ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ರಾಮಬಾಣವಾದ ಶುಂಠಿಯ ಅದ್ಭುತ ಪ್ರಯೋಜನಗಳು

ಶುಂಠಿಯ ಅದ್ಭುತ ಪ್ರಯೋಜನಗಳು :-  1)  ಒಂದು ಅಂಗುಲ ಉದ್ದ ಹಸಿ ಶುಂಠಿಯನ್ನು ಸ್ವಲ್ಪ ನೀರಿನೊಂದಿಗೆ ಚೆನ್ನಾಗಿ ಅರೆದು ಒಂದು ಬಟ್ಟಲು ನೀರಿನಲ್ಲಿ ಬೆರೆಸಿ ಶೋಧಿಸಿ ನಂತರ ರುಚಿಗೆ ತಕ್ಕಷ್ಟು ನಿಂಬೆರಸ ಮತ್ತು ಜೇನುತುಪ್ಪ…

ginger vijayaprabha

ಶುಂಠಿಯ ಅದ್ಭುತ ಪ್ರಯೋಜನಗಳು :- 

1)  ಒಂದು ಅಂಗುಲ ಉದ್ದ ಹಸಿ ಶುಂಠಿಯನ್ನು ಸ್ವಲ್ಪ ನೀರಿನೊಂದಿಗೆ ಚೆನ್ನಾಗಿ ಅರೆದು ಒಂದು ಬಟ್ಟಲು ನೀರಿನಲ್ಲಿ ಬೆರೆಸಿ ಶೋಧಿಸಿ ನಂತರ ರುಚಿಗೆ ತಕ್ಕಷ್ಟು ನಿಂಬೆರಸ ಮತ್ತು ಜೇನುತುಪ್ಪ ಸೇರಿಸಿ ಸೇವಿಸಿದರೆ ಅಜೀರ್ಣ ನಿವಾರಣೆಯಾಗುತ್ತದೆ.

2) ಒಂದು ಟೀ ಚಮಚ ಒಣಶುಂಠಿ ಚೂರ್ಣ ವನ್ನು ಆಗ ತಾನೇ ಹಿಂಡಿದ ಒಂದು ಬಟ್ಟಲು ಹಸುವಿನ ಹಾಲಿನಲ್ಲಿ ಬೆರೆಸಿ ಸೇವಿಸುತ್ತಾ ಬಂದರೆ ಅರಿಶಿನ ಕಾಮಾಲೆ ಗುಣವಾಗುತ್ತದೆ.

Vijayaprabha Mobile App free

3) ಹಸಿ ಶುಂಠಿಯನ್ನು ನೀರಿನಲ್ಲಿ ತೇದು ಆ ಗಂಧವನ್ನು ಹಣೆಗೆ ಹಚ್ಚಿ ಬೆಚ್ಚಗೆ ಹೊದ್ದು ಮಲಗಿದರೆ ಬೆವರು ಸುರಿದು ಸಾಮಾನ್ಯ ತಲೆನೋವು ನಿವಾರಣೆಯಾಗುವುದು,

4) ಒಣ ಶುಂಠಿಯನ್ನು ಹಸುವಿನ ಹಾಲಿನಲ್ಲಿ ತೇದು ಆ ಗಂಧವನ್ನು ಹಣೆಗೆ ಪಟ್ಟು ಹಾಕುವುದರಿಂದ ತಲೆನೋವು ಗುಣವಾಗುವುದು.

5)  ಹಸಿ ಶುಂಠಿ ಕಷಾಯ ತಯಾರಿಸಿ ಸಕ್ಕರೆ ಬೆರೆಸಿ ದಿನಕ್ಕೆ ಮೂರು ಬಾರಿ ಎರಡು ದಿನಗಳ ಕಾಲ ಸೇವಿಸುತ್ತಾ ಬಂದರೆ ಶೀತದಿಂದ ಉಂಟಾಗುವ ನೆಗಡಿ ಕೆಮ್ಮು ನಿವಾರಣೆಯಾಗುವುದು.

