Rashi bhavishya : ಗ್ರಹಗಳ ರಾಜ ಸೂರ್ಯನ ರಾಶಿ ಪರಿವರ್ತನೆ ಎನ್ನುವುದು ವೈದಿಕ ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ ಸಾಕಷ್ಟು ಮಹತ್ವವಾಗಿದ್ದು, ಸೂರ್ಯನ ಪ್ರತಿಯೊಂದು ಚಲನೆ ಮನುಷ್ಯ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ಸೂರ್ಯನ ಮೇಲೆ ಶನಿಯ ಅಶುಭ ದೃಷ್ಟಿ ಕಂಡು ಬರಲಿದ್ದು, ಡಿಸೆಂಬರ್ 15 ರ ತನಕ ಈ 3 ರಾಶಿಯವರು ಹುಷಾರಾಗಿರಬೇಕು..
ಮೇಷ ರಾಶಿ (Mesha rashi bhavishya)
ಸೂರ್ಯ ಗೋಚಾರ & ಶನಿಯ ಕಾರಣದಿಂದಾಗಿ ಈ ರಾಶಿಯವರಿಗೆ ಕಷ್ಟಗಳು ಎದುರಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ರಾಹು, ಶನಿ ಒ೦ದೇ ಸಮಯದಲ್ಲಿ ಸೂರ್ಯನನ್ನ ನೋಡುವ ಕಾರಣದಿಂದಾಗಿ ಈ ರಾಶಿಯವರಿಗೆ ಸಮಸ್ಯೆಗಳು ಹೆಚ್ಚಾಗಲಿದ್ದು, ಈ ಸಂದರ್ಭದಲ್ಲಿ ಯೋಚಿಸಿ ಹಾಗೂ ನಷ್ಟ ಅಥವಾ ರಿಸ್ಕ್ ಇಲ್ಲದಿದ್ದರೆ ಮಾತ್ರ ಹಣವನ್ನು ಹೂಡಿಕೆ ಮಾಡಿ
ಇದನ್ನೂ ಓದಿ: Panchanga | ಇಂದು ಬುಧವಾರ 04-12-2024; ಶುಭ ಮುಹೂರ್ತ, ಅಶುಭ ಮುಹೂರ್ತಗಳ ಮಾಹಿತಿ!
ಕರ್ಕಾಟಕ ರಾಶಿ ಭವಿಷ್ಯ (Karkataka rashi bhavishya)
ಈ ರಾಶಿಯವರು ಆದಷ್ಟು ಆರೋಗ್ಯದ ಬಗ್ಗೆ ಹುಷಾರಾಗಿರಿ. ಈ ಸಂದರ್ಭದಲ್ಲಿ ನೀವು ಧಾರ್ಮಿಕ ಕಾರ್ಯಕ್ರಮಗಳಿಗೆ ಅಗತ್ಯಕ್ಕಿಂತ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗಿರುವುದರಿಂದ, ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ ಭವಿಷ್ಯ (Vrishchika rashi)
ಶನಿಯ ಪ್ರಭಾವದಿಂದಾಗಿ ವೃಶ್ಚಿಕ ರಾಶಿಯವರಿಗೆ ಹಾರ್ಟ್, ಮೂಳೆ ಹಾಗೂ ಹೊಟ್ಟೆಗೆ ಸ೦ಬ೦ಧಪಟ್ಟಂತಹ ಆರೋಗ್ಯ ಸಮಸ್ಯೆಗಳು ನಿರ್ದಿಷ್ಟವಾಗಿ ಕಾಡಲಿವೆ. ಈ ಸಮಯದಲ್ಲಿ ವೃಶ್ಚಿಕ ರಾಶಿಯ ಉದ್ಯೋಗಿಗಳು ಕೆಲಸವನ್ನು ಬದಲಾಯಿಸುವ೦ತಹ ಯೋಚನೆ ಹೊಂದಿದ್ರೆ ಸ್ವಲ್ಪಮಟ್ಟಿಗೆ ಕಾಯುವುದು ಒಳ್ಳೆಯದು.
ಇದನ್ನೂ ಓದಿ: Rashi bhavishya | ಇಂದಿನ ರಾಶಿ ಭವಿಷ್ಯ; 04-12-2024 ಬುಧವಾರ