Vastu Shastra | ವಾಸ್ತು ಶಾಸ್ತ್ರದ ಮಾಹಿತಿ

Vastu Shastra : ಗ್ರಹ ನಿರ್ಮಾಣಕ್ಕೆ ವಾಸ್ತು ಶಾಸ್ತ್ರದ ಅನ್ವಯ ಇರುವ ವಿಶಾಲವಾದ ಉತ್ತಮ ನಿವೇಶನವನ್ನು ಪರಿಣಿತರ ಸಲಹೆ ಪಡೆದು ಆಯ್ಕೆ ಮಾಡಿಕೊಳ್ಳಬೇಕು. ನಿವೇಶನವು ಚಚೌಕ್, ಇಲ್ಲವೇ ಆಯತಾಕಾರದಲ್ಲಿ ಇರಬೇಕು. ನಿವೇಶನದ ಮೂಲೆಗಳು ವೃತ್ತಾಕಾರದಲ್ಲಿ…

Vastu Shastra

Vastu Shastra : ಗ್ರಹ ನಿರ್ಮಾಣಕ್ಕೆ ವಾಸ್ತು ಶಾಸ್ತ್ರದ ಅನ್ವಯ ಇರುವ ವಿಶಾಲವಾದ ಉತ್ತಮ ನಿವೇಶನವನ್ನು ಪರಿಣಿತರ ಸಲಹೆ ಪಡೆದು ಆಯ್ಕೆ ಮಾಡಿಕೊಳ್ಳಬೇಕು. ನಿವೇಶನವು ಚಚೌಕ್, ಇಲ್ಲವೇ ಆಯತಾಕಾರದಲ್ಲಿ ಇರಬೇಕು. ನಿವೇಶನದ ಮೂಲೆಗಳು ವೃತ್ತಾಕಾರದಲ್ಲಿ ಇರಲೇಬಾರದು. ಸಮಕೋನ (90′) ದಲ್ಲಿ ಇರಬೇಕು. ಉತ್ತರ ದಕ್ಷಿಣ ದಿಕ್ಕುಗಳಲ್ಲಿ ಉದ್ದ ಹೆಚ್ಚಾಗಿರುವ ನಿವೇಶನಕ್ಕೆ “ಚಂದ್ರವೇದಿ” ನಿವೇಶನ ಎನ್ನುತ್ತಾರೆ. ಇದು ಸ್ತ್ರೀ ಪ್ರಧಾನವಾಗಿದ್ದು ಉತ್ತಮ ನಿವೇಶನ ವಾಗಿರುತ್ತದೆ. ಪೂರ್ವ ಪಶ್ಚಿಮ ದಿಕ್ಕುಗಳಲ್ಲಿ ಉದ್ದ ಹೆಚ್ಚಾಗಿರುವ ನಿವೇಶನಕ್ಕೆ ” ಸೂರ್ಯವೇದಿ ” ನಿವೇಶನವೆನ್ನುತ್ತಾರೆ. ಇದು ಪುರುಷ ಪ್ರಧಾನ ನಿವೇಶನವಾಗಿದ್ದು ಉತ್ತಮ ಲಾಭ ಹಾಗೂ ಪ್ರಗತಿಗೆ ಪೂರಕವಾಗಿ ಬಲವರ್ದಿಸುವ ನಿವೇಶನವಾಗಿರುತ್ತದೆ. ನಿವೇಶನದ ಉತ್ತರ ದಕ್ಷಿಣ ದಿಕ್ಕುಗಳ ಉದ್ದವು, ಪೂರ್ವ ಪಶ್ಚಿಮ ದಿಕ್ಕುಗಳ ಉದ್ದಕ್ಕಿಂತ ಹೆಚ್ಚಾಗಿರಬೇಕು ಇದು ಉತ್ತಮ ನಿವೇಶನದ ಮುಖ್ಯ ಲಕ್ಷಣವಾಗಿರುತ್ತದೆ.

