಾನ್ಯ ವಿಧಗಳೆಂದರೆ ಅಸ್ಥಿಸಂಧಿವಾತ, ಆಂಕೈಲೋಸಿಂಗ್ ಸ್ಪಾಂಡಿಲೈಟಿಸ್, ಗೌಟ್, ಲೂಪಸ್, ಫೈಬ್ರೊಮ್ಯಾಲ್ಗಿಯ ಮತ್ತು ರುಮಟಾಯ್ಡ್ ಸಂಧಿವಾತ.

ಇದನ್ನೂ ಓದಿ: Cancer : ಮಕ್ಕಳಿಗೆ ಕ್ಯಾನ್ಸ‌ರ್ ಬರದಂತೆ ತಡೆಯಲು ಪೋಷಕರು ಏನು ಮಾಡಬೇಕು?

Vijayaprabha Mobile App free

​Arthritis problem : ಸಂಧಿವಾತ ಸಮಸ್ಯೆ ಯುವಕರನ್ನೂ ಕಾಡುತ್ತದೆ​..!

ಸಂಧಿವಾತವು ವಯಸ್ಸಾದವರನ್ನು ಮಾತ್ರ ಕಾಡುತ್ತದೆ ಎಂಬುದು ಸಾಮಾನ್ಯ ತಪ್ಪು ಕಲ್ಪನೆಯಾಗಿದ್ದು, ಇದು ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುತ್ತದೆ. ಜುವೆನೈಲ್ ಇಡಿಯೋಪಥಿಕ್ ಆರ್ಥ್ರೈಟಿಸ್, ಇದು 17 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಮೇಲೂ ಪರಿಣಾಮ ಬೀರುತ್ತದೆ. ಸಂಧಿವಾತ ನೋವು ಅತ್ಯಂತ ತೀವ್ರವಾಗಿರುತ್ತದೆ. ಮೊಣಕೈ ಅಥವಾ ಬೆರಳಿನ ಕೀಲುಗಳನ್ನು ಮಡಚಿ ಮತ್ತು ತೆರೆದುಕೊಳ್ಳುವ ಮೂಲಕ ನೀವು ಅನುಭವಿಸುವ ತೀವ್ರವಾದ ನೋವಿನಿಂದಾಗಿ ಯಾವುದೇ ಕೆಲಸ ಮಾಡಲು ಕಷ್ಟವಾಗುತ್ತದೆ.

ಇದನ್ನೂ ಓದಿ: Rabies : ರೇಬೀಸ್ ಕಾಯಿಲೆ ಬರದಂತೆ ತಡೆಗಟ್ಟುವುದು ಹೇಗೆ?

Arthritis problem : ಸಂಧಿವಾತದ ಸಮಸ್ಯೆ ಇರುವವರು ಈ ಆಹಾರಗಳನ್ನು ಸೇವಿಸಬಾರದು..!

ಸಂಧಿವಾತದ ನೋವಿನಿಂದ ಬಳಲುತ್ತಿರುವವರು ಸಂಸ್ಕರಿಸಿದ ಮತ್ತು ಕೆಂಪು ಮಾಂಸ ಸೇವಿಸಬಾರದು. ಇದು ದೇಹದಲ್ಲಿ ಉರಿಯೂತವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಹೆಚ್ಚು ನೋವು ಮತ್ತುಊತ ಉಂಟಾಗುವ ಸಾಧ್ಯತೆ ಇದೆ. ಅಲ್ಲದೆ, ಸಂಸ್ಕರಿಸಿದ ಮತ್ತು ಕೆಂಪು ಮಾಂಸವು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಹೆಚ್ಚು ಉಪ್ಪಿನ ಸೇವನೆಯು ಸಂಧಿವಾತದಿಂದ ಬಳಲುತ್ತಿರುವ ಜನರಿಗೆ ಹಾನಿಕಾರಕವಾಗಿದ್ದು, ಸಂಧಿವಾತದ ಸಮಸ್ಯೆ ಇರುವವರ ಅರೋಗ್ಯಕ್ಕೆ ಅತಿಯಾದ ಸಕ್ಕರೆ, ಸಿಹಿ ಪದಾರ್ಥ ಒಳ್ಳೆಯದಲ್ಲ.

