ಭಾನುವಾರದ ರಾಶಿ ಭವಿಷ್ಯ: ಇಂದು 08 ಮಾರ್ಚ್ 2026, ಭಾನುವಾರ. ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರದ ಪಾಲ್ಗುಣ ಮಾಸದ ಪಂಚಮಿ ತಿಥಿ. ಇಂದಿನ ಗ್ರಹಗತಿಗಳ ಆಧಾರದ ಮೇಲೆ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ? ಯಾರಿಗೆ ಎಚ್ಚರಿಕೆ ಅಗತ್ಯ? ಇಲ್ಲಿದೆ ಪೂರ್ಣ ವಿವರ.
☀️ ಇಂದಿನ ಪಂಚಾಂಗ ವಿಶೇಷ
ಸಂವತ್ಸರ: ವಿಶ್ವಾವಸು ನಾಮ ಸಂವತ್ಸರ | ಅಯಣ: ಉತ್ತರ ಅಯಣ | ಋತು: ಶಿಶಿರ ಋತು
ತಿಥಿ: ಪಂಚಮಿ (ರಾತ್ರಿ 9:14 ರವರೆಗೆ) | ನಕ್ಷತ್ರ: ಸ್ವಾತಿ (ಮಧ್ಯಾಹ್ನ 1:27 ರವರೆಗೆ)
ರಾಹು ಕಾಲ: ಸಂಜೆ 04:30 ರಿಂದ 06:00 | ಬ್ರಹ್ಮ ಮುಹೂರ್ತ: ಬೆಳಿಗ್ಗೆ 4:57 ರಿಂದ 5:45
ಅತ್ತೆ-ಸೊಸೆ ಕಿರಿಕ್ ಬ್ರೇಕ್: ಮನೆಯಲ್ಲಿ ಶಾಂತಿ ನೆಲೆಸಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಹಾಗೂ ಧನ-ಕನಕ ಸಂಪಾದನೆಗೆ ಪೂರಕ ದಿನ. ಸಂಗಾತಿಯೊಂದಿಗೆ ಮರುಮಿಲನವಾಗಲಿದ್ದು, ಮದುವೆ ಮಾತುಕತೆಗಳು ಶುಭವಾಗಲಿವೆ.
ಉದ್ಯೋಗದಲ್ಲಿ ಸ್ಥಾನಮಾನ: ಸಂಶೋಧನಾ ವಿಭಾಗದಲ್ಲಿ ಇರುವವರಿಗೆ ಹೆಚ್ಚಿನ ಅಭಿವೃದ್ಧಿ. ತಿಂಗಳಪೂರ್ತಿ ಮುನಿಸಿಕೊಂಡಿದ್ದ ದಂಪತಿಗಳು ಒಂದಾಗುವ ಇಚ್ಛೆ ವ್ಯಕ್ತಪಡಿಸುವರು. ಆರ್ಥಿಕತೆಯಲ್ಲಿ ಕೊರತೆ ಇರುವುದಿಲ್ಲ.
ಗೌರವ ಪ್ರಾಪ್ತಿ: ನೀವು ಮಾಡುವ ಸಮಾಜ ಸೇವೆಗೆ ಉತ್ತಮ ಮನ್ನಣೆ ಸಿಗಲಿದೆ. ಉದ್ಯೋಗದಲ್ಲಿ ಬಡ್ತಿ ಹಾಗೂ ಆದಾಯ ಹೆಚ್ಚಾಗುವ ಸಂಭವವಿದೆ. ತಾಯಿಯ ಮಾತಿಗೆ ಗೌರವ ನೀಡಿರಿ.
ವಿದೇಶ ಪ್ರಯಾಣ: ಉದ್ಯೋಗಕ್ಕಾಗಿ ವಿದೇಶ ಪ್ರಯಾಣದ ಯೋಗವಿದೆ. ರೈತರಿಗೆ ಬೆಳೆಗಳ ಮಾರಾಟದಲ್ಲಿ ಉತ್ತಮ ಲಾಭ ಸಿಗಲಿದೆ. ಗೃಹ ನಿರ್ಮಾಣ ಕಾರ್ಯಗಳಲ್ಲಿ ನೆಮ್ಮದಿ ಇರಲಿದೆ.
