Vastu Shastra | ನಿವೇಶನದ ಸುತ್ತಲೂ ಎಷ್ಟು ರಸ್ತೆಗಳಿವೆ ? ಅವು ಯಾವ ಯಾವ ದಿಕ್ಕುಗಳಲ್ಲಿ ಇವೆ ? ನಿವೇಶನದ ನೆಲದ ಮಟ್ಟವು ಹೇಗಿದೆ ? ಎಂಬುವುದನ್ನು ಪರಿಗಣಿಸಿ ನಿವೇಶನಗಳನ್ನು ವರ್ಗೀಕರಿಸುತ್ತಾರೆ. ಅವು ನಾಲ್ಕು ವರ್ಗದ ನಿವೇಶನಗಳಾಗಿರುತ್ತವೆ. ಅವು :
ಪ್ರಥಮ್ ವರ್ಗದ ನಿವೇಶನಗಳು :
1) ನಾಲ್ಕು ದಿಕ್ಕುಗಳಲ್ಲಿ ರಸ್ತೆಗಳಿರುವ ನಿವೇಶನ ಉತ್ತಮವಾದದ್ದು ಇದರ ಪೂರ್ವ ಮತ್ತು ಉತ್ತರ ದಿಕ್ಕುಗಳ ರಸ್ತೆಗಳು ನಿವೇಶನದ ನೆಲದ ಮಟ್ಟಕ್ಕಿಂತಲೂ ತಗ್ಗಾಗಿ ಇರಬೇಕು. ಪಶ್ಚಿಮ ಮತ್ತು ದಕ್ಷಿಣ ದಿಕ್ಕುಗಳ ರಸ್ತೆಗಳು ನಿವೇಶನದ ನೆಲದ ಮಟ್ಟಕ್ಕಿಂತಲೂ ಎತ್ತರವಾಗಿ ಇರಬೇಕು. ಮತ್ತು ನಿವೇಶನವು ಈಶಾನ್ಯದಲ್ಲಿ ಬೆಳೆದಿರಬೇಕು.
2) ನಿವೇಶನಕ್ಕೆ ಪೂರ್ವ, ಉತ್ತರ ಮತ್ತು ಪಶ್ಚಿಮ ಈ ಮೂರು ದಿಕ್ಕುಗಳಲ್ಲಿ ರಸ್ತೆಗಳು ಇರಬೇಕು. ಪೂರ್ವ ಮತ್ತು ಉತ್ತರ ದಿಕ್ಕುಗಳಲ್ಲಿರುವ ರಸ್ತೆಗಳು ನಿವೇಶನದ ನೆಲದ ಮಟ್ಟಕ್ಕಿಂತಲೂ ತಗ್ಗಾಗಿ ಇರಬೇಕು. ಪಶ್ಚಿಮ ದಿಕ್ಕಿನ ರಸ್ತೆಯು ನಿವೇಶನದ ನೆಲದ ಮಟ್ಟಕ್ಕಿಂತಲೂ ಎತ್ತರವಾಗಿ ಇರಬೇಕು. ನಿವೇಶನದ ನೈರುತ್ಯ ಭಾಗವು, ಈಶಾನ್ಯದ ಭಾಗಕ್ಕಿಂತ ಎತ್ತರವಾಗಿರಬೇಕು. ನಿವೇಶನದ ಪೂರ್ವ ಈಶಾನ್ಯ ಮತ್ತು ಉತ್ತರ ಈಶಾನ್ಯ ಭಾಗವು ರಸ್ತೆಗಳ ಕಡೆಗೆ ಬೆಳೆದಿರಬೇಕು.
3) ನಿವೇಶನಕ್ಕೆ ಉತ್ತರ ಮತ್ತು ಪೂರ್ವ ದಿಕ್ಕುಗಳಲ್ಲಿ ರಸ್ತೆಗಳು ಇರಬೇಕು. ನಿವೇಶನದ ನೆಲದ ಮಟ್ಟಕ್ಕಿಂತ ಈ ರಸ್ತೆಗಳ ಮಟ್ಟವು ತಗ್ಗಾಗಿ ಇರಬೇಕು. ನಿವೇಶನದಲ್ಲಿ ನೈರುತ್ಯ ಭಾಗದ ಮಟ್ಟವು, ಈಶಾನ್ಯ ಭಾಗದ ಮಟ್ಟಕ್ಕಿಂತ ಎತ್ತರವಾಗಿ ಇರಬೇಕು. ಪೂರ್ವ ಇಲ್ಲವೇ ಉತ್ತರ ದಿಕ್ಕಿಗೆ ನಿವೇಶನ ಬೆಳೆದಿರಬೇಕು. ಇವು ಈಶಾನ್ಯದ ನಿವೇಶನಗಳಾಗಿರುತ್ತವೆ.
4) ನಿವೇಶನಕ್ಕೆ ಉತ್ತರ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ರಸ್ತೆಗಳು ಇರಬೇಕು. ನಿವೇಶನದ ನೆಲದ ಮಟ್ಟಕ್ಕಿಂತ, ಪಶ್ಚಿಮ ದಿಕ್ಕಿನ ರಸ್ತೆಯ ನೆಲದ ಮಟ್ಟವು ಎತ್ತರವಾಗಿ ಇರಬೇಕು. ನಿವೇಶನದ ನೆಲದ ಮಟ್ಟಕ್ಕಿಂತ ಉತ್ತರ ದಿಕ್ಕಿನ ರಸ್ತೆಯ ನೆಲದ ಮಟ್ಟವು ತಗ್ಗಾಗಿ ಇರಬೇಕು. ನಿವೇಶನದಲ್ಲಿ ನೈರುತ್ಯ ಭಾಗದ ಮಟ್ಟವು, ಈಶಾನ್ಯ ಭಾಗದ ಮಟ್ಟಕ್ಕಿಂತ ಎತ್ತರವಾಗಿ ಇರಬೇಕು. ನಿವೇಶನವು ಉತ್ತರ ಇಲ್ಲವೇ ಪೂರ್ವ ದಿಕ್ಕಿಗೆ ಬೆಳೆದಿರಬೇಕು. ಇವು ವಾಯುವ್ಯದ ನಿವೇಶನಗಳಾಗಿರುತ್ತವೆ.
ಮೇಲಿನ ಒಂದ ರಿಂದ ನಾಲ್ಕರವರೆಗಿನ ನಿವೇಶನಗಳು ಅತ್ಯುತ್ತಮ ಫಲ ಕೊಡುವ ಪ್ರಥಮ ವರ್ಗದ ನಿವೇಶನಗಳಾಗಿರುತ್ತವೆ.
ಪೂರ್ವ ಮತ್ತು ಉತ್ತರದ ರಸ್ತೆಗಳು ನಿವೇಶನದ ನೆಲದ ಮಟ್ಟಕ್ಕಿಂತಲೂ ಎತ್ತರ ಬಿದ್ದಾಗ ವಾಸ್ತು ಪ್ರಕಾರ ಶುಭಫಲಗಳಿರುವುದಿಲ್ಲ. ಈ ರಸ್ತೆಗಳಿಗಿಂತಲೂ ನಿವೇಶನವನ್ನು ಎತ್ತರ ಮಾಡಿಕೊಳ್ಳಲು ನಿವೇಶನಕ್ಕೆ ಪೂರ್ತಿಯಾಗಿ ಹೊರಗಿನ ಮಣ್ಣು ತುಂಬಬೇಕು. ಹೀಗೆ ಮಣ್ಣು ಭರ್ತಿ ಮಾಡಿ ನಿಮಿಷವನ್ನು ಎತ್ತರ ಮಾಡಿಕೊಂಡು ಗ್ರಹ ನಿರ್ಮಾಣ ಮಾಡಿದರೆ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.
ಶ್ರೀ ಸೋಮಶೇಖರ್ ಗುರೂಜಿ B.Sc
Mob.No.9353488403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403