ಇದನ್ನೂ ಓದಿ: Mental health : ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಚಟುವಟಿಕೆಗಳು ಸಹಕಾರಿ

Arthritis problem : ಸಂಧಿವಾತ ಸಮಸ್ಯೆ ಮಹಿಳೆಯರಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳಲು ಕಾರಣವೇನು?

ಸಂಧಿವಾತದ ಸಮಸ್ಯೆ ಪುರುಷರಿಗಿಂತ ಮಹಿಳೆಯರಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತದೆ. ಮಹಿಳೆಯರಲ್ಲಿ ಬದಲಾಗುವ ಹಾರ್ಮೋನುಗಳಿಂದ ಸಂಧಿವಾತ ಕಾಣಿಸಿಕೊಳ್ಳುತ್ತದೆ. ಜೊತೆಗೆ ಗರ್ಭಾವಸ್ಥೆಯ ಹಂತದಲ್ಲಿ ದೇಹದ ತೂಕ ಹೆಚ್ಚಾಗಿ, ಕಡಿಮೆಯಾಗುತ್ತದೆ. ಆಗ ಶರೀರದಲ್ಲಿ ಆಗುವ ಬದಲಾವಣೆಗಳಿಂದ ಸಂಧಿವಾತದ ಸಮಸ್ಯೆ ಕಾಡುತ್ತದೆ. ಸಂಧಿವಾತ ಕಾಣಿಸಿಕೊಳ್ಳಲು ವಯಸ್ಸು ಕೂಡ ಕಾರಣವಾಗಿದೆ. ಜೊತೆಗೆ ದೇಹದ ತೂಕ ಹೆಚ್ಚಿದ್ದರೆ ಈ ಸಂಧಿವಾತ ಕಾಣಿಸಿಕೊಳ್ಳುತ್ತದೆ. ನೋವಿನ ಜಾಗದಲ್ಲಿ ಊತ ಕಾಣಿಸಿಕೊಳ್ಳುತ್ತದೆ.

ಸಂಧಿವಾತ ಸಮಸ್ಯೆಗೆ ಅರಿಶಿನ ಜೀರಿಗೆ ಕಷಾಯದ ಮನೆಮದ್ದು..!

ಇಂದಿನ ದಿನಗಳಲ್ಲಿ ಸಂಧಿವಾತದ ಸಮಸ್ಯೆ ಕೇವಲ ವಯಸ್ಸಾದವರಲ್ಲಿ ಮಾತ್ರವಲ್ಲ, ಯುವಜನರಲ್ಲಿಯೂ ಕೂಡ ಕಂಡು ಬರುತ್ತಿದೆ. ಅನಾರೋಗ್ಯಕಾರಿ ಆಹಾರ ಪದ್ಧತಿ, ಜಡಜೀವನಶೈಲಿ ಹಾಗೂ ಅನುವಂಶಿಕ ಕಾರಣಗಳು ಇದಕ್ಕೆ ಕಾರಣ ಎಂದು ಹೇಳಬಹುದಾಗಿದೆ. ದೇಹದಲ್ಲಿ ಕ್ಯಾಲ್ಸಿಯಂ ಅಂಶಗಳ ಕೊರತೆ ಉಂಟಾದರೂ ಕೂಡ, ಸಂಧಿವಾತದ ಲಕ್ಷಣಗಳು ಬಹಳ ಬೇಗನೇ ಕಾಣಿಸಿ ಕೊಳ್ಳಲಿದ್ದು, ಸಂಧಿವಾತ ನಿವಾರಣೆಗೆ ಅರಿಶಿನ ಜೀರಿಗೆ ಕಷಾಯ ಹೇಗೆ ತಯಾರಿಸಬೇಕು ಎಂಬ ಮಾಹಿತಿ ಈ ವಿಡಿಯೋದಲ್ಲಿದೆ..

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.