ಒಗ್ಗರಣೆಗೆ ಮಾತ್ರ ಸೀಮಿತವಲ್ಲದ ಜೀರಿಗೆಯ ಅದ್ಭುತ ಪ್ರಯೋಜನಗಳೇನು ಗೊತ್ತೇ? ಇಲ್ಲಿದೆ ಉಪಯುಕ್ತ ಮಾಹಿತಿ

ಜೀರಿಗೆಯ ಅದ್ಭುತ ಪ್ರಯೋಜನಗಳು:- 1) ಚೆನ್ನಾಗಿ ಹಣ್ಣಾದ ಹೇರಳೇ ಹಣ್ಣನ್ನು ಎರಡು ಹೋಳು ಮಾಡಿ ಅದಕ್ಕೆ ಜೀರಿಗೆ ಪುಡಿಯನ್ನು ತುಂಬಿ ಒಂದು ರಾತ್ರಿ ಅದನ್ನು ಇಬ್ಬನಿ ಬೀಳುವ ಜಾಗದಲ್ಲಿಟ್ಟು ಮಾರನೆಯ ದಿನ ಬರಿಯ ಹೊಟ್ಟೆಯಲ್ಲಿ…

ಜೀರಿಗೆಯ ಅದ್ಭುತ ಪ್ರಯೋಜನಗಳು:-

1) ಚೆನ್ನಾಗಿ ಹಣ್ಣಾದ ಹೇರಳೇ ಹಣ್ಣನ್ನು ಎರಡು ಹೋಳು ಮಾಡಿ ಅದಕ್ಕೆ ಜೀರಿಗೆ ಪುಡಿಯನ್ನು ತುಂಬಿ ಒಂದು ರಾತ್ರಿ ಅದನ್ನು ಇಬ್ಬನಿ ಬೀಳುವ ಜಾಗದಲ್ಲಿಟ್ಟು ಮಾರನೆಯ ದಿನ ಬರಿಯ ಹೊಟ್ಟೆಯಲ್ಲಿ ಅದರ ರಸವನ್ನು ಹಿಂಡಿ ಕುಡಿದರೆ ಪಿತ್ತ ರಾಂತಿಯಾಗುವುದು, ಹೊಟ್ಟೆ ನೋವು ಕಡಿಮೆಯಾಗುವುದು. ಈ ರಸವನ್ನು ಹದಿನೈದು ದಿನಗಳ ವರೆಗೆ ಸೇವಿಸುತ್ತಾ ಬಂದರೆ ಅರಿಶಿನ ಕಾಮಾಲೆ ರೋಗ ಗುಣವಾಗುತ್ತದೆ.

2) ಜೀರಿಗೆ, ಸಕ್ಕರೆ, ಒಣಶುಂಠಿ ಮತ್ತು ಅಡುಗೆ ಉಪ್ಪು ಇವುಗಳನ್ನು ಒಂದೊಂದು ಟೀ ಚಮಚ ತೆಗೆದುಕೊಂಡು ನುಣ್ಣಗೆ ಪುಡಿ ಮಾಡಿ ಒಂದು ಲೋಟ ಬಿಸಿ ನೀರಿಗೆ ಈ ಪುಡಿಯನ್ನು ಹಾಕಿ ಒಂದು ಹೋಳು ನಿಂಬೆಹಣ್ಣು ಅದಕ್ಕೆ ಹಿಂಡಿ ಕುಡಿಯುವುದರಿಂದ ಹೊಟ್ಟೆ ನೋವು ಗುಣವಾಗುತ್ತದೆ.

Vijayaprabha Mobile App free

3) ಪರಂಗಿಕಾಯಿಯ ಹೋಳುಗಳಿಗೆ ಜೀರಿಗೆ, ಕಾಳು ಮೆಣಸಿನ ಪುಡಿ ಬೆರೆಸಿ ಅದಕ್ಕೆ ಉಪ್ಪು ಮತ್ತು ನಿಂಬೆ ರಸ ಸೇರಿಸಿ ಚೆನ್ನಾಗಿ ಕಲಸಿ ತಿಂದರೆ ಮಲಬದ್ಧತೆ ನಿವಾರಣೆ ಯಾಗುವುದು, ಜಂತುಹುಳುಗಳು ನಾಶವಾಗುವುದು ಮತ್ತು ಜೀರ್ಣಶಕ್ತಿ ವೃದ್ಧಿ ಯಾಗುವುದು.