ವೃತ್ತ, ತ್ರಿಭುಜ, ಪಂಚ ಭುಜ, ಸಪ್ತ ಭುಜ, ಮತ್ತು ಇದಕ್ಕಿಂತಲೂ ಹೆಚ್ಚು ಬೆಸ ಸಂಖ್ಯೆ ಭುಜಗಳಿರುವ ಅಸಮಾನ ಮತ್ತು ವಿಷಮಕಾರದ ನಿವೇಶನಗಳು ಪ್ರಶಸ್ತವಲ್ಲ. ಇಂತಹ ನಿವೇಶನಗಳನ್ನು ವಾಸ್ತು ಪ್ರಕಾರ ಸರಿಪಡಿಸಿಕೊಂಡು ನಿರ್ಮಾಣ ಮಾಡಿದರೆ ದೋಷವಿರುವುದಿಲ್ಲ. ಸಮಸಂಖ್ಯೆ ಭುಜಗಳಿರುವ 90′ ಮೂಲೆಗಳಿರುವ ನಿವೇಶನಗಳು ಉತ್ತಮವಾಗಿರುತ್ತದೆ.

ನಿವೇಶನವು ಸಮತಟ್ಟಾಗಿದ್ದು ಉತ್ತರ ಮತ್ತು ಪೂರ್ವ ದಿಕ್ಕುಗಳ ಕಡೆಗೆ ನೀರು ಹರಿಯುವಂತೆ ಇಳಿಜಾರವಾಗಿರಬೇಕು. ನಿವೇಶನದ ನೆಲದ ಮಟ್ಟವು ಪಶ್ಚಿಮ ದಕ್ಷಿಣ ದಿಕ್ಕುಗಳಲ್ಲಿ ಎತ್ತರವಾಗಿದ್ದು ಪೂರ್ವ ಉತ್ತರ ದಿಕ್ಕುಗಳಲ್ಲಿ ತಗ್ಗಾಗಿರಬೇಕು. ನಿವೇಶನಕ್ಕೆ ಉತ್ತರ ಮತ್ತು ಪೂರ್ವದಲ್ಲಿರುವ ರಸ್ತೆಗಳ ಮಟ್ಟವು, ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನ ರಸ್ತೆಗಳ ಮಟ್ಟಕ್ಕಿಂತ ತಗ್ಗಾಗಿರಬೇಕು.

Vijayaprabha Mobile App free

ನಿವೇಶನಕ್ಕೆ ಯಾವ ದಿಕ್ಕು ಕಡಿತಗೊಂಡಿರಬಾರದು. ಮತ್ತು ಬೆಳೆದಿರಬಾರದು. ಆದರೆ ನಿವೇಶನ ಈಶಾನ್ಯದಲ್ಲಿ ಮಾತ್ರ ಸ್ವಲ್ಪ ಬೆಳೆದರೆ ಬಹಳ ಒಳ್ಳೆಯದು. ನೈರುತ್ಯ ಮೂಲೆ ಸ್ವಲ್ಪ ಮೊಂಡಾದರೆ ಬಾಧೆ ಇಲ್ಲ,ಒಳ್ಳೆಯದು.

ನಿವೇಶನದ ಭೂಮಿ ಮಸಾರಿ, ಕೆಂಪು, ಗೋಚುಗಳಿಂದ ಕೂಡಿದ್ದು ಗಟ್ಟಿಯಾಗಿರಬೇಕು. ಎರೆಭೂಮಿ, ಜೇಡಿ ಮಣ್ಣು, ಇರುವ ನಿವೇಶನಗಳು ಗೃಹ ನಿರ್ಮಾಣಕ್ಕೆ ಯೋಗ್ಯವಲ್ಲ.

ಶ್ರೀ ಸೋಮಶೇಖರ್ ಗುರೂಜಿ B.Sc

Mob.No.9353488403

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.