ಕೆಲವು ಹಿಂದೂ ಸಂಪ್ರದಾಯಗಳಲ್ಲಿ, ಕೆಲವು ವಾರದ ದಿನಗಳಲ್ಲಿ (ವಿಶೇಷವಾಗಿ ಮಂಗಳವಾರಗಳು) ಮತ್ತು ಏಕಾದಶಿಯಂತಹ ಪವಿತ್ರ ದಿನಗಳಲ್ಲಿ ಮಹಿಳೆಯರು ತಲೆ ಸ್ನಾನ ಮಾಡುವುದನ್ನು ತಪ್ಪಿಸುತ್ತಾರೆ, ಏಕೆಂದರೆ ಅದು ಅಶುಭವಾಗಬಹುದು, ಆಧ್ಯಾತ್ಮಿಕ ಶಕ್ತಿಯನ್ನು ಅಡ್ಡಿಪಡಿಸಬಹುದು ಅಥವಾ ನಕಾರಾತ್ಮಕ ಪೌರಾಣಿಕ ಸಂಬಂಧಗಳನ್ನು ಹೊಂದಿರುತ್ತದೆ ಎಂಬ ನಂಬಿಕೆಯಿದೆ.
ಸೋಮವಾರ
ಧಾರ್ಮಿಕ ಗ್ರಂಥಗಳ ಪ್ರಕಾರ, ವಿವಾಹಿತ ಮಹಿಳೆಯರು ಸೋಮವಾರ ತಲೆ ಸ್ನಾನ ಮಾಡಬಾರದು ಎನ್ನಲಾಗಿದ್ದು, ಇದು ಕುಟುಂಬದ ಪ್ರಗತಿಯಲ್ಲಿ ಅಡಚಣೆ ಉಂಟು ಮಾಡುತ್ತದೆ ಎನ್ನಲಾಗುತ್ತದೆ. ಆದರೆ ಅವಿವಾಹಿತ ಹುಡುಗಿಯರು ಈ ದಿನ ತಲೆ ಸ್ನಾನ ಮಾಡಬಹುದು.
ಮಂಗಳವಾರ
ಮಂಗಳವಾರ ವಿವಾಹಿತ ಮಹಿಳೆಯರಿಗೆ ತಲೆ ಸ್ನಾನ ನಿಷಿದ್ದ. ಈ ದಿನ ಕೂದಲು ತೊಳೆದರೆ ತಮ್ಮ ಮನೆಗೆ ನಕಾರಾತ್ಮಕತೆಯನ್ನು ಆಹ್ವಾನಿಸಿದ೦ತೆ ಎ೦ದು ಹೇಳಲಾಗುತ್ತದೆ. ಅಲ್ಲದೆ ಅವಿವಾಹಿತೆಯರು ಕೂಡಾ ಮ೦ಗಳವಾರದಂದು ತಮ್ಮ ಕೂದಲನ್ನು ತೊಳೆಯಬಾರದು.
ಗುರುವಾರ
ಗುರುವಾರ ಯಾರೂ ತಲೆಗೆ ಸ್ನಾನ ಮಾಡಲೇಬಾರದು ಎಂದು ಧರ್ಮ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಈ ದಿನ ಕೂದಲು ತೊಳೆಯುವುದರಿಂದ ಆಯಸ್ಸು ಕಡಿಮೆಯಾಗುತ್ತದೆ ಮತ್ತಿ ಆರ್ಥಿಕ ಮುಗ್ಗಟ್ಟು ಕೂಡಾ ಎದುರಿಸಬೇಕಾಗುತ್ತದೆ ಎ೦ದು ಹೇಳಲಾಗುತ್ತದೆ.
ಶನಿವಾರ
ಶನಿವಾರದಂದು ಕೂಡಾ ಮಹಿಳೆಯರು ಕೂದಲು ತೊಳೆಯಬಾರದು ಎನ್ನಲಾಗುತ್ತದೆ. ವಿಶೇಷವಾಗಿ ವಿವಾಹಿತ ಮಹಿಳೆಯರು ಈ ದಿನ ಕೂದಲು ತೊಳೆದರೆ ಶನಿದೇವನ ಕೋಪಕ್ಕೆ ಕಾರಣವಾಗುತ್ತದೆ ಎ೦ದು ಹೇಳಲಾಗುತ್ತದೆ.
ಭಾನುವಾರ
ಭಾನುವಾರ ರಜಾ ದಿನವಾಗಿರುವುದರಿಂದ ಹೆಚ್ಚಿನವರು ತಲೆ ಸ್ನಾನ ಮಾಡುತ್ತಾರೆ. ಆದರೆ ವಿವಾಹಿತ ಮಹಿಳೆಯರು ಈ ದಿನ ತಲೆ ಸ್ನಾನ ಮಾಡಬಾರದು. ಅಲ್ಲದೆ, ವಿವಾಹಿತ ಮಹಿಳೆಯರು ಅಮವಾಸ್ಯೆ, ಹುಣ್ಣಿಮೆ ಮತ್ತು ಏಕಾದಶಿಯ ದಿನವೂ ತಮ್ಮ ಕೂದಲನ್ನು ತೊಳೆಯಬಾರದು ಎ೦ದು ಹೇಳಲಾಗುತ್ತದೆ.