4) ಜೀರಿಗೆಯನ್ನು ನುಣ್ಣಗೆ ಅರೆದು ಹಾಲಿನಲ್ಲಿ ಕದಡಿ ತಲೆಗೆ ತಿಕ್ಕಿಕೊಂಡು ಸ್ನಾನ ಮಾಡುವುದರಿಂದ ತಲೆಯಲ್ಲಿ ಹೊಟ್ಟು ಬರುವುದು ಕಡಿಮೆಯಾಗುವುದು.

5) ಜೀರಿಗೆಯನ್ನು ನುಣ್ಣಗೆ ಪುಡಿ ಮಾಡಿ ತೆಂಗಿನಕಾಯಿ ಹಾಲಿನಲ್ಲಿ ಬೆರಸಿ ಮೈಗೆ ಹಚ್ಚಿಕೊಂಡು ಅರ್ಧಗಂಟೆ ಬಿಟ್ಟು ಬಿಸಿ ನೀರಿನಿಂದ ಸ್ನಾನ ಮಾಡಿದರೆ ಬೆವರು ಗುಳ್ಳೆಗಳು ಬರುವುದಿಲ್ಲ,

6) ಜೀರಿಗೆಯನ್ನು ಬಾಯಲ್ಲಿ ಹಾಕಿಕೊಂಡು ಚೆನ್ನಾಗಿ ಹಗೆದು ತಿನ್ನುವುದರಿಂದ ಹಲ್ಲು ನೋವು ಕಡಿಮೆಯಾಗುವುದು ಮತ್ತು ಜೀರ್ಣಶಕ್ತಿ ಅಧಿಕವಾಗುವುದು.

7) ಜೀರಿಗೆ ಕಷಾಯಕ್ಕೆ ಹಾಲು, ಜೇನುತುಪ್ಪ ಬೆರೆಸಿ ಗರ್ಭಧಾರಣೆ ಕಾಲದಲ್ಲಿ ಪ್ರತಿದಿನ ಸೇವಿಸಿದರೆ ಎದೆಹಾಲು ಅಧಿಕವಾಗುವುದು.

8) ಮಜ್ಜಿಗೆಗೆ ಜೊತೆ ಜೀರಿಗೆ ಪುಡಿ ಮತ್ತು ಉಪ್ಪು ಸೇರಿಸಿ ಕುಡಿದರೆ ಪಿತ್ತ ಶಮನವಾಗುವುದು.

9) ಒಂದು ಟೀ ಚಮಚ ಹುಣಸೆ ಗೊಜ್ಜಿನಲ್ಲಿ ಅರ್ಧ ಟೀ ಚಮಚ ಜೀರಿಗೆ ಪುಡಿಯನ್ನು ಹಾಕಿ ಜೇನುತುಪ್ಪ ಜೊತೆಯಲ್ಲಿ ಸೇವಿಸಿದರೆ ಆಮಶಂಕೆ ಮತ್ತು ಅರಿಶಿನ ಕಾಮಾಲೆ ರೋಗ ನಿವಾರಣೆಯಾಗುವುದು,

10) ಅರ್ಧ ಬಟ್ಟಲು ತಣ್ಣನೆಯ ನೀರಿಗೆ ಒಂದು ಟೀ ಚಮಚ ಜೀರಿಗೆ ಮತ್ತು ಎರಡು ಏಲಕ್ಕಿಯನ್ನು ಪುಡಿ ಮಾಡಿ ಹಾಕಿ, ಅದಕ್ಕೆ ಒಂದು ಹೋಳು ನಿಂಬೆ ಹಣ್ಣನ್ನು ಹಿಂಡಿ ಅದನ್ನು ದಿನಕ್ಕೆ ಮೂರು-ನಾಲ್ಕು ಬಾರಿ ಸೇವಿಸಿದರೆ ಹೊಟ್ಟೆ ತೊಳೆಸುವುದು ಮತ್ತು ವಾಂತಿಯಾಗುವುದು ನಿಲ್ಲುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.