6) ಒಂದು ಚೂರು ಹಸಿ ಶುಂಠಿ, ಒಂದು ಲವಂಗ ಮತ್ತು ಒಂದೆರಡು ಕಲ್ಲು ಉಪ್ಪು ಅಗಿದು ಚಪ್ಪರಿಸಿದರೆ ಒಡೆದಿರುವ ಗಂಟಲು ಗುಣವಾಗುವುದು.

7) ಶುಂಠಿ ರಸವನ್ನು ಜೇನುತುಪ್ಪದೊಂದಿಗೆ ಎಳೆ ಮಕ್ಕಳಿಗೆ ಕುಡಿಯುವುದರಿಂದ ಕರುಳಿಗೆ ಸಂಬಂಧಿಸಿದ ತೊಂದರೆ ನಿವಾರಣೆಯಾಗುವುದು.

8) ದಿನವೂ ಶುಂಠಿಯನ್ನು ಬಳಸುತ್ತಿದ್ದರೆ ಕರುಳು ಮತ್ತು ಜಠರದಲ್ಲಿನ ರೋಗಾಣುಗಳು ನಾಶವಾಗುತ್ತವೆ.

9) ತರಕಾರಿಗಳೊಂದಿಗೆ ಶುಂಠಿಯನ್ನು ಸೇರಿಸಿ ಊಟ ಮಾಡುವುದರಿಂದ ಗ್ಯಾಸ್ ಟ್ರಬಲ್ ಉಂಟಾಗುವುದಿಲ್ಲ,

10) ಶುಂಠಿಯನ್ನು ಕೆಂಡದ ಮೇಲೆ ಸುಟ್ಟು ನಂತರ ಪುಡಿ ಮಾಡಿ ಅದಕ್ಕೆ ಉಪ್ಪಿನ ಪುಡಿ ಸೇರಿಸಿ ವಸಡು ಮತ್ತು ಹಲ್ಲನ್ನು ತಿಕ್ಕುವುದರಿಂದ ಹಲ್ಲು ನೋವು ಶಮನವಾಗುತ್ತದೆ.

11) ಊಟಕ್ಕೆ ಮುಂಚೆ ಕಡಲೆ ಕಾಳಷ್ಟು ಗಾತ್ರ ಹಸಿ ಶುಂಠಿಯನ್ನು ನಾಲ್ಕು ಹರಳು ಉಪ್ಪು ಸಹಿತ ಅಗಿದು ತಿಂದರೆ ಅಜೀರ್ಣ ನಿವಾರಣೆಗೆ ವುದು.

12) ಹಸಿ ಶುಂಠಿ ಕಷಾಯ ತಯಾರಿಸಿ ದಿನಕ್ಕೆ ಎರಡು ಬಾರಿ ಸೇವಿಸುವುದರಿಂದ ದೇಹಾಲಸ್ಯ ಮತ್ತು ನೆಗಡಿ ದೂರವಾಗುತ್ತದೆ.

13) ಊಟವಾದ ನಂತರ ಒಂದು ಚೂರು ಹಸಿರುಂಠಿಯನ್ನು ಅಗಿದು ಚಪ್ಪರಿಸುವ ಅಭ್ಯಾಸವಿರಿಸಿಕೊಂಡರೆ ಅಜೀರ್ಣ ಹೊಟ್ಟೆ ಉಬ್ಬರ ಇರುವುದಿಲ್ಲ.

ಇದನ್ನು ಓದಿ: ಈರುಳ್ಳಿ ಕಣ್ಣಲ್ಲಿ ನೀರು ತರಿಸಿದರೂ, ಆಯುರ್ವೇದದ ಪ್ರಕಾರ ಈರುಳ್ಳಿ ತಿನ್ನುವುದರಿಂದ ಶರೀರಕ್ಕೆ ಆಗುವ ಲಾಭಗಳೇನು ಗೊತ್ತಾ?

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.