ಕಂಕಣ ಬಲ: ವಿವಾಹಾಕಾಂಕ್ಷಿಗಳಿಗೆ ಕಂಕಣ ಬಲ ಕೂಡಿ ಬರಲಿದೆ. ಹೊಸ ಯೋಜನೆಗಳಿಗೆ ಚಾಲನೆ ನೀಡಲು ಸಕಾಲ. ಸಹೋದ್ಯೋಗಿಗಳ ಸಲಹೆಗಳನ್ನು ಗಮನಿಸಿ ನಿರ್ಧಾರ ತೆಗೆದುಕೊಳ್ಳಿ.
ಸಿಹಿ ಸುದ್ದಿ: ರೈತರಿಗೆ ಮತ್ತು ವ್ಯಾಪಾರಸ್ಥರಿಗೆ ಸಿಹಿ ಸುದ್ದಿ ಸಿಗಲಿದೆ. ಆದರೆ ಹಣಕಾಸಿನ ವಿಚಾರದಲ್ಲಿ ಯಾರನ್ನೋ ನಂಬಿ ಮೋಸ ಹೋಗಬೇಡಿ. ತಾಳ್ಮೆಯೇ ನಿಮ್ಮ ಯಶಸ್ಸಿನ ಗುಟ್ಟು.
ಗೌರವ ಪ್ರಶಸ್ತಿ: ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಹೋಟೆಲ್ ಉದ್ಯಮಿಗಳಿಗೆ ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಂಭವವಿದೆ. ಜೂಜಾಟಗಳಿಂದ ದೂರವಿರಿ.
ಧನ ಲಾಭ: ವ್ಯಾಪಾರದಲ್ಲಿ ಅಲ್ಪ ಲಾಭ ದೊರೆಯಲಿದೆ. ದಾಂಪತ್ಯದಲ್ಲಿ ಪ್ರೀತಿ ಹೆಚ್ಚಲಿದೆ. ಆದರೆ ಭೂ ವ್ಯವಹಾರಗಳಲ್ಲಿ ಮಾತಿನ ಚಕಮಕಿ ಬೇಡ, ಸಂಯಮದಿಂದ ವರ್ತಿಸಿ.
ಆಶೋತ್ತರ ಈಡೇರಿಕೆ: ಮನಸ್ಸಿನಲ್ಲಿರುವ ಆಸೆಗಳು ಈಡೇರಲಿವೆ. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವಿರಿ. ಶತ್ರುಗಳ ಬಗ್ಗೆ ಎಚ್ಚರವಿರಲಿ. ಸಹೋದರನಿಂದ ಸಣ್ಣಪುಟ್ಟ ಅಶಾಂತಿ ಸಾಧ್ಯತೆ.
ಹಣಕಾಸು ಉತ್ತಮ: ಸ್ವಂತ ಉದ್ಯೋಗ ಮಾಡುವವರಿಗೆ ಲಾಭದ ದಿನ. ಹಳೆ ಆರೋಗ್ಯ ಸಮಸ್ಯೆಗಳು ಕಾಡಬಹುದು, ಎಚ್ಚರವಿರಲಿ. ಅತಿಯಾದ ಖರ್ಚು ನಿಯಂತ್ರಿಸಿ.
ಕನಸು ನನಸು: ಪರಿಶ್ರಮದಿಂದ ದೀರ್ಘಕಾಲದ ಕನಸು ನನಸಾಗಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳಿವೆ. ಆಪ್ತರಿಂದ ಲಾಭ ಪಡೆಯುವಿರಿ.
ಬಡ್ತಿ ಯೋಗ: ಸರ್ಕಾರಿ ನೌಕರರಿಗೆ ಪ್ರಗತಿ ಮತ್ತು ಬಡ್ತಿಯ ಯೋಗವಿದೆ. ಬಂಗಾರದ ಮೇಲೆ ಹೂಡಿಕೆ ಮಾಡಲು ಇದು ಅತ್ಯುತ್ತಮ ಸಮಯ. ಗೋವಿಗೆ ಆಹಾರ ನೀಡುವುದರಿಂದ ಶುಭವಾಗಲಿದೆ.
ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಸಂಪರ್ಕಿಸಿ:
ಆಚಾರ್ಯ ಸೋಮಶೇಖರ್ ಗುರೂಜಿ B.Sc
ಜ್ಯೋತಿಷ್ಯ, ವಾಸ್ತು ಮತ್ತು ಸಂಖ್ಯಾಶಾಸ್ತ್ರ ಪರಿಣಿತರು
ಮೊಬೈಲ್: 93534 88403




