ಊಟದ ಬಳಿಕ ಮಾಡಬಾರದ 4 ಕಾರ್ಯಗಳು:
1. ತಣ್ಣನೆಯ ನೀರು ಕುಡಿಯಬಾರದು: ಊಟವಾದ ಬಳಿಕ ತಣ್ಣನೆಯ ನೀರು ಕುಡಿಯಬಾರದು. ಇದರಿಂದ ಜೀರ್ಣ ಬೇಗ ಆಗುವುದಿಲ್ಲ. ಆದ್ದರಿಂದ ಬಿಸಿ ನೀರು ಕುಡಿಯುವುದು ಒಳ್ಳೆಯದು.
2. ತಕ್ಷಣ ನಿದ್ದೆ ಮಾಡಬಾರದು: ಊಟವಾದ ಬಳಿಕ ತಕ್ಷಣ ಮಲಗಬಾರದು. ಇದರಿಂದ ಸ್ಥೂಲಕಾಯ ಉಂಟಾಗುತ್ತದೆ.
3. ಧೂಮಪಾನ ಮಾಡಬಾರದು: ಊಟದ ಬಳಿಕ ಯಾವುದೇ ಕಾರಣಕ್ಕೂ ಮಾಡಬಾರದು. ಇದರಿಂದ ಅಲ್ಸರ್, ಕ್ಯಾನ್ಸರ್ ಸಮಸ್ಯೆಗಳು ಉಂಟಾಗುತ್ತದೆ.
4. ಊಟ ಮಾಡಿದ ತಕ್ಷಣ ಹಣ್ಣುಗಳನ್ನು ತಿನ್ನಬಾರದು: ಊಟವಾದ ತಕ್ಷಣ ಹಣ್ಣುಗಳನ್ನು ತಿನ್ನುವುದು ಒಳ್ಳೆಯ ಅಭ್ಯಾಸವಲ್ಲ. ಊಟಕ್ಕೆ ಅರ್ಧ ಗಂಟೆ ಮೊದಲು ಅಥವಾ ಊಟವಾದ ಅರ್ಧ ಗಂಟೆಯ ಬಳಿಕ